ಮೆಲ್ಬೋರ್ನ್ : ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ರೋಚಕ ಜಯ ದಾಖಲಿಸಿತ್ತು. ಅದರಲ್ಲೂ ಕೊನೇ ಓವರ್ ನಾಟಕೀಯವಾಗಿತ್ತು. ವಿಜಯ ಲಕ್ಷ್ಮೀ ಅತ್ತಿಂದಿತ್ತ ಒಲಾಡಿ ಕೊನೆಗೆ ಟೀಮ್ ಇಂಡಿಯಾ ಪಾಲಿಗೆ ಒಲಿದಿತ್ತು. ಇನ್ನೇನು ಎರಡು ಎಸೆತಗಳಿಗೆ ೨ ರನ್ ಅಗತ್ಯವಿದ್ದ ಸಂದರ್ಭದಲ್ಲೇ ದಿನೇಶ್ ಕಾರ್ತಿಕ್ ವಿಕೆಟ್ ಒಪ್ಪಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಮತ್ತೆ ಒತ್ತಡಕ್ಕೆ ಬಿದ್ದಿತ್ತು. ಆದರೆ, ಒತ್ತಡದ ವೇಳೆ ಬ್ಯಾಟ್ ಮಾಡಲು ಬಂದ ಆರ್. ಅಶ್ವಿನ್ ನಿರುಮ್ಮಳರಾಗಿ ತಂಡವನ್ನು ಗುರಿ ಸೇರಿಸಿದ್ದರು.
ಅಶ್ವಿನ್ ಬ್ಯಾಟ್ ಮಾಡಲು ಇಳಿದಾಗ ಒಂದು ಎಸೆತದಲ್ಲಿ ಭಾರತಕ್ಕೆ ಎರಡು ರನ್ ಬೇಕಾಗಿತ್ತು. ಕ್ರೀಸ್‌ಗೆ ಬಂದ ಅಶ್ವಿನ್‌ಗೆ ವಿರಾಟ್ ಕೊಹ್ಲಿ ಯೋಚನೆ ಮಾಡಿ ಆಡುವಂತೆ ತಿಳಿಸಿದ್ದರು. ಅಂತೆಯೇ ಅಶ್ವಿನ್ ಅವರನ್ನು ಯಾಮಾರಿಸಲು ಬೌಲರ್ ನವಾಜ್ ಲೆಗ್ ಸೈಡ್‌ನಲ್ಲಿ ವೈಡ್ ಎಸೆದಿದ್ದರು. ಒತ್ತಡದಲ್ಲಿರುವ ಬ್ಯಾಟರ್‌ಗಳು ಸಾಮಾನ್ಯವಾಗಿ ಅಂಥ ಎಸೆತಕ್ಕೆ ರನ್ ಬಾರಿಸಲು ಮುಂದಾಗಿ ದೇಹಕ್ಕೆ ತಾಗಿಸಿಕೊಂಡು ಬಿಡುತ್ತಾರೆ. ಅದರೆ, ಅಶ್ವಿನ್ ಮುಂದಕ್ಕೆ ಹೋಗಿ ನಿಂತು ಆ ಎಸೆತ ವೈಡ್ ಆಗುವಂತೆ ಮಾಡಿದರು. ಮುಂದಿನ ಎಸೆತವನ್ನು ಲಾಪ್ಟ್ ಮಾಡಿ ತಂಡದ ಜಯಕ್ಕೆ ಕಾರಣರಾಗಿದ್ದರು.
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಅಶ್ವಿನ್ ಕ್ರೀಸ್‌ಗೆ ಬರುತ್ತಿದ್ದಂತೆ ನಾನು ಬುದ್ಧಿ ಬಳಸಿ ಆಡುವಂತೆ ಹೇಳಿದ್ದೆ. ಅದರೆ, ಅಶ್ವಿನ್ ಅತಿ ಬುದ್ಧಿ ತೋರಿದ್ದಾರೆ ಎಂದು ಬಣ್ಣಿಸಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ೨೦ ಓವರ್‌ಗಳಲ್ಲಿ ೧೫೯ ರನ್ ಬಾರಿಸಿದ್ದರೆ, ಬಳಿಕ ಬ್ಯಾಟ್ ಮಾಡಿದ ಭಾರತ ತಂಡ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೧೬೦ ರನ್ ಬಾರಿಸಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ | IND vs PAK | ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು