Site icon Vistara News

Paris Olympics 2024 : ಒಲಿಂಪಿಕ್ಸ್​ಗೆ ತೆರಳಿರುವ ಭಾರತದ ಹಿರಿಯ ಮತ್ತು ಕಿರಿಯ ಸ್ಪರ್ಧಿಗಳು ಯಾರು ಗೊತ್ತೇ? ಇಲ್ಲಿದೆ ಅವರ ವಿವರ

Paris Olympics 2024

ಬೆಂಗಳೂರು: ಭಾರತವು 117 ಸದಸ್ಯರ ಬಲವಾದ ತಂಡದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ತೆ 2024ಕ್ಕೆ (Paris Olympics 2024) ತೆರಳಲಿದೆ. ಇದು 2021ರಲ್ಲಿ ಕಳುಹಿಸಿರುವ ನಾಲ್ಕು ಸದಸ್ಯರು ಕಡಿಮೆ ಇರುವ ನಿಯೋಗ. ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಹಲವಾರು ಕ್ರೀಡೆಗಳಲ್ಲಿ ಸಾಕಷ್ಟು ಯಶಸ್ಸು ಪಡೆದಿರುವ ಭಾರತೀಯ ನಿಯೋಗವು ಪ್ರಣಯ ನಗರಕ್ಕೆ ತೆರಳಿದೆ. ಈ ಹಿಂದಿನ ಗರಿಷ್ಠ 7 ಪದಕಗಳ ದಾಖಲೆ ಮುರಿಯುವ ಭರವಸೆ ಹೊಂದಿದೆ. ಭಾರತವು ಕ್ರೀಡಾಳುಗಳ ತಂಡದಲ್ಲಿ ಅನುಭವ ಮತ್ತು ಉತ್ಸಾಹಿ ಯುವ ಪಡೆಯಿದೆ. ಅದರಲ್ಲಿ 44 ವರ್ಷದ ರೋಹನ್ ಬೋಪಣ್ಣ (Rohan Bopanna) ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಹಿರಿಯ ಅಥ್ಲೀಟ್ ಆಗಿದ್ದಾರೆ. 14 ವರ್ಷದ ಧಿನಿಧಿ ದೇಸಿಂಘು ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ರೋಹನ್ ಬೋಪಣ್ಣ ಸಾಧನೆಯ ವಿವರ ಇಲ್ಲಿದೆ

ಪ್ಯಾರಿಸ್​​ನಲ್ಲಿ ನಡೆಯಲಿರುವ ಒಲಿಂಪಿಕ್ ಪದಕ ಗೆಲ್ಲಲು ಬೋಪಣ್ಣ ಹೋಗಲಿದ್ದಾರೆ. ಇದು ಒಲಿಂಪಿಕ್ಸ್​​ನಲ್ಲಿ ಹಿರಿಯ ಆಟಗಾರನ ಮೂರನೇ ಎಂಟ್ರಿಯಾಗಿದೆ. ಬೋಪಣ್ಣ ಮತ್ತು ಮಹೇಶ್ ಭೂಪತಿ 2012ರಲ್ಲಿ ಪುರುಷರ ಡಬಲ್ಸ್ ನಲ್ಲಿ ಎರಡನೇ ಸುತ್ತು ತಲುಪಿದ್ದರು.

2016ರಲ್ಲಿ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಪುರುಷರ ಡಬಲ್ಸ್ ವಿಭಾಗದಲ್ಲಿ ಜೋಡಿಯಾಗಿದ್ದರು. ಆದರೆ ಪದಕ ಗೆಲ್ಲಲಿಲ್ಲ. ಆದರೆ, ಬೋಪಣ್ಣ ಮತ್ತು ಅವರ ಮಿಶ್ರ ಡಬಲ್ಸ್ ಪಾಲುದಾರಾದ ಸಾನಿಯಾ ಮಿರ್ಜಾ ಅವರು ಪ್ಲೇಆಫ್​ ಹಂತಕ್ಕೆ ತೇರ್ಗಡೆಯಾಗಿದ್ದರು. ಆದರೆ, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಲೂಸಿ ಹ್ರಾಡೆಕಾ ಮತ್ತು ರಾಡೆಕ್ ಸ್ಟೆಪಾನೆಕ್ ವಿರುದ್ಧ ನೇರ ಸೆಟ್​ನಲ್ಲಿ ಸೋತಿದ್ದರು.

ಬೋಪಣ್ಣ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರಲಿಲ್ಲ. ಇದೀಗ 44 ವರ್ಷದ ಬೋಪಣ್ಣ, ಪ್ರವಾಸದಲ್ಲಿ ತಮ್ಮ ಶ್ರೇಯಾಂಕದ ಮೂಲಕ ಭಾರತದ ಕೋಟಾವನ್ನು ಭದ್ರಪಡಿಸಿಕೊಂಡರು. ವಿಶ್ವದ 62ನೇ ಶ್ರೇಯಾಂಕಿತ ಆಟಗಾರ ಎನ್.ಶ್ರೀರಾಮ್ ಬಾಲಾಜಿ ಅವರೊಂದಿಗೆ ಕರ್ನಾಟಕದ ಟೆನಿಸ್ ದಿಗ್ಗಜ ಡಬಲ್ಸ್​ ಪಾಲುದಾರಾಗಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ವಿಶ್ವದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಅವರು ಮತ್ತು ಅವರ ಆಸ್ಟ್ರೇಲಿಯಾದ ಪಾಲುದಾರ ಮ್ಯಾಥ್ಯೂ ಎಬ್ಡೆನ್ ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದಿದ್ದರು. ಈ ವೇಳೆ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಪ್ರೆಂಚ್​ ಓಪನ್​ನಲ್ಲಿ ಪುರುಷರ ಡಬಲ್ಸ್ ಸೆಮಿಫೈನಲ್ ತಲುಪಿದ್ದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ 117 ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

ಎಟಿಪಿ 500 ಟೂರ್ನಮೆಂಟ್ ಹ್ಯಾಂಬರ್ಗ್ ಓಪನ್​ ಬೋಪಣ್ಣ ಮತ್ತು ಬಾಲಾಜಿ ಆಡಿದ್ದರು. ಆದರೆ ಅವರು ಮೊದಲ ಸುತ್ತಿನಲ್ಲೇ ಸೋಲುವ ಮೂಲಕ ನಿರಾಸೆ ಎದುರಿಸಿದ್ದರ.

ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಧಿನಿಧಿ ದೇಸಿಂಘು

ಬೆಂಗಳೂರಿನ 14 ವರ್ಷದ ಈಜುಗಾರ್ತಿ ಧಿನಿಧಿ ದೇಸಿಂಘು 2024 ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತದ ಅತ್ಯಂತ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅನುಭವಿ ಈಜುಗಾರ ಶ್ರೀಹರಿ ನಟರಾಜ್ ಅವರೊಂದಿಗೆ ಒಲಿಂಪಿಕ್ ಕ್ರೀಡಾಕೂಟದ ಕೋಟಾವನ್ನು ನೀಡಿದದ್ದರು.

ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ದೇಸಿಂಘು ಸ್ಪರ್ಧಿಸಲಿದ್ದು, ಇತಿಹಾಸದಲ್ಲಿ ಎರಡನೇ ಕಿರಿಯ ಭಾರತೀಯ ಒಲಿಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ, ಆರತಿ ಸಹಾ 1952 ರ ಹೆಲ್ಸಿಂಕಿ ಒಲಿಂಪಿಕ್ಸ್​ನಲ್ಲಿ 11 ನೇ ವಯಸ್ಸಿನಲ್ಲಿ ಕಿರಿಯ ಭಾರತೀಯ ಒಲಿಂಪಿಯನ್ ಎಂಬ ದಾಖಲೆ ಮಾಡಿದ್ದರು. ಶಾಲೆಯಲ್ಲಿ ಕೇವಲ ಒಂಬತ್ತನೇ ತರಗತಿಯಲ್ಲಿದ್ದರೂ, ದೇಸಿಂಘು ಈಗಾಗಲೇ ತನ್ನ ಕೌಶಲ ಹಾಗೂ ಅಸಾಧಾರಣ ಪ್ರತಿಭೆ ತೋರಿದ್ದಾರೆ.

14ರ ಹರೆಯದ ಈ ಆಟಗಾರ್ತಿಗೆ ಪ್ಯಾರಿಸ್ ಒಲಿಂಪಿಕ್ಸ್ ಪ್ರಮುಖ ಟೂರ್ನಿಗಳ ಮೊದಲ ಪ್ರವೇಶ ಅಲ್ಲ . 2022ರಲ್ಲಿ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಹಾಗೂ 2024ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ್ದರು.

Exit mobile version