ಸಿಡ್ನಿ : ಪಾಕಿಸ್ತಾನ ತಂಡದ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಜಯಭೇರಿ ಬಾರಿಸಿರುವ ಭಾರತ ತಂಡ (Team India) ನೆದರ್ಲೆಂಡ್ಸ್ ವಿರುದ್ಧದ ಹಣಾಹಣಿಗೆ ಸಜ್ಜಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಆಟಗಾರರು ಜತೆಯಾಗಿ ಸಿಡ್ನಿ ಸೇರಿಕೊಂಡಿದ್ದಾರೆ. ಈ ನಡುವೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಇಳಿದ ಭಾರತ ತಂಡದ ಅಟಗಾರರ ಜತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಎಲ್ಲ ಸಂದರ್ಭಗಳನ್ನು ಟೀಮ್ ಇಂಡಿಯಾದ ವಿಡಿಯೊಗ್ರಾಫರ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ಏತನ್ಮಧ್ಯೆ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಅಶ್ವಿನ್ ಅವರ ಬೆನ್ನ ಮೇಲೆ ಕೈಯಿಟ್ಟು ನಿನ್ನೆ ನನ್ನ ಮಾನ ಉಳಿಸಿದ ಎಂಬುದಾಗಿ ಹೇಳಿದ್ದಾರೆ. ಅವರು ಈ ರೀತಿ ಹೇಳುವುದಕ್ಕೊಂದು ಕಾರಣವಿದೆ.
ಭಾನುವಾರ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಕೊನೇ ಓವರ್‌ನ ಥ್ರಿಲ್‌ನೊಂದಿಗೆ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಅಂತೆಯೇ ಕೊನೇ ಓವರ್‌ನ ಕೊನೇ ಎರಡು ಎಸೆತದಲ್ಲಿ ಭಾರತಕ್ಕೆ ೨ ರನ್ ಬೇಕಾಗಿತ್ತು. ಆದರೆ, ಐದನೇ ಎಸೆತಕ್ಕೆ ದಿನೇಶ್ ಕಾರ್ತಿಕ್ ಅನಗತ್ಯ ರನ್ ಔಟ್ ಆಗಿದ್ದರು. ಇದರಿಂದಾಗಿ ಭಾರತ ತಂಡ ಮತ್ತೊಮ್ಮೆ ಒತ್ತಡಕ್ಕೆ ಬಿದ್ದಿತ್ತು. ಬಳಿಕ ಬ್ಯಾಟ್ ಮಾಡಲು ಬಂದ ಅಶ್ವಿನ್ ಅವರಿಗೆ ಬೌಲರ್ ಮೊಹಮ್ಮದ್ ನವಾಜ್ ಲೆಗ್ ಸೈಡ್‌ನಲ್ಲಿ ಚೆಂಡು ಎಸೆದಿದ್ದರು. ಮುಂದಕ್ಕೆ ಬಂದ ಅಶ್ವಿನ್ ಅದನ್ನು ವೈಡ್ ಅಗಿ ಪರಿವರ್ತಿಸಿದ್ದರು. ಹೀಗಾಗಿ ಭಾರತಕ್ಕೆ ಕೊನೇ ಎಸೆತದಲ್ಲಿ ಒಂದು ರನ್ ಬೇಕಾಯಿತು. ನಂತದ ಎಸೆತವನ್ನು ಅಶ್ವಿನ್ ಲಾಪ್ಟ್ ಮಾಡಿ ಒಂದು ರನ್ ಗಳಿಸಿದ್ದರು. ಅದು ವಿಜಯದ ರನ್. ಒಂದು ವೇಳೆ ಅಶ್ವಿನ್‌ಗೆ ರನ್ ಬಾರಿಸಲು ಸಾಧ್ಯವಾಗದೇ ಹೋಗಿದ್ದರೆ, ಅಭಿಮಾನಿಗಳು ದಿನೇಶ್ ಕಾರ್ತಿಕ್ ಅವರನ್ನು ಸೋಲಿಗೆ ಗುರಿಯಾಗಿಸುತ್ತಿದ್ದರು. ಗೆಲುವಿನ ಎರಡು ರನ್ ಬೇಕಾಗಿದ್ದ ಸಮಯದಲ್ಲಿ ಔಟ್ ಆಗಿದ್ದಕ್ಕೆ ನಿಂದಿಸುತ್ತಿದ್ದರು. ಅಶ್ವಿನ್ ಅವರ ರನ್ ಬಾರಿಸಿದ್ದರಿಂದ ದಿನೇಶ್ ಕಾರ್ತಿಕ್ ಬಚಾವಾಗಿದ್ದಾರೆ. ಅದಕ್ಕಾಗಿ ದಿನೇಶ್ ಕಾರ್ತಿಕ್, ನಿನ್ನೆ ನನ್ನನ್ನು ಪಾರು ಮಾಡಿದವರು ಎಂದು ಹೇಳಿದ್ದಾರೆ.
ಬುಧವಾರ ಭಾರತ ತಂಡ ನೆದರ್ಲೆಂಡ್ಸ್‌ಗೆ ಎದುರಾಗಲಿದೆ. ದೀಪಾವಳಿ ಹಬ್ಬದ ಮುಕ್ತಾಯದ ಬಳಿಕ ಭಾರತ ಮತ್ತೆ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ | Team India | ಪಾಕ್ ಸೋಲಿಸಿದ ಟೀಮ್ ಇಂಡಿಯಾ ಸದಸ್ಯರಿಂದ ಸಿಡ್ನಿಯಲ್ಲಿ ದೀಪಾವಳಿ ಸಂಭ್ರಮ