Site icon Vistara News

INDvsBAN | ರೋಹಿತ್‌ ಶರ್ಮ ಯಾಕೆ ಮೊದಲೇ ಬ್ಯಾಟ್‌ ಮಾಡಲು ಬರಲಿಲ್ಲ, ಮಾಜಿ ಕ್ರಿಕೆಟಿಗನ ಪ್ರಶ್ನೆ

t20

ಮೀರ್‌ಪುರ್‌ : ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ (INDvsBAN) ಭಾರತ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ೨-೦ ಅಂತರದಿಂದ ಸೋಲು ಕಂಡಿದೆ. ಭಾರತ ತಂಡದ ಬ್ಯಾಟಿಂಗ್‌ ವೈಫಲ್ಯವೇ ಈ ಸ್ಥಿತಿಗೆ ಕಾರಣ ಎಂಬುದು ಸಾಬೀತಾಗಿದೆ. ಪ್ರಮುಖವಾಗಿ ಹಿರಿಯ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತು ಮಾಡುವಲ್ಲಿ ವಿಫಲವಾಗಿದ್ದೇ ಹೀನಾಯ ಸ್ಥಿತಿಗೆ ಕಾರಣ ಎನ್ನಲಾಗಿದೆ. ಆದಾಗ್ಯೂ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾ ಬಳಗಕ್ಕೆ ಕಠಿಣ ಪೈಪೋಟಿ ನೀಡಿದೆ. ಅದರಲ್ಲೂ ಎರಡನೇ ಪಂದ್ಯದಲ್ಲಿ ರೋಹಿತ್‌ ಶರ್ಮ ಅವರ ಸ್ಫೋಟಕ ೫೧ ರನ್‌ಗಳ ನೆರವಿನಿಂದ ಕೇವಲ ಐದು ರನ್‌ಗಳಿಂದ ವೀರೋಚಿತ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ರೋಹಿತ್‌ ಶರ್ಮ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ೯ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಇಳಿದಿದ್ದರು. ಆದಾಗ್ಯೂ ಅವರು ಗೆಲುವಿನ ಭರವಸೆ ಮೂಡಿಸಿ ಕೊನೇ ಹಂತದಲ್ಲಿ ವೈಫಲ್ಯ ಕಂಡಿದ್ದರು. ಈ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌, ರೋಹಿತ್‌ ಇನ್ನೊಂದಿಷ್ಟು ಮೊದಲೇ ಬ್ಯಾಟ್‌ ಮಾಡಲು ಇಳಿದಿಲ್ಲ ಯಾಕೆ ಎಂಬುದಾಗಿ ಪ್ರಶ್ನಿಸಿದ್ದಾರೆ.

“ರೋಹಿತ್‌ ಶರ್ಮ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರಿಗೆ ಪಂದ್ಯ ಗೆಲ್ಲಿಸುವ ಎಲ್ಲ ಸಾಮರ್ಥ್ಯಗಳಿವೆ. ಹೀಗಾಗಿ ಅವರು ೯ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿಯುವ ಬದಲು ಏಳನೇ ಕ್ರಮಾಂಕದಲ್ಲಿ ಆಡಲು ಇಳಿಯಬೇಕಾಗಿತ್ತು ಎಂಬುದಾಗಿ ಅವರು ಹೇಳಿದ್ದಾರೆ.

“ರೋಹಿತ್‌ ಶರ್ಮ ಅವರ ಅಲಭ್ಯತೆಯನ್ನು ಅಕ್ಷರ್ ಪಟೇಲ್‌ ನೀಗಿಸಿದ್ದರು. ಅವರು ಉತ್ತಮವಾಗಿ ಬ್ಯಾಟ್‌ ಮಾಡುವ ಮೂಲಕ ಅರ್ಧ ಶತಕ ಬಾರಿಸಿದ್ದರು. ತಮ್ಮ ಅಗತ್ಯವನ್ನು ಅವರು ಸಾಬೀತು ಮಾಡಿದ್ದರು ಕೂಡ. ಆದರೆ, ರೋಹಿತ್‌ ಶರ್ಮ ಅವರು ಇನ್ನೊಂದಿಷ್ಟು ಮೊದಲೇ ಬ್ಯಾಟ್‌ ಮಾಡುವುದಕ್ಕೆ ಇಳಿದಿದ್ದರೆ ಗೆಲುವು ಭಾರತದ್ದು ಆಗುತ್ತಿತ್ತು,” ಎಂಬುದಾಗಿ ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ | Team India | ಗಾಯಗೊಂಡಿರುವ ರೋಹಿತ್‌ ಶರ್ಮ, ದೀಪಕ್‌ ಚಾಹರ್‌, ಕುಲ್ದೀಪ್‌ ಕೊನೇ ಪಂದ್ಯಕ್ಕೆ ಅಲಭ್ಯ

Exit mobile version