Site icon Vistara News

ಸೀರೆಯುಟ್ಟೂ ಫುಟ್ಬಾಲ್‌ ಆಡಬಹುದು ಎಂದು ತೋರಿಸಿಕೊಟ್ಟ ಲೋಕಸಭಾ ಸದಸ್ಯೆ, ಯಾರವರು?

mahua

ಕೋಲ್ಕೊತಾ : ಲೋಕ ಸಭೆ ಅಧೀವೇಶನವಾಗಲಿ, ಪತ್ರಿಕಾಗೋಷ್ಠಿಯಾಗಲಿ, ಬೆಂಕಿ ಚೆಂಡಿನಂತೆ ಮಾತನಾಡುವ ಪಶ್ಚಿಮ ಬಂಗಾಳದ ಕೃಷ್ಣ ನಗರ ಎಂಪಿ ಮಹುವಾ ಮೊಯಿತ್ರಾ ಸೀರೆಯುಟ್ಟು ಫುಟ್ಬಾಲ್‌ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಫುಟ್ಬಾಲ್‌ ಪ್ರೇಮಿಗಳು ಹೆಚ್ಚಾಗಿರುವ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಮಟ್ಟದ ಟೂರ್ನಮೆಂಟ್‌ನ ಉದ್ಘಾಟನೆಗೆ ಹೋಗಿದ್ದ ಅವರು ತಾವೇ ಕಾಲ್ಚೆಂಡಿಗೆ ಒದ್ದು ಫೋಟೊ ತೆಗೆಸಿಕೊಂಡಿದ್ದಾರೆ.

ಮಹುವಾ ಅವರು ಟೂರ್ನಮೆಂಟ್‌ನ ಉದ್ಘಾಟನೆಯಾಗಿದ್ದ ಕಾರಣ ಕಿತ್ತಳೆ ಬಣ್ಣದ ಸೀರೆಯಟ್ಟು ಅಲ್ಲಿಗೆ ತೆರಳಿದ್ದರು. ಆದರೆ, ಆಯೋಜಕರು ಕಾಲ್ಜೆಂಡಿಗೆ ಒದ್ದು ಉದ್ಘಾಟನೆ ಮಾಡುವಂತೆ ಸೂಚಿಸಿದ್ದಾರೆ. ಫುಟ್ಬಾಲ್‌ ಬಗ್ಗೆ ಗೊತ್ತಿದ್ದ ಅವರು ಕ್ಷಣ ಮಾತ್ರದಲ್ಲಿ ಚೆಂಡನ್ನು ಜೋರಾಗಿ ಒದ್ದು ಉದ್ಘಾಟನೆ ಮಾಡಿದ್ದಾರೆ. ಅದೇ ರೀತಿ ಗೋಲ್‌ಕೀಪರ್‌ ಆಗಿಯೂ ಚೆಂಡನ್ನು ತಡೆದಿದ್ದಾರೆ.

ತಾವು ಸೀರೆಯುಟ್ಟು ಫುಟ್ಬಾಲ್ ಆಡುವ ಚಿತ್ರವನ್ನು ಅವರು ಟ್ವೀಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೃಷ್ಣನಗರ ಎಂಪಿ ಕಪ್‌ ಟೂರ್ನಮೆಂಟ್‌-೨೦೨೨ ಉದ್ಘಾಟಿಸಿದೆ. ನಾನು ಸೀರೆಯಲ್ಲೂ ಆಡಬಲ್ಲೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಮಹುವಾ ಅವರ ಟ್ವೀಟ್‌ಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಪ್ರತಿಕ್ರಿಯಿಸಿದ್ದಾರೆ. ಕೂಲ್‌, ಲವ್ಲಿ ಶಾಟ್‌ ಎಂದು ಬರೆದುಕೊಂಡಿದ್ದಾರೆ.

ಸಾಕಷ್ಟು ಮಂದಿ ಈ ಚಿತ್ರವನ್ನು ಟ್ರೋಲ್‌ ಮಾಡಲು ಹಾಗೂ ಮೀಮ್ಸ್‌ ಸೃಷ್ಟಿ ಮಾಡಲೂ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ | Sunil Chhetri | ಫೊಟೋಗೆ ಪೋಸ್‌ ಕೊಡಲು ಸುನೀಲ್ ಛೆತ್ರಿಯನ್ನೇ ಬದಿಗೆ ತಳ್ಳಿದ ಬಂಗಾಳದ ರಾಜ್ಯಪಾಲ!

Exit mobile version