Site icon Vistara News

David Warner: ನಿವೃತ್ತಿ ಎಂದವರಿಗೆ ತಕ್ಕ ಉತ್ತರ ನೀಡಿದ ಡೇವಿಡ್​ ವಾರ್ನರ್​

david warner

ಸಿಡ್ನಿ: ಭಾರತ ತಂಡವನ್ನು ಮಣಿಸಿ ಏಕದಿನ ವಿಶ್ವಕಪ್(ICC World Cup)​ ಗೆದ್ದ ಜೋಶ್​ನಲ್ಲಿರುವ ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್​ ವಾರ್ನರ್(David Warner)​ ಅವರು ತಮ್ಮ ನಿವೃತ್ತಿ ಬಗ್ಗೆ ತುಟಿ ಬಿಚ್ಚಿದವರಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ. ‘ನನ್ನ ಆಟ ಮುಗಿಯಿತು ಎಂದು ಹೇಳಿದವರು ಯಾರು?’ ಎಂದು ಪ್ರಶ್ನಿಸಿದ್ದಾರೆ.

37 ವರ್ಷದ ಡೇವಿಡ್​ ವಾರ್ನರ್​ ಅವರು ಈಗಾಗಲೇ 2 ವಿಶ್ವಕಪ್​ ಗೆದ್ದ ತಂಡದ ಆಟಗಾರನಾಗಿದ್ದಾರೆ. ಕ್ರಿಕೆಟ್​ನಲ್ಲಿ ಅವರು ಎಲ್ಲ ಸಾಧನೆ ಮಾಡಿದ್ದಾರೆ. ಹೀಗಾಗಿ ಅವರು ಶೀಘ್ರದಲ್ಲೇ ಕ್ರಿಕೆಟ್​ಗೆ ವಿದಾಯ ಹೇಳುವುದು ಸೂಕ್ತ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದಾರೆ. ಈ ವಿಚಾರ ಡೇವಿಡ್​ ವಾರ್ನರ್​ ಅವರ ಕಿವಿಗೆ ಬಿದ್ದಿದೆ. ಇದಕ್ಕ ತಕ್ಕ ಉತ್ತರವನ್ನು ಕೂಡ ಅವರು ನೀಡಿದ್ದಾರೆ.

ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ವಾರ್ನರ್‌ ನೀಡಿರುವ ಪ್ರದರ್ಶನದ ಕುರಿತ ಅಂಕಿ-ಅಂಶಗಳನ್ನೊಳಗೊಂಡ ಅವರ ಫೋಟೊವನ್ನು ಹಂಚಿಕೊಂಡಿರುವ ಕ್ರಿಕ್​ಇನ್ಫೋ, ಅದ್ಭುತ ದಾಖಲೆಗಳೊಂದಿಗೆ ಡೇವಿಡ್‌ ವಾರ್ನರ್‌ ಅವರು ಏಕದಿನ ವಿಶ್ವಕಪ್‌ ವೃತ್ತಿಜೀವನ ಕೊನೆಗೊಂಡಿದೆ ಎಂದು ಉಲ್ಲೇಖಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಾರ್ನರ್‌ ‘ನನ್ನ ಆಟ ಮುಗಿಯಿತು ಎಂದು ಹೇಳಿದವರು ಯಾರು?’ ಎಂದು ಪ್ರಶ್ನಿಸಿದ್ದಾರೆ.

ವಾರ್ನರ್​ ನಿವೃತ್ತಿ ಎಂಬ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಕಲ ನಟ್ಟಿಗರು ‘ವಾರ್ನರ್‌ ಅವರ 2.0 ಆವೃತ್ತಿ ಈಗಷ್ಟೇ ಆರಂಭವಾಗಿದೆ’, ‘ಉತ್ತಮ ಲಯದಲ್ಲಿದ್ದೀರಿ. ನೀವು ಮತ್ತೊಂದು ವಿಶ್ವಕಪ್ ಆಡಬೇಕು’ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ವಿದಾಯ ಹೇಳಲು ಇದು ಸೂಕ್ತ ಸಮಯ ಎಂದು ಸಲಹೆ ನೀಡಿದ್ದಾರೆ. ಆದರೆ ವಾರ್ನರ್​ ಮಾತ್ರ ಸದ್ಯಕ್ಕೆ ನಾನು ನಿವೃತ್ತಿ ಇಲ್ಲ ನ್ನುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದೊಮ್ಮೆ ಟಸ್ಟ್​ ಕ್ರಿಕಟ್​ಗೆ ವಿದಾಯ ಹೇಳಿದರೂ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ ಬಳಿಕವೇ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯೊಂದಿದೆ.

ಇದನ್ನೂ ಓದಿ AUS vs NED: ಬೆಳಕಿನಾಟದ ವಿಚಾರದಲ್ಲಿ ಮ್ಯಾಕ್ಸ್​ವೆಲ್​-ವಾರ್ನರ್​ ಮಧ್ಯೆ ಭಿನ್ನಾಭಿಪ್ರಾಯ

37 ವರ್ಷದ ಡೇವಿಡ್‌ ವಾರ್ನರ್‌ ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. 11 ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್​ ವಿರುದ್ಧ ಶತಕ ಬಾರಿಸಿದ್ದರು. ಉಳಿದಂತೆ ಎರಡು ಅರ್ಧಶತಕ ಸಹಿತ ಒಟ್ಟಾರೆ 535 ರನ್ ಬಾರಿಸಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 29 ಏಕದಿನ ವಿಶ್ವಕಪ್‌ ಪಂದ್ಯಗಳನ್ನು ಆಡಿರುವ ವಾರ್ನರ್‌, 6 ಶತಕ ಮತ್ತು 5 ಅರ್ಧಶತಕ ಸಹಿತ 1,527 ರನ್‌ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 109 ಪಂದ್ಯಗಳನ್ನು ಆಡಿರುವ ವಾರ್ನರ್​, 199 ಇನಿಂಗ್ಸ್‌ಗಳಲ್ಲಿ 8,487 ರನ್‌ ಗಳಿಸಿದ್ದಾರೆ. ಇದರಲ್ಲಿ 3 ದ್ವಿಶತಕ, 25 ಶತಕ ಮತ್ತು 36 ಅರ್ಧಶತಗಳು ಒಳಗೊಂಡಿದೆ. ಏಕದಿನ ಮಾದರಿಯಲ್ಲಿ 161 ಪಂದ್ಯಗಳಲ್ಲಿ ಆಡಿ, 22 ಶತಕ ಹಾಗೂ 33 ಅರ್ಧಶತಕ ಸಹಿತ 6,932 ರನ್‌ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 99 ಪಂದ್ಯ ಆಡಿ, 1 ಶತಕ ಹಾಗೂ 24 ಅರ್ಧಶತಕದ ನರೆವಿನಿಂದ 2,894 ರನ್‌ ಕಲೆಹಾಕಿದ್ದಾರೆ.

Exit mobile version