Site icon Vistara News

Shubhman Gill | ಶುಭ್​ಮನ್​ ಗೆಳತಿ ಯಾರು? ಸಾರಾ ಅಲಿಖಾನ್ ಅಥವಾ ಸಾರಾ ತೆಂಡೂಲ್ಕರ್​?

saral alikhan

ಹೈದರಾಬಾದ್​: ಟೀಮ್​ ಇಂಡಿಯಾದ ಓಪನಿಂಗ್​ ಬ್ಯಾಟರ್​ ಶುಭ್​ಮನ್​ ಗಿಲ್ (Shubhman Gill)​ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಪಂದ್ಯದಲ್ಲಿ ದ್ವಿಶತಕ (208) ಬಾರಿಸಿ ಸಾಧನೆ ಮಾಡಿದ್ದಾರೆ. ಅವರು ಏಕ ದಿನ ಮಾದರಿಯಲ್ಲಿ ಡಬಲ್​ ಸೆಂಚುರಿ ಬಾರಿಸಿದ ಭಾರತ ತಂಡದ ಐದನೇ ಆಟಗಾರ. ಈ ಸಾಧನೆ ಮಾಡುವ ಮೂಲಕ ಹಿರಿಯ ಆಟಗಾರರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಏತನ್ಮಧ್ಯೆ, ಹೈದರಾಬಾದ್​ನಲ್ಲಿ ಬುಧವಾರ ಶುಭ್​ಮನ್​ ಗಿಲ್​ ಬ್ಯಾಟ್​ ಮಾಡುತ್ತಿರುವ ವೇಳೆ ಪ್ರೇಕ್ಷಕರು ಸಾರಾ, ಸಾರಾ… ಎಂದು ಕೂಗಿದ್ದರು. ಈ ಸಾರಾ ಯಾರೆಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ.

ಸಾರಾ ತೆಂಡೂಲ್ಕರ್​

23 ವರ್ಷದ ಯುವ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜತೆ ಡೇಟಿಂಗ್​ ಮಾಡುತ್ತಿದ್ದರು ಎಂಬ ಗಾಸಿಪ್​ಗಳು ಹರಿದಾಡಿದ್ದವು. ಸೋಶಿಯಲ್​ ಮೀಡಿಯಾಗಳಲ್ಲಿ ಅವರಿಬ್ಬರ ಹೆಸರು ಟ್ರೆಂಡ್​ ಕೂಡ ಆಗಿತ್ತು. ಆದರೆ, ವರ್ಷಗಳ ಬಳಿಕ ಸುದ್ದಿ ತಣ್ಣಗಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ನಟ ಸೈಫ್​ ಅಲಿಖಾನ್ ಅವರ ಪುತ್ರಿ ಸಾರಾ ಅಲಿಖಾನ್​ ಅವರ ಜತೆ ಡೇಟಿಂಗ್​ ಮಾಡುತ್ತಿದ್ದರು ಎಂಬ ಸುದ್ದಿಗಳು ಹರಡಿದ್ದವು. ಅದಕ್ಕೆ ಪೂರಕವಾಗಿ ಅವರಿಬ್ಬರು ಹೋಟೆಲ್​ನಲ್ಲಿ ಕುಳಿತಿರುವ ಹಾಗೂ ವಿಮಾನದಲ್ಲಿ ಜತೆಯಾಗಿ ಪ್ರಯಾಣಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕಾರಣಕ್ಕೆ ಅಭಿಮಾನಿಗಳು ಸಾರಾ ಸಾರಾ ಎಂದು ಕೂಗಿದ್ದರು.

ವಾಸ್ತವದಲ್ಲಿ ಶುಭ್​ಮನ್​ ಗಿಲ್​ ಈಗ ಯಾರ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಕೆಲವರು ಸಚಿನ್​ ತೆಂಡೂಲ್ಕರ್​ ಪುತ್ರಿ ಜತೆ ಅಂದುಕೊಂಡಿದ್ದಾರೆ. ಹೀಗಾಗಿ ನ್ಯೂಜಿಲ್ಯಾಂಡ್​ ವಿರುದ್ಧ ಅವರು ಡಬಲ್​ ಸೆಂಚುರಿ ಬಾರಿಸಿದ ತಕ್ಷಣ ಸಾರಾ ತೆಂಡೂಲ್ಕರ್​ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದ್ದರು.

ಇದನ್ನೂ ಓದಿ | Shubhman Gill | ದ್ವಿಶತಕ ಬಾರಿಸಿದ್ದು ಶುಭ್​ಮನ್​​ ಗಿಲ್​, ಟ್ರೆಂಡ್​ ಆಗಿದ್ದು ಸಾರಾ ತೆಂಡೂಲ್ಕರ್​!

Exit mobile version