Site icon Vistara News

T20 World Cup | ವಿಶ್ವ ಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಟೀಮ್​ ಇಂಡಿಯಾ ಆಟಗಾರು ಯಾರು?

t 20

ಮುಂಬಯಿ: 2007ರಲ್ಲಿ ಆರಂಭಗೊಂಡ ಟಿ20 ವಿಶ್ವ ಕಪ್ (T20 World Cup) ​ನಿಂದ 2021ರ ವಿಶ್ವ ಕಪ್​ವರೆಗೆ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ಕ್ರಿಕೆಟ್​ ತಂಡದ ಆಟಗಾರರು ಎಷ್ಟು ಸಿಕ್ಸರ್​ ಬಾರಿಸಿ ಸಾಧನೆ ಮಾಡಿದ್ದಾರೆ ಎನ್ನುವ ಸ್ವಾರಸ್ಯಕರ ಸಂಗತಿ ಈ ಕೆಳಗೆ ನೀಡಲಾಗಿದೆ.

1. ಯುವರಾಜ್ ಸಿಂಗ್:

ಭಾರತ ಕ್ರಿಕೆಟ್​ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್​ ಪಟ್ಟಿಯಲ್ಲಿ ಮೊದಲ ಸ್ಥಾನ ಯುವರಾಜ್​ ಸಿಂಗ್‌ಗೆ ಎನ್ನಲಡ್ಡಿಯಿಲ್ಲ. ಭಾರತ 2007 ಮತ್ತು 2011 ರ ವಿಶ್ವ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಅವರು​. ಈ ಎರಡೂ ವಿಶ್ವ ಕಪ್​ ಕೂಟದಲ್ಲಿ ಯುವರಾಜ್​ ಬೌಲಿಂಗ್​ ಮತ್ತು ಬ್ಯಾಟಿಂಗ್​ ಮೂಲಕ ಅಬ್ಬರಿಸಿ ತಂಡ ಚಾಂಪಿಯನ್​ ಪಟ್ಟಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಸ್ಟುವರ್ಟ್ ಬ್ರಾಡ್​ ಅವರ 6 ಎಸೆತಕ್ಕೆ 6 ಸಿಕ್ಸರ್​ ಬಾರಿಸಿ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದು ವಿಶ್ವ ಕಪ್​ ಟಿ20 ಕೂಟದಲ್ಲಿ. ಯುವಿ ಒಟ್ಟು 31 ವಿಶ್ವ ಕಪ್​ ಪಂದ್ಯಗಳನ್ನು ಆಡಿದ್ದು 33 ಸಿಕ್ಸರ್‌ಗಳನ್ನು ಬಾರಿಸಿ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ.

2. ರೋಹಿತ್​ ಶರ್ಮಾ

ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಈ ಸಾಲಿನಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಹಿತ್ 33 ಪಂದ್ಯಗಳಲ್ಲಿ 31 ಸಿಕ್ಸರ್ ಬಾರಿಸಿದ್ದಾರೆ. ಇದೀಗ 2022 ರ ವಿಶ್ವ ಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್​, 3 ಸಿಕ್ಸರ್​ ಬಾರಿಸಿದರೆ ಯುವರಾಜ್​ ಸಿಂಗ್​ ದಾಖಲೆ ಮುರಿಯುವುದು ಖಚಿತ.

3. ವಿರಾಟ್ ಕೊಹ್ಲಿ

ಕಳೆದ 2 ವರ್ಷಗಳ ಬಳಿಕ ಬ್ಯಾಟಿಂಗ್​ ಲಯಕ್ಕೆ ಮರಳಿರುವ ಕಿಂಗ್​ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 21 ಪಂದ್ಯಗಳಲ್ಲಿ 20 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೀಗ ಉತ್ತಮ ಬ್ಯಾಟಿಂಗ್​ ನಡೆಸುತ್ತಿರುವ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುವ ವಿಶ್ವಾಸವಿದೆ.

4. ಎಂ.ಎಸ್​ ಧೋನಿ

ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 33 ಪಂದ್ಯಗಳಲ್ಲಿ 16 ಸಿಕ್ಸರ್‌ಗಳನ್ನು ಮಾತ್ರ ಸಿಡಿಸಿದ್ದಾರೆ. ಆದರೆ ಧೋನಿ ಚೊಚ್ಚಲ ಟಿ 20 ವಿಶ್ವ ಕಪ್​ನಲ್ಲಿಯೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಖ್ಯಾತಿ ಹೊಂದಿದ್ದಾರೆ.

5. ಸುರೇಶ್ ರೈನಾ

ಭಾರತ ಕ್ರಿಕೆಟ್​ ತಂಡ ಕಂಡ ಚುರುಕಿನ ಕ್ರಿಕೆಟಿಗ ಸುರೇಶ್ ರೈನಾ 26 ಪಂದ್ಯಗಳಲ್ಲಿ 12 ಸಿಕ್ಸರ್ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ. ಆದರೆ ಇದೀಗ ಎಲ್ಲ ಮಾದರಿಯ ಕ್ರಿಕೆಟ್​ನಿಂದ ದೂರವಿರುವ ರೈನಾ, ತಮ್ಮ ಸಿಕ್ಸರ್​ ದಾಖಲೆಯನ್ನು ಹೆಚ್ಚಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ | T20 World Cup | ಐಸಿಸಿ ಸ್ಫೋಟಕ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್‌ಗೆ ಅಗ್ರ ಸ್ಥಾನ

Exit mobile version