ಕೌಲಲಾಂಪುರ : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ ಸಿಂಧೂ (PV Sindhu) ಐದು ತಿಂಗಳ ಬಳಿಕ ಕಣಕ್ಕೆ ಇಳಿಯಲಿದ್ದು, ಮಲೇಷ್ಯಾ ಓಪನ್ನಲ್ಲಿ ಸ್ಪರ್ಧಿಸುವುದು ಖಾತರಿಯಾಗಿದೆ. ಸಿಂಧೂ ಅವರು ಐದು ತಿಂಗಳ ಹಿಂದೆ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅಲ್ಲಿಂದ ಅವರು ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಗಾಯದಿಂದ ಮುಕ್ತಿ ಪಡೆದಿರುವ ಅವರು ಪುನಶ್ಚೇತನಕ್ಕೆ ಒಳಗಾಗಿದ್ದು ಮಂಗಳವಾರ ಆರಂಭವಾಗಲಿರುವ ಮಲೇಷ್ಯಾ ಓಪನ್ನಲ್ಲಿ ಆಡಲಿದ್ದಾರೆ.
ಪಿವಿ ಸಿಂಧೂ ಅವರು 2022ರಲ್ಲಿ ಯಶಸ್ಸು ಕಂಡಿದ್ದರೂ ಕೊನೇ ಹಂತದಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರು. ಇದೀಗ ಮೇ 23ರಿಂದ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿದ್ದು, ಅವರ ಪಾಲಿಗೆ ಪ್ರಮುಖ ಎನಿಸಿದೆ.
ಕಾಮನ್ವೆಲ್ತ್ ಗೇಮ್ಸ್ ಟೂರ್ನಿ ಬಳಿಕ ಸಿಂಧೂ ಅವರು ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಇದೀಗ ಮಲೇಷ್ಯಾ ಓಪನ್ ಟೂರ್ನಮೆಂಟ್ನಲ್ಲಿ ಅವರಿಗೆ ಮಾಜಿ ವಿಶ್ವ ಚಾಂಪಿನ್ ಕರೊಲಿನಾ ಮರೀನ್ಗೆ ಸ್ಪರ್ಧೆಯೊಡ್ಡಲಿದ್ದಾರೆ. ಮರೀನ್ ಅವರು ಸಿಂಧೂ ಅವರಿಗಿಂತ ಉತ್ತಮ ಸಾಧನೆ ಮಾಡಿದ್ದು, ಇಬ್ಬರ ನಡುವಿನ 14 ಹಣಾಹಣಿಗಳಲ್ಲಿ ಸಿಂಧೂ 5 ಬಾರಿ ಗೆದ್ದಿದ್ದರೆ ಮರೀನ್ 9 ಬಾರಿ ವಿಜಯ ಸಾಧಿಸಿದ್ದರು.
ಇದನ್ನೂ ಓದಿ | National Games | ಪಿ.ವಿ ಸಿಂಧೂ ನ್ಯಾಷನಲ್ ಗೇಮ್ಸ್‌ಗೆ ಅಲಭ್ಯ, ಉದ್ಘಾಟನೆ ಮಾತ್ರ ಸೀಮಿತ