ನವ ದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಬುಧವಾರ ನಡೆದ ಏಕ ದಿನ ವಿಶ್ವ ಕಪ್ ಪಂದ್ಯದಲ್ಲಿ ಅಪಫಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ತಂಡದ ಸುಲಭ ಜಯಕ್ಕೆ ಕಾರಣವಾದರು. ರೋಹಿತ್ ಪಾಲಿಗೆ ಇದು 31ನೇ ಏಕ ದಿನ ಕ್ರಿಕೆಟ್ ಶತಕ. ಈ ಮೂಲಕ ಅವರು ಏಕ ದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಮೊದಲ ಮೂರು ಅಗ್ರಸ್ಥಾನಗಳನ್ನು ಭಾರತೀಯರೇ ಪಡೆದುಕೊಂಡಂತಾಗಿದೆ.
Most Hundreds in ODI format:
— Johns. (@CricCrazyJohns) October 11, 2023
Sachin Tendulkar – 49
Virat Kohli – 47
Rohit Sharma – 31*
Domination of Indian trio…!!!! pic.twitter.com/87KI773nGj
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 49 ಶತಕಗಳನ್ನು ಬಾರಿಸಿ ದೊಡ್ಡ ದಾಖಲೆ ಮಾಡಿದ್ದರು. ನಂತರದ ಸ್ಥಾನವನ್ನು ಕಿಂಗ್ ಕೊಹ್ಲಿ ಪಡೆದುಕೊಂಡಿದ್ದಾರೆ. ಅವರು 47 ಶತಕಗಳನ್ನು ಬಾರಿಸಿದ್ದಾರೆ. ಅವರು ಸಚಿನ್ ದಾಖಲೆ ಮುರಿದು ಇನ್ನಷ್ಟು ಶತಕಗಳನ್ನು ಬಾರಿಸುವ ಅವಕಾಶ ಹೊಂದಿದ್ದಾರೆ.
ಅತಿ ಹೆಚ್ಚು ಏಕದಿನ ಶತಕಗಳು
- ಸಚಿನ್ ತೆಂಡೂಲ್ಕರ್ (ಭಾರತ) 49 ಶತಕ
- ವಿರಾಟ್ ಕೊಹ್ಲಿ (ಭಾರತ) 47 ಶತಕ
- ರೋಹಿತ್ ಶರ್ಮಾ (ಭಾರತ) 30 ಶತಕ
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 30 ಶತಕ
- ಸನತ್ ಜಯಸೂರ್ಯ (ಶ್ರೀಲಂಕಾ) 28 ಶತಕ
- ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ) 27 ಶತಕ
- ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) 25 ಶತಕ
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) 25 ಶತಕ
- ಕುಮಾರ ಸಂಗಕ್ಕಾರ (ಶ್ರೀಲಂಕಾ) 25 ಶತಕ
- ಸೌರವ್ ಗಂಗೂಲಿ (ಭಾರತ) 22 ಶತಕ
ರೋಹಿತ್ ಶರ್ಮಾ ಸಿಕ್ಸರ್ ದಾಖಲೆ
ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತದ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಅಂತಾರರಾಷ್ಟ್ರೀಯ ಸಿಕ್ಸರ್ಗಳನ್ನು ಬಾರಿಸಿದ ಹೊಸ ದಾಖಲೆ ಸೃಷ್ಟಿಸಿದರು. ಅವರು ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 551 ಇನಿಂಗ್ಸ್ಗಳಲ್ಲಿ ಬಾರಿಸಿದ್ದ 553 ಸಿಕ್ಸರ್ಗಳ ದಾಖಲೆ ಮುರಿದರು. ರೋಹಿತ್ ಖಾತೆಯಲ್ಲಿ ಈಗ 554 ಸಿಕ್ಸರ್ಗಳಿದ್ದು, ಇದು ಕೇವಲ 473 ಇನಿಂಗ್ಸ್ಗಳಲ್ಲಿ ಸೃಷ್ಟಿಯಾಗಿವೆ. ಏಕದಿನ ಪಂದ್ಯಗಳಲ್ಲಿ ಶಾಹಿದ್ ಅಫ್ರಿದಿ ಮತ್ತು ಗೇಲ್ ನಂತರ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಟಿ 20ಐನಲ್ಲಿ 140 ಇನಿಂಗ್ಸ್ಗಳಲ್ಲಿ 182 ಸಿಕ್ಸರ್ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 77 ಸಿಕ್ಸರ್ಗಳೊಂದಿಗೆ ರೋಹಿತ್ ಮೂರನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಎನಿಸಿಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ (91) ಮತ್ತು ಎಂಎಸ್ ಧೋನಿ (78) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ : Virat Kohli : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಗರಿಷ್ಠ ಸಿಕ್ಸರ್ ಬಾರಿಸಿದವರ ಪಟ್ಟಿ ಇಲ್ಲಿದೆ
ರೋಹಿತ್ ಶರ್ಮಾ (ಭಾರತ) – 554 ಸಿಕ್ಸರ್*
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 553 ಸಿಕ್ಸರ್
ಶಾಹಿದ್ ಅಫ್ರಿದಿ (ಪಾಕಿಸ್ತಾನ) – 476 ಸಿಕ್ಸರ್
ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) – 398 ಸಿಕ್ಸರ್
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) – 383 ಸಿಕ್ಸರ್
ಎಂಎಸ್ ಧೋನಿ (ಭಾರತ) – 359 ಸಿಕ್ಸರ್
ಸನತ್ ಜಯಸೂರ್ಯ (ಶ್ರೀಲಂಕಾ) – 352 ಸಿಕ್ಸರ್
ಇಯಾನ್ ಮಾರ್ಗನ್ (ಇಂಗ್ಲೆಂಡ್) – 346 ಸಿಕ್ಸರ್
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) – 328 ಸಿಕ್ಸರ್
ಜೋಸ್ ಬಟ್ಲರ್ – 312 ಸಿಕ್ಸರ್*
7 ಶತಕಗಳ ದಾಖಲೆ
ಶರ್ಮಾ (Rohit Sharma) ಹಲವು ದಾಖಲೆಗಳನ್ನು ಮಾಡಿದ್ದಾರೆ. ಅದರಲ್ಲೊಂದು ವಿಶ್ವ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆ. ಅವರಿಗೆ ಇದು ವಿಶ್ವ ಕಪ್ನಲ್ಲಿ ಏಳನೇ ದಾಖಲೆಯಾಗಿದೆ. ಈ ಮೂಲಕ ಅವರು ಕ್ರಿಕೆಟ್ ಇತಿಹಾಸದಲ್ಲಿ ಏಕ ದಿನ ವಿಶ್ವ ಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದೇ ವೇಳೆ ಅವರು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ. ಸಚಿನ್ ಅವರು ವಿಶ್ವ ಕಪ್ನಲ್ಲಿ 6 ಶತಕಗಳನ್ನು ಬಾರಿಸಿದ್ದರು.
ಈ ಸುದ್ದಿಯನ್ನೂ ಓದಿ : Virat Kohli : ಚೇಸಿಂಗ್ ವೇಳೆ ಅರ್ಧ ಶತಕಗಳು; ಇಲ್ಲಿಯೂ ಒಂದು ದಾಖಲೆ ಬರೆದ ವಿರಾಟ್
ರೋಹಿತ್ ಕೇವಲ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ ಈ ಮೈಲಿಗಲ್ಲನ್ನು ತಲುಪಿದರು. ಕೇವಲ 19 ಇನ್ನಿಂಗ್ಸ್ಗಳಲ್ಲಿ 1000 ರನ್ ಪೂರೈಸಿದ ವೇಗದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು 36 ವರ್ಷದ ಆಟಗಾರ ಸರಿಗಟ್ಟಿದರು.