Site icon Vistara News

IPL 2024 : ಪಾಂಡ್ಯ- ರೋಹಿತ್​; ಮುಂಬೈ ತಂಡದ ನಾಯಕ ಯಾರಾಗಬಹುದು?

Rohit Sharma

ಮುಂಬಯಿ: ಹಾರ್ದಿಕ್ ಪಾಂಡ್ಯ ಅವರನ್ನು ಮರಳಿ ತಂಡಕ್ಕೆ ಕರೆ ತರುವಲ್ಲಿ ಐಪಿಎಲ್​ನ (IPL 2024) ಮುಂಬೈ ಇಂಡಿಯನ್ಸ್ ತಂಡ ಮಾಡಿರುವ ಪ್ರಯತ್ನ ಫಲಕೊಟ್ಟಿದೆ. ಆದರೆ ಅವರ ಮರಳುವಿಕೆಯಿಂದ ಮುಂಬೈ ಇಂಡಿಯನ್ಸ್​ ತಂಡದ ಅಭಿಮಾನಿಗಳಿಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಕೆಲವರು ಸಂತೋಷಪಟ್ಟರೆ ಇನ್ನು ಕೆಲವರು ಮುಂದಿನ ಆವೃತ್ತಿಯಿಂದ ತಂಡದ ನಾಯಕ ಯಾರು ಎಂಬ ಗೊಂದಲಕ್ಕೆ ಬಿದಿದ್ದಾರೆ. ಐಪಿಎಲ್​ ಮೆಗಾ ಹರಾಜಿಗೆ ಒಂದು ವರ್ಷ ಬಾಕಿ ಇದೆ. ಹಾಲಿ ಆವೃತ್ತಿಯಲ್ಲಿ ನಡೆಯುವುದು ಕೇವಲ ಮಿನಿ ಹರಾಜು. ಹೀಗಾಗಿ ರೋಹಿತ್ ಶರ್ಮಾ ಅವರು ಇರುವ ನಡುವೆಯೇ ಪಾಂಡ್ಯ ಅವರನ್ನು ಕರೆತಂದಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ.

ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಏನು ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ನಾಯಕತ್ವ ಆದ್ಯತೆ ವಿಚಾರವೇ ಆಗಿರದಿದ್ದರೆ ಅವರನ್ನು ಕರೆತರುವ ದೊಡ್ಡ ಪ್ರಯತ್ನ ನಡೆಯುತ್ತಿರಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಗೆ ನಾಯಕ ಯಾರು ಎಂಬ ಕೌತುಕ ಸೃಷ್ಟಿಯಾಗಿದೆ.

ರೋಹಿತ್ ಶರ್ಮಾಗೆ ನಿರ್ಧಾರವೇನು ?

ರೋಹಿತ್ ಶರ್ಮಅಗೆ 36 ವರ್ಷ. ಆದರೆ ಅವರು ಐದು ಐಪಿಎಲ್ ಟ್ರೋಫಿ ಗೆದ್ದ ನಾಯಕರಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಲೆಜೆಂಡರಿ ನಾಯಕ ಎಂಎಸ್ ಧೋನಿ ಮಾತ್ರ ಅವರಿಗೆ ಸರಿಸಾಟಿಯಾಗಬಲ್ಲರು. ಆದಾಗ್ಯೂ, ವಿಶ್ವಕಪ್ 2023ರ ಫೈನಲ್ ಸೋಲಿನ ಬಳಿಕ ರೋಹಿತ್ ತಮ್ಮ ವೃತ್ತಿಜೀವನದ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಅವರು ಸ್ಫೋಟಕ ಟಿ 20 ಬ್ಯಾಟರ್​ನಂತೆ ವಿಶ್ವಕಪ್ ಆಡಿದರೂ, 597 ರನ್ ಗಳಿಸಿದ್ದರೂ, ಟಿ 20 ಮತ್ತು ಐಪಿಎಲ್​ನಲ್ಲಿ ಅವರ ರನ್​ ಗಳಿಕೆ ಪ್ರಮಾಣ ಕುಸಿದಿದೆ. ಹೀಗಾಗಿ ಐಪಿಎಲ್ 2024 ರಲ್ಲಿ ಅವರ ಫಾರ್ಮ್​ ಬಗ್ಗೆ ಚಿಂತೆ ಶುರುವಾಗಿದೆ.

ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ರೋಹಿತ್ ಶರ್ಮಾ ಕೇವಲ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. 2016ರಿಂದೀಚೆಗೆ ಅವರ ಬ್ಯಾಟಿಂಗ್ ಸರಾಸರಿ 30ರ ಗಡಿ ದಾಟಿಲ್ಲ. ಇದು ಕಳವಳಕಾರಿ ಸಂಗತಿ. ರೋಹಿತ್ ಶರ್ಮಾ ತಮ್ಮ ಭಾರತ ವೃತ್ತಿಜೀವನವನ್ನು ವಿಸ್ತರಿಸಲು ಕನಿಷ್ಠ ಒಂದು ಸ್ವರೂಪವನ್ನು ತ್ಯಜಿಸಲು ಯೋಚಿಸುತ್ತಿರುವುದರಿಂದ, ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಅವರು ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ ಮತ್ತು ವಿಶ್ವ ಕಪ್​​ನಲ್ಲಿ ಮಾಡಿದಂತೆ ಮುಕ್ತವಾಗಿ ಆಡಲಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಅವಕಾಶವೇನು ?

ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್​ನಲ್ಇ ಮತ್ತೆ ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಆಡುವ ಅಗತ್ಯವಿದೆಯೇ ? ಅದಿನ್ನೂ ಸರಣಿ ಶುರುವಾಗುವ ತನಕ ಪ್ರಶ್ನಾರ್ಥಕ. ಐಪಿಎಲ್ 2024 ರ ಕೊನೆಯಲ್ಲಿ ಹಾರ್ದಿಕ್, ರೋಹಿತ್ ಅವರಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

2024ರ ಟಿ20 ವಿಶ್ವಕಪ್​​ಗೆ ಮುನ್ನ ಹಾರ್ದಿಕ್ ಪಾಂಡ್ಯ ಭಾರತದ ನಿಯೋಜಿತ ನಾಯಕರಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಆಡದಿರುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ವಹಿಸಿಕೊಳ್ಳುವುದಕ್ಕಿಂತ ಉತ್ತಮ ಆಟಗಾರ ಬೇರೆ ಯಾರೂ ಇಲ್ಲ. ಎಂಐ ಪರಂಪರೆಯನ್ನು ಅವರಿಗೆ ಮುಂದುವರಿಸುವ ಅವಕಾಶವಿದೆ. ಅವರು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿರುವುದು ಮಾತ್ರವಲ್ಲದೆ, ಚೊಚ್ಚಲ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದರು.

ಇದನ್ನೂ ಓದಿ : IPL 2024: ಪಾಂಡ್ಯ ರೀತಿ ಮುಂಬೈಗೆ ಹಾರಲು ಯತ್ನಿಸಿ 2010ರಲ್ಲಿ ಬ್ಯಾನ್‌ ಆಗಿದ್ದ ಜಡೇಜಾ; ಏಕೆ?

ಮುಂಬೈ ಇಂಡಿಯನ್ಸ್​​ನಲ್ಲಿ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಎಂದು ಹಿಂದೆಯೇ ಹೇಳಲಾಗಿತ್ತು. ಆದರೆ, 2022 ರಲ್ಲಿ ಮೆಗಾ ಹರಾಜಿಗೆ ಮುಂಚಿತವಾಗಿ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಕೈಬಿಟ್ಟಾಗ ಅಚ್ಚರಿ ಉಂಟಾಗಿತ್ತು. ಇದೀಗ ಅವರು ತವರಿಗೆ ಮರಳುತ್ತಿದ್ದಂತೆ ಮತ್ತೆ ನಾಯಕತ್ವದ ವಿಚಾರ ಚರ್ಚೆಗೆ ಬಂದಿದೆ.

Exit mobile version