ಬರ್ಮಿಂಗ್‌ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್‌ಗೆ (CWG-2022) ತೆರಳಿರುವ ಭಾರತ ಅಥ್ಲೀಟ್‌ಗಳ ನಿಯೋಗದಲ್ಲಿ ಅತ್ಯಂತ ಕಿರಿ ವಯಸ್ಸಿನ ಸ್ಪರ್ಧಿಯೊಬ್ಬರಿದ್ದಾರೆ. ಅವರೇ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್. ದೀಪಿಕಾ ಪಳ್ಳಿಕಲ್, ಸೌರವ್ ಘೋಷಾಲ್, ಜೋಶ್ನಾ ಚಿನ್ನಪ್ಪ ಸೇರಿದಂತೆ ಹಿರಿಯ ಆಟಗಾರ್ತಿಯರ ನಡುವೆ ಅನಾಹತ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಅನಾಹತ್ ಶುಕ್ರವಾರ ನಡೆದ ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾರೆ. ಸೇಂಟ್ ವಿನ್ಸೆಂಟ್ ದೇಶದ ಜಡಾ ರೋಸ್ ವಿರುದ್ಧದ ೬೨ನೇ ಸುತ್ತಿನ ಸ್ಪರ್ಧೆಯಲ್ಲಿ ಅವರು ವಿಜಯ ಸಾಧಿಸುವ ಮೂಲಕ ೩೨ನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಅವರ ಸಾಧನೆಯನ್ನು ಎಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಈ ಆಟಗಾರ್ತಿಗೆ ಇಬ್ಬರು ಹಾರ್ಡ್‌ಕೋರ್ ಫ್ಯಾನ್‌ಗಳಿದ್ದಾರೆ. ಅವರ ಕೂಟಕ್ಕೆ ಮೊದಲು ಶುಭಾಶಯ ತಿಳಿಸಿದ್ದಾರೆ.
ಅಂದ ಹಾಗೆ ಈ ಫ್ಯಾನ್‌ಗಳು ಮತ್ಯಾರು ಅಲ್ಲ. ಆಕೆಯ ಇಬ್ಬರು ಪುಟಾಣಿ ಸಹೋದರಿಯರು. ಪಂದ್ಯಕ್ಕೆ ಮೊದಲ ಪುಟಾಣಿಗಳು ಅಕ್ಕನಿಗೆ ಶುಭಾಶಯ ಕೋರಿದ್ದಾರೆ. ಈ ವಿಡಿಯೊವನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ಶೇರ್ ಮಾಡಿದೆ.
ಯಾರೀಕೆ ಅನಾಹತ್?
ಅನಾಹತ್ ದಿಲ್ಲ ಮೂಲದ ಪ್ರತಿಭೆ. ಚಾಣಾಕ್ಯಪುರಿಯ ಬ್ರಿಟಿಷ್ ಸ್ಕೂಲ್ ವಿದ್ಯಾರ್ಥಿನಿ. ತಂದೆ ಗುರಶರನ್ ಸಿಂಗ್ ವಕೀಲ ಹಾಗೂ ತಾಯಿ ತನಿ ವದೇರಾ, ಇಂಟೀರಿಯರ್ ಡಿಸೈನರ್. ಇವರಿಬ್ಬರೂ ಬಾಲ್ಯದಲ್ಲಿ ಹಾಕಿ ಆಟಗಾರರಾಗಿದ್ದರು. ಹಿರಿಯ ಸಹೋದರಿ ಹಾಗೂ ಮಾಜಿ ರಾಷ್ಟ್ರಮಟ್ಟದ ಆಟಗಾರ್ತಿ ಅಮಿರಾ ಅವರಿಂದ ತರಬೇತಿ ಪಡೆಯುತ್ತಿರುವ ಅನಾಹತ್ ೧೩ರ ವಯೋಮಿತಿಯ ವಿಭಾಗದಲ್ಲಿ ರಾಷ್ಟ್ರಮಟ್ಟ, ಏಷ್ಯಾ ಹಾಗೂ ಯರೋಪ್ ಮಟ್ಟದಲ್ಲಿ ನಂಬರ್ ಒನ್ ಸ್ಥಾನಪಡೆದುಕೊಂಡಿದ್ದಾಳೆ. ೨೦೧೯ರಲ್ಲಿ ಬ್ರಿಟಿಷ್ ಓಪನ್ ಸ್ಕ್ವಾಷ್ ಟೂರ್ನಮೆಂಟ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದಾಳೆ. ಅದೇ ರೀತಿ ಬ್ರಿಟಿಷ್ ಹಾಗೂ ಮಲೇಷ್ಯಾ ಜೂನಿಯರ್ ಓಪನ್ ಟೂರ್ನಮೆಂಟ್‌ನಲ್ಲಿ ಬೆಳ್ಳಿ ಗೆದ್ದಿದ್ದಳು. ಅಚ್ಚರಿಯೆಂದರೆ ಪಿ.ವಿ ಸಿಂಧೂ ಅವರ ಅಪ್ಪಟ ಅಭಿಮಾನಿಯಾಗಿರುವ ಅವರು ಬ್ಯಾಡ್ಮಿಂಟನ್ ಕಡೆಗೆ ಒಲವು ಹೊಂದಿದ್ದರೂ, ಆಯ್ಕೆ ಮಾಡಿಕೊಂಡಿದ್ದು ಸ್ಕ್ವಾಷ್.
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಇಂದು ಕಣದಲ್ಲಿರುವ ಭಾರತೀಯರು ಯಾರು?