ಮುಂಬಯಿ: ಭಾರತ ಕ್ರಿಕೆಟ್ ತಂಡ ಸೀಮಿತ ಓವರ್ಗಳ ಸರಣಿಯಲ್ಲಿ ಮೂರು ಸ್ಟಾರ್ಗಳು ಇರುವಂತಹ ಜೆರ್ಸಿಯಲ್ಲಿಯೇ ಆಡುವುದು ವಾಡಿಕೆ. ಆದರೆ ಈ ಬಾರಿಯ ಟಿ20 ವಿಶ್ವ ಕಪ್ (T20 World Cup) ನಲ್ಲಿ ಈ ಮೂರು ಸ್ಟಾರ್ಗಳು ಕಾಣ ಸಿಗದು ಇದಕ್ಕೆ ಕಾರಣ 2007ರ ಟಿ 20 ವಿಶ್ವ ಕಪ್.
ಭಾರತ ಮೊದಲ ಬಾರಿ 1983ರಲ್ಲಿ ಕಪಿಲ್ದೇವ್ ಸಾರಥ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕ ದಿನ ವಿಶ್ವ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದಾದ ಬಳಿಕ 2011ರಲ್ಲಿ ಭಾರತ ಏಕ ದಿನ ವಿಶ್ವ ಕಪ್ ಗೆದ್ದದ್ದು ಧೋನಿ ನಾಯಕತ್ವದಲ್ಲಿ. ಇದಕ್ಕೂ ಮುನ್ನ 2007ರಲ್ಲಿ ಧೋನಿ ಟಿ20 ವಿಶ್ವ ಕಪ್ ಗೆದ್ದಿದ್ದರು. ಈ ಮೂರು ವಿಶ್ವಕಪ್ ಗೆದ್ದಾಗಲೂ ಭಾರತ ಮೂರು ಸ್ಟಾರ್ಗಳ ಜರ್ಸಿಯನ್ನೇ ಭಾರತ ತೊಟ್ಟಿತ್ತು. ಆದರೆ ಈ ಬಾರಿ ಮಾತ್ರ ಭಾರತ ತಂಡ ಒಂದು ಸ್ಟಾರ್ ಹೊಂದಿರುವ ಜೆರ್ಸಿಯಲ್ಲಿ ವಿಶ್ವ ಕಪ್ ಆಡಲು ಇಳಿಯಲಿದೆ.
ಈ ಬಾರಿ ರೋಹಿತ್ ಸಾರಥ್ಯದ ಟೀಮ್ ಇಂಡಿಯಾ 2007ರ ವಿಶ್ವ ಕಪ್ ಗೆಲುವಿನ ಪ್ರತೀಕವಾಗಿ ಒಂದು ಸ್ಟಾರ್ವುಳ್ಳ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಭಾರತ 2007ರಲ್ಲಿ ಚಾಂಪಿಯನ್ ಆದ ಬಳಿಕ ಮತ್ತೆ ಚಾಂಪಿಯನ್ ಆಗಿಲ್ಲ ಬರೋಬ್ಬರಿ 15 ವರ್ಷಗಳೇ ಕಳೆದಿವೆ. ಆದ್ದರಿಂದ ಚೊಚ್ಚಲ ಟಿ20 ವಿಶ್ವ ಕಪ್ನಲ್ಲಿ ಚಾಂಪಿಯನ್ ಆದ ಭಾರತ ತಂಡದ ಸ್ಫೂರ್ತಿಯನ್ನು ಮುಂದಿಟ್ಟು ಈ ಬಾರಿ ಒಂದು ಸ್ಟಾರ್ವುಳ್ಳ ಜೆರ್ಸಿಯಲ್ಲಿ ಭಾರತ ತಂಡ ಕಾಣಿಸಿಕೊಳ್ಳಲಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ.
ಮೀಸಲು ಆಟಗಾರರು:
ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ಶಾರ್ದೂಲ್ ಠಾಕೂರ್.
ಇದನ್ನೂ ಓದಿ | T20 World Cup | ವಿಶ್ವ ಕಪ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರರು ಯಾರು?