Site icon Vistara News

Team India | ಸುರೇಶ್‌ ರೈನಾ ಏಕಾಏಕಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದು ಯಾಕೆ?

Team india

ಹೊಸದಿಲ್ಲಿ : ಭಾರತ ತಂಡದ (Team India) ಮಾಜಿ ಸದಸ್ಯ ಹಾಗೂ ಮಧ್ಯಮ ಕ್ರಮಾಂಕದ ಶ್ರೇಷ್ಠ ಬ್ಯಾಟ್ಸ್‌ಮನ್ ಸುರೇಶ್‌ ರೈನಾ ಮಂಗಳವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರೈನಾ ಅವರು ೨೦೨೦ರಲ್ಲಿ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದೀಗ ಅವರು ಎಲ್ಲ ರೀತಿಯ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಮೂಲಕ ಬಿಸಿಸಿಐ ಜತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಹಾಗಾದರೆ ಅವರು, ಈ ನಿರ್ಧಾರ ಕೈಗೊಳ್ಳುವುದಕ್ಕೆ ಪ್ರಮುಖ ಉದ್ದೇಶವಿದೆ.

ಐಪಿಎಲ್‌ ಯಶಸ್ಸಿನ ಬಳಿಕ ನಾನಾ ದೇಶಗಳು ಲೀಗ್ ಮಾದರಿಯ ಕ್ರಿಕೆಟ್‌ ಅನ್ನು ಆರಂಭಿಸಿವೆ. ಐಸಿಸಿ ಕೂಡ ಲೀಗ್‌ಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ಟೂರ್‌ ಪ್ರೋಗ್ರಾಮ್‌ ಅನ್ನು ನಿಗದಿ ಮಾಡುತ್ತಿದೆ. ಅದರಂತೆ ಮುಂದಿನ ವರ್ಷದಿಂದ ಯುಎಇನಲ್ಲಿ ಐಎಲ್‌ಟಿ-೨೦ ಹಾಗೂ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಲೀಗ್‌ ಆರಂಭವಾಗಲಿದೆ. ಈ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ರೈನಾ ವಿದಾಯ ಹೇಳಿದ್ದಾರೆ ಎನ್ನಲಾಗಿದೆ.

ನಿವೃತ್ತಿ ಹೇಳಲೇಬೇಕೇ?

ಬಿಸಿಸಿಐ ನಿಯಮದ ಪ್ರಕಾರ ತನ್ನ ಜತೆ ಒಪ್ಪಂದ ಮಾಡಿಕೊಂಡಿರುವ ಯಾವುದೇ ಕ್ರಿಕೆಟಿಗ ವಿದೇಶಗಳ ಕ್ರಿಕೆಟ್‌ ಲೀಗ್‌ಗಳಲ್ಲಿ ಭಾಗವಹಿಸುವಂತಿಲ್ಲ. ಇತ್ತೀಚೆಗೆ ಮತ್ತೊಮ್ಮೆ ಅದನ್ನು ಸ್ಪಷ್ಟಪಡಿಸಿತ್ತು. ಹೀಗಾಗಿ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿರುವ ಸುರೇಶ್‌ ರೈನಾ ಬಿಸಿಸಿಐ ಜತೆಗಿನ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸುರೇಶ್‌ ರೈನಾ ಅವರು ೨೦೨೦ರ ಆಗಸ್ಟ್‌f ೧೫ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿಯ ಹಾದಿ ಹಿಡಿದಿದ್ದರು. ಆದರೆ, ಐಪಿಎಲ್‌ನಲ್ಲಿ ಆಡುವ ಅವಕಾಶ ಉಳಿಸಿಕೊಂಡಿದ್ದರು. ಅಂತೆಯೇ ೨೦೨೧ರ ಐಪಿಎಲ್‌ನಲ್ಲಿ ಅವರು ಭಾಗವಹಿಸಿದ್ದರು. ಆದರೆ, ೨೦೨೨ನೇ ಆವೃತ್ತಿಗೆ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿತ್ತು. ಹೀಗಾಗಿ ಅವರು ಪರ್ಯಾಯ ಆಯ್ಕೆಗಾಗಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಸುರೇಶ್‌ ರೈನಾ ಅವರು ಅಕ್ಟೋಬರ್‌ ೨೦೨೧ರಲ್ಲಿ ಕೊನೇ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು. ಸಿಎಸ್‌ಕೆ ಪರ ಅವರು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆಡಿದ್ದರು. ಆ ಪಂದ್ಯ ಅಬುಧಾಬಿಯಲ್ಲಿ ನಡೆದಿತ್ತು.

ಭಾರತ ಪರ ಅವರು ೧೮ ಟೆಸ್ಟ್‌, ೨೨೬ ಏಕ ದಿನ ಹಾಗೂ ೭೮ ಟಿ೨೦ ಪಂದ್ಯಗಳಲ್ಲಿ ಆಡಿದ್ದರು. ೨೦೧೧ರಲ್ಲಿ ಏಕ ದಿನ ವಿಶ್ವ ಕಪ್‌ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.

ಇದನ್ನೂ ಓದಿ | Suresh Raina | ಐಪಿಎಲ್‌ಗೂ ಗುಡ್ ಬೈ ಹೇಳಿದ ‘ಒಡಿಐ ಸ್ಪೆಷಲಿಸ್ಟ್’ ಸುರೇಶ್ ರೈನಾ

Exit mobile version