Site icon Vistara News

IndvsSL | ಲಂಕಾ ವಿರುದ್ಧ ಆಡಿದ ಶಿವಂ ಮಾವಿಗೆ ಯಾಕೆ 100ನೇ ಸಂಖ್ಯೆಯ ಕ್ಯಾಪ್​, ಗಿಲ್​ಗೆ ಯಾಕೆ 101?

INDvsSL

ಮುಂಬಯಿ : ಯುವ ಬೌಲರ್​ ಶಿವಂ ಮಾವಿ ಹಾಗೂ ಆರಂಭಿಕ ಬ್ಯಾಟರ್​ ಶುಬ್ಮನ್​ ಗಿಲ್​ ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ (IndvsSL) ಟಿ20 ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ಟಾಸ್​ಗೆ ಮೊದಲು ಕೋಚ್​ ರಾಹುಲ್​ ದ್ರಾವಿಡ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರು ಈ ಇಬ್ಬರು ಆಟಗಾರರಿಗೆ ಕ್ಯಾಪ್​ ಹಸ್ತಾಂತರ ಮಾಡಿದರು. ಈ ವೇಳೆ ಮಾವಿಗೆ 100 ಸಂಖ್ಯೆ ಇರುವ ಕ್ಯಾಪ್​ ಕೊಟ್ಟರೆ, ಗಿಲ್​ಗೆ 101 ಸಂಖ್ಯೆಯನ್ನು ನೀಡಲಾಯಿತು.

ಈ ಇಬ್ಬರು ಪ್ರತಿಭಾವಂತ ಆಟಗಾರರಿಗೆ ಅನುಕ್ರಮವಾಗಿ ಈ ಎರಡು ಸಂಖ್ಯೆಗಳನ್ನು ಕೊಡುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗಳು ಇಂಟರ್ನೆಟ್​ನಲ್ಲಿ ಹರಿದಾಡಿದವು. ಬಳಿಕ ಕೆಲವರು ಇದಕ್ಕೆ ಉತ್ತರಗಳನ್ನು ಕೊಟ್ಟರು. ಟೀಮ್​ ಇಂಡಿಯಾದ ಪರ ಒಂದೇ ಸಲ ಇಬ್ಬರು ಆಟಗಾರರು ಪದಾರ್ಪಣೆ ಮಾಡುವುದಾದರೆ ಹೆಸರಿನ ಇಂಗ್ಲಿಷ್​ ಅಕ್ಷರಗಳ ಪ್ರಕಾರ ಸಂಖ್ಯೆಯನ್ನು ನೀಡಲಾಗುತ್ತದೆ. ಅಂದರೆ (Shivam) ಹೆಸರು (Shubman) ಅವರಿಗಿಂತ ಮುಂದೆ ಬರುತ್ತದೆ. ಇವರಿಬ್ಬರ ಹೆಸರಿನ ಮೊದಲೆರಡು ಅಕ್ಷರಗಳೂ (SH) ಆಗಿದ್ದರೂ ಮೂರನೇ ಅಕ್ಷರಕ್ಕೆ ಬಂದಾಗ ಶಿವಂ ಅವರ (I) ಶುಬ್ಮನ್​ ಅವರ (U) ಗಿಂತ ಮೊದಲು ಬರುತ್ತದೆ. ಹೀಗಾಗಿ ಮಾವಿಗೆ 100ನೇ ಸಂಖ್ಯೆ ಲಭಿಸಿದೆ.

ಕ್ರಿಕೆಟ್​ನಲ್ಲಿ ಟೋಪಿ ಸಂಖ್ಯೆಯ ಮೂಲಕ ಆ ತಂಡದ ಪರ ಎಷ್ಟು ಮಂದಿ ಇದುವರೆಗೆ ಆಡಿದ್ದಾರೆ ಎಂಬುದನ್ನು ಪತ್ತೆ ಗುರುತಿಸಬಹುದು. ಅಂದರೆ ಶಿವಂ ಅವರು ಟೀಮ್ ಇಂಡಿಯಾ ಪರ ಟಿ20 ಮಾದರಿಗೆ ಪದಾರ್ಪಣೆ ಮಾಡಿರುವ 100ನೇ ಆಟಗಾರ ಹಾಗೂ ಗಿಲ್​ 101ನೆಯವರು.

ಇದನ್ನೂ ಓದಿ | INDvsSL | ಶಿವಂ ಮಾವಿ, ಶುಬ್ಮನ್​ ಗಿಲ್​ ಟಿ20 ಮಾದರಿಗೆ ಎಂಟ್ರಿ, ಅರ್ಶ್​ದೀಪ್​ ಸಿಂಗ್​ ಅಲಭ್ಯ

Exit mobile version