Site icon Vistara News

T20 World Cup | ಐಸಿಸಿ ಪ್ರಕಾರ ವಿಶ್ವ ಕಪ್ ಆಡುವ ಭಾರತ ತಂಡದಲ್ಲಿ ಯಾರೆಲ್ಲ ಇರುತ್ತಾರೆ?

ind vs aus

ಮೆಲ್ಬೋರ್ನ್‌ : ಭಾರತ ತಂಡದ ಟಿ೨೦ ವಿಶ್ವ ಕಪ್‌ಗಾಗಿ (T20 World Cup) ಸತತವಾಗಿ ಅಭ್ಯಾಸ ನಡೆಸುತ್ತಿದೆ. ಇತ್ತ ಐಸಿಸಿ ಕೂಡ ಟೂರ್ನಿಯ ಅದ್ಧೂರಿ ಆಯೋಜನೆಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಂತೆಯೇ ತನ್ನ ವೆಬ್‌ಸೈಟ್‌ನಲ್ಲಿ ನಾನಾ ಚಟುವಟಿಕೆಗಳನ್ನೂ ಆರಂಭಿಸಿದೆ. ಅದೇ ಮಾದರಿಯಲ್ಲಿ ವಿಶ್ವ ಕಪ್‌ನಲ್ಲಿ ಆಡುವ ೧೬ ತಂಡಗಳಲ್ಲಿ ಅವಕಾಶ ಪಡೆಯಲಿರುವ ಆಟಗಾರರು ಯಾರೆಲ್ಲ ಎಂಬ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಅದರಲ್ಲಿ ಭಾರತ ಆಡುವ ೧೧ರ ಬಳಗವನ್ನೂ ವಿವರಿಸಿದೆ.

ದಿನೇಶ್‌ ಕಾರ್ತಿಕ್‌ ಅವರು ತಂಡಕ್ಕೆ ಮರಳಿರುವ ಜತೆಗೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್‌ ಹೆಚ್ಚಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದಾಗಿ ಭಾರತ ತಂಡ ಸದೃಢವಾಗಿದೆ. ಭಾರತ ತಂಡದ ಮಧ್ಯಮ ಕ್ರಮಾಂಕ ಬಲವಾಗಿದ್ದು, ರಿಷಭ್‌ ಪಂತ್ ಕೂಡ ಅವಕಾಶ ಪಡೆಯುವ ಸಾಧ್ಯತೆಗಳಿವೆ ಎಂದ ಬರೆದುಕೊಂಡಿದೆ. ಜಸ್‌ಪ್ರಿತ್‌ ಬುಮ್ರಾ ಅವರ ಅಲಭ್ಯತೆಯ ಕಾರಣ ವೇಗದ ವಿಭಾಗಕ್ಕೆ ಹೆಚ್ಚು ಪೈಪೋಟಿ ಸೃಷ್ಟಿಯಾಗಲಿದೆ. ಪಿಚ್‌ ಕಂಡೀಷನ್‌ ಪೂರಕವಾಗಿ ಬೌಲರ್‌ಗಳು ಆಯ್ಕೆಯಾಗಲಿದ್ದಾರೆ ಎಂದ ಐಸಿಸಿ ಹೇಳಿದೆ.

ಐಸಿಸಿ ಹೇಳಿದ ತಂಡ ಇಂತಿದೆ

ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್‌), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ | T20 World Cup | ವಿಶ್ವ ಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಟೀಮ್​ ಇಂಡಿಯಾ ಆಟಗಾರು ಯಾರು?

Exit mobile version