Site icon Vistara News

ICC World Cup 2023 : ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಏಕೆ ಆಡಿಲ್ಲ ಗೊತ್ತಾ?

Ben stokes

ಅಹಮದಾಬಾದ್​ : ಕೊನೆಗೂ ವಿಶ್ವ ಕಪ್ (ICC World Cup 2023) ಆರಂಭಗೊಂಡಿದೆ. ಅಕ್ಟೋಬರ್ 5 ರಂದು ಅಹಮದಾಬಾದ್​ನ​ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಆದಾಗ್ಯೂ, ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಣ್ಣ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಎಂದು ನಾಯಕ ಜೋಸ್ ಬಟ್ಲರ್ ಮಾಹಿತಿ ನೀಡಿದ್ದಾರೆ. ಮೊದಲ ಪಂದ್ಯಕ್ಕೆ ಮುಂಚಿತವಾಗಿ ಇಂಗ್ಲೆಂಡ್​ಗೆ ಇದು ದೊಡ್ಡ ಹಿನ್ನಡೆಯಾಗಿದೆ.

ನಾವು ಮೊದಲು ಬೌಲಿಂಗ್ ಮಾಡಲು ನೋಡುತ್ತಿದ್ದೆವು. ನಾವು ನ್ಯೂಜಿಲೆಂಡ್ ವಿರುದ್ಧ ಉತ್ತಮ ಸರಣಿಯನ್ನು ಹೊಂದಿದ್ದೇವೆ ಪ್ರತಿಯೊಬ್ಬರೂ ನಿಜವಾಗಿಯೂ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೆನ್ ಈ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಅವರಿಗೆ ಗಾಯವಾಗಿದೆ,” ಎಂದು ಜೋಸ್ ಬಟ್ಲರ್ ಟಾಸ್ ಬಳಿಕ ಹೇಳಿದ್ದಾರೆ.

ಕೇನ್ ವಿಲಿಯಮ್ಸನ್, ಲಾಕಿ ಫರ್ಗುಸನ್, ಇಶ್ ಸೋಧಿ ಅಲಭ್ಯ

ಇಂಗ್ಲೆಂಡ್​ನ ಸ್ಟೋಕ್ಸ್ ಅವರಲ್ಲದೆ, ನ್ಯೂಜಿಲೆಂಡ್ ತಂಡದ ಹಲವಾರು ಸ್ಟಾರ್ ಆಟಗಾರರು ಮೊದಲ ಪಂದ್ಯದಲ್ಲಿ ಆಡಿಲ್ಲ. ಅನುಭವಿ ಬ್ಯಾಟರ್​ ಕೇನ್ ವಿಲಿಯಮ್ಸನ್ ಈಗಾಗಲೇ ಮೊದಲ ಪಂದ್ಯದಿಂದ ಹೊರಗುಳಿಯಲು ಸಜ್ಜಾಗಿದ್ದರೆ, ಸ್ಪಿನ್ನರ್ ಇಶ್ ಸೋಧಿ ಮತ್ತು ವೇಗಿ ಟಿಮ್ ಸೌಥಿ ಅವರೊಂದಿಗೆ ಲಾಕಿ ಫರ್ಗುಸನ್ ಸಣ್ಣ ಗಾಯದಿಂದಾಗಿ ಅಲಭ್ಯರಾಗಿದ್ದಾರೆ ಎಂದು ಟಾಸ್ ಸಮಯದಲ್ಲಿ ನಾಯಕ ಲಾಥಮ್ ಮಾಹಿತಿ ನೀಡಿದರು.

ಇದನ್ನೂ ಓದಿ : ICC World Cup 2023 : ತಾಕತ್ತಿದ್ದರೆ ಔಟ್​ ಮಾಡಿ; ಭಾರತದ ಸ್ಪಿನ್ ದಾಳಿಗೆ ಸವಾಲೆಸೆದ ಆಸ್ಟ್ರೇಲಿಯಾ ನಾಯಕ!

ಪರಿಸ್ಥಿತಿ ಉತ್ತಮವಾಗಿ ಕಾಣುತ್ತಿದೆ. ನಾವು ಬ್ಯಾಟ್​ನೊಂದಿಗೆ ನಮಗೆ ಅವಕಾಶ ಸಿಕ್ಕಿದೆ ಎಂದು ಭಾವಿಸುತ್ತೇವೆ. ಆಟಗಾರರು ವಿಶ್ವದ ನಾನಾ ಭಾಗಗಳಲ್ಲಿದ್ದರು. ವಾರದ ಹಿಂದೆ ಇಲ್ಲಿ ಒಟ್ಟುಗೂಡಿದ್ದೇವೆ. ವಿಶ್ವಕಪ್ ಗೆ ಮುನ್ನ ನೀವು ಆಡುವ ಯಾವುದೇ ಸ್ಪರ್ಧೆ ಮುಖ್ಯ. ಕೇನ್ ಇನ್ನೂ ಸಿದ್ಧವಾಗಿಲ್ಲ. ಉತ್ತಮವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಫರ್ಗುಸನ್ ಅವರು ಸೋಧಿ, ಕೇನ್ ಮತ್ತು ಟಿಮ್ ಸೌಥಿ ಅವರೊಂದಿಗೆ ತಂಡದಿಂದ ಹೊರಗುಳಿದಿದ್ದಾರೆ. ಎಂದು ಲಾಥಮ್ ಟಾಸ್ ನಂತರ ಹೇಳಿದರು.

ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟ್ ಮಾಡುವಂತೆ ಆಹ್ವಾನ ನೀಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್ ತಂಡ ನಿಯಮಿತವಾಗಿ ವಿಕೆಟ್​ಗಳನ್ನು ಕಳೆದುಕೊಂಡ ಹೊರತಾಗಿಯೂ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟ ಮಾಡಿಕೊಂಡು 282 ರನ್ ಬಾರಿಸಿದೆ. ಜೋ ರೂಟ್​ 77 ರನ್​ ಬಾರಿಸಿ ತಂಡಕ್ಕೆ ನೆರವಾದರೆ, ಜೋಸ್ ಬಟ್ಲರ್​ 43 ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

Exit mobile version