Site icon Vistara News

INDvsNZ T20 | ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ರೋಹಿತ್​ ಮತ್ತು ವಿರಾಟ್​ಗೆ ಅವಕಾಶ ಯಾಕಿಲ್ಲ?

rohit sharma and virat kohli

ಮುಂಬಯಿ: ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಗೆ (INDvsNZ T20) ಶುಕ್ರವಾರ ಸಂಜೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಹಾರ್ದಿಕ್​ ಪಾಂಡ್ಯಗೆ ಮತ್ತೆ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ವಹಿಸಲಾಗಿದೆ. ಅದೇ ರೀತಿ ಋತುರಾಜ್​ ಗಾಯಕ್ವಾಡ್​, ಪೃಥ್ವಿ ಶಾ, ರಾಹುಲ್​ ತ್ರಿಪಾಠಿ ಸೇರಿದಂತೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಹಿರಿಯ ಆಟಗಾರರಾದ ರೋಹಿತ್​ ಶರ್ಮ ಹಾಗೂ ಕೆ. ಎಲ್​ ರಾಹುಲ್​ಗೆ ತಂಡದಲ್ಲಿ ಅವಕಾಶ ನೀಡಿಲ್ಲ. ಅದು ಯಾಕೆ ಎಂಬುದೇ ಸದ್ಯದ ಚರ್ಚೆ.

ರೊಹಿತ್​ ಶರ್ಮಗೆ 35 ವರ್ಷ ಹಾಗೂ ವಿರಾಟ್​ ಕೊಹ್ಲಿಗೆ 34 ವರ್ಷ. ಆದಾಗ್ಯೂ ಅವರಿಬ್ಬರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದಾಗಿ ಅವರಿಗೆ ಅವಕಾಶ ನೀಡಬೇಕಿತ್ತು ಎಂಬ ಕೂಗು ಕೇಳಿ ಬಂದಿತ್ತು. ಇವೆಲ್ಲದರ ನಡುವೆ ಅವರಿಗೆ ಯಾಕೆ ಅವಕಾಶ ನೀಡಿಲ್ಲ ಎಂಬುದಕ್ಕೆ ಮೂರು ಕಾರಣ ನೀಡಲಾಗುತ್ತಿದೆ.

2024ರ ಟಿ20 ವಿಶ್ವ ಕಪ್​ಗೆ ಮೊದಲು ಯುವ ಆಟಗಾರರ ತಂಡವನ್ನು ಕಟ್ಟುವುದು ಬಿಸಿಸಿಐ ಉದ್ದೇಶವಾಗಿದೆ. ಹೀಗಾಗಿ ಹೊಸ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಪೃಥ್ವಿ ಶಾ. ಇಶಾನ್​ ಕಿಶನ್​ ಅವರಂಥ ಯುವ ಆಟಗಾರಿಗೆ ಅವಕಾಶ ಕೊಟ್ಟು ಸ್ಫೋಟಕ ಬ್ಯಾಟಿಂಗ್​ಗೆ ಪ್ರೇರಣೆ ಕೊಡುವುದು ಬಿಸಿಸಿಐ ಉದ್ದೇಶವಾಗಿದೆ.

ಭಾರತ ತಂಡದಲ್ಲಿ ಗಾಯದ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಹಿರಿಯ ಆಟಗಾರರಿಗೆ ಅವಕಾಶ ನೀಡುವುದು ಅನಿವಾರ್ಯ. ಅದೇ ರೀತಿ ನಿರಂತರ ಕ್ರಿಕೆಟ್​ನಿಂದ ಹಿರಿಯ ಆಟಗಾರರಿಗೆ ಬಿಡುವು ಕೊಡಲು ರೋಹಿತ್​ ಮತ್ತು ವಿರಾಟ್​ ಅವರನ್ನು ಟಿ20 ತಂಡದಿಂದ ಹೊರಕ್ಕೆ ಇಡಲಾಗುತ್ತಿದೆ. ಮುಂದಿನ ವಿಶ್ವ ಕಪ್​ ತಂಡದಲ್ಲಿ ಈ ಇಬ್ಬರು ಆಟಗಾರರು ಇರಬೇಕು ಎಂಬುದು ಬಿಸಿಸಿಐ ಗುರಿಯಾಗಿದೆ,

ಹೊಸ ಪ್ರತಿಭೆಗಳನ್ನು ಪರೀಕ್ಷೆಗೆ ಒಳಪಡಿಸುವುದು ಕೂಡ ಇದರ ಉದ್ದೇಶವಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಕಿರಿಯ ಆಟಗಾರರನ್ನು ಪರೀಕ್ಷೆಗೆ ಒಳಪಡಿಸುವುದು ಬಿಸಿಸಿಐ ಯೋಜನೆಯಾಗಿದೆ. ನಾನಾ ಟೂರ್ನಿಗಳಲ್ಲಿ ಅವರಿಗೆ ಅವಕಾಶ ನೀಡಿ ಸಾಮರ್ಥ್ಯ ಪರೀಕ್ಷೆ ನಡೆಸಲಿದೆ.

ನ್ಯೂಜಿಲ್ಯಾಂಡ್​ ಸರಣಿಗೆ ಭಾರತ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್​ಕೀಪರ್), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್​ಕೀಪರ್​), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯಜ್ವೇಂದ್ರ ಚಹಲ್, ಅರ್ಶ್​ದೀಪ್​ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ, ಮುಖೇಶ್ ಕುಮಾರ್.

Exit mobile version