ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್ ಶಾಯ್ ಹೋಪ್, ಭಾನುವಾರ ನಡೆದ ಭಾರತ ವಿರುದ್ಧದ ಏಕದಿನ ಪಂದ್ಯದ ಎರಡನೇ ಹಣಾಹಣಿಯಲ್ಲಿ ವಿಶಿಷ್ಟ ಸಾಧನೆಯೊಂದನ್ನು ಮಾಡಿದ್ದಾರೆ. ಅಲ್ಲದೆ, ಈ ಗರಿಮೆಗೆ ಪಾತ್ರರಾದ ವಿಶ್ವದ ೧೦ನೇ ಕ್ರಿಕೆಟಿಗ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಾಯ್ ಹೋಪ್ ಅವರ ಈ ಸಾಧನೆಯಿಂದಲೇ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಪ್ರವಾಸಿ ಶಿಖರ್ ಧವನ್ ಬಳಗಕ್ಕೆ ೩೧೨ ರನ್‌ಗಳ ಗುರಿಯನ್ನು ನೀಡಲು ಸಾಧ್ಯವಾಯಿತು.
ಶಾಯ್ ಹೋಪ್ ಅವರಿಗೆ ಭಾನುವಾರದ ಪಂದ್ಯ ತಮ್ಮ ವೃತ್ತಿ ಕ್ರಿಕೆಟ್‌ನ ೧೦೦ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯ. ಈ ಪಂದ್ಯದಲ್ಲಿ ಶತಕ (೧೧೫ ರನ್) ಅಮೋಘ ಶತಕ ಬಾರಿಸಿದ್ದಾರೆ. ಈ ಮೂಲಕ ೧೦೦ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ೧೦ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಅಚ್ಚರಿಯೆಂದರೆ ಹಾಲಿ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿರುವ ಶಿಖರ್ ಧವನ್ ಇದಕ್ಕಿಂತ ಮೊದಲು ೧೦೦ರಲ್ಲಿ ಸೆಂಚುರಿ ಸಾಧನೆ ಮಾಡಿದ ಬ್ಯಾಟರ್. ಅವರು ೨೦೧೮ರಲ್ಲಿ ತಮ್ಮ ೧೦೦ನೇ ಏಕದಿನ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು. ಶಿಖರ್ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಈ ಸಾಧನೆ ಮಾಡಿದ್ದರು.
ಶಾಯ್ ಅವರು ಭಾರತ ವಿರುದ್ಧ ೧೨೫ ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಈ ವಿಶಿಷ್ಟ ಸಾಧಕರ ಪಟ್ಟಿಗೆ ಸೇರ್ಪಡೆಗೊಂಡರು. ಇದೇ ವೇಳೆ ಅವರು ಏಕದಿನ ಮಾದರಿಯಲ್ಲಿ ಒಟ್ಟಾರೆ 4185* ಪೇರಿಸಿದರು. ಇದು ವೆಸ್ಟ್ ಇಂಡೀಸ್ ತಂಡದ ಪರ ೧೦೦ ಏಕದಿನ ಪಂದ್ಯಗಳಲ್ಲಿ ಬ್ಯಾಟರ್ ಒಬ್ಬರು ದಾಖಲಿಸಿದ ಗರಿಷ್ಠ ರನ್. ಗೋರ್ಡನ್ ಗ್ರೀನಿಡ್ಜ್ (4177) ಹಾಗೂ ವಿವಿಯನ್ ರಿಡರ್ಡ್ಸ್ (4146) ನಂತರದ ಸ್ಥಾನಗಳಲ್ಲಿ ಇದ್ದಾರೆ.
ಶಾಯ್ ಹೋಪ್ ತಮ್ಮ ೫೦ನೇ ಪಂದ್ಯದಲ್ಲೂ ಐರ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು. ಆ ವೇಳೆ ಅವರ ೧೭೦ ರನ್ ಕಲೆ ಹಾಕಿದ್ದರು.
100ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಸಾಧಕರ ಪಟ್ಟಿ ಇಂತಿದೆ
೧) ಗೋರ್ಡನ್ ಗ್ರೀನಿಡ್ಜ್ (೧೦೨* ರನ್) ೧೯೮೮
೨) ಕ್ರಿಸ್ ಕೈರ್ನ್ಸ್ (೧೧೧ ರನ್) ೧೯೯೯
೩) ಮೊಹಮ್ಮದ್ ಯೂಸುಫ್ (೧೨೯) ೨೦೦೨
೪) ಕುಮಾರ್ ಸಂಗಕ್ಕಾರ (೧೦೧) ೨೦೦೪
೫) ಕ್ರಿಸ್ ಗೇಲ್ (೧೩೨*) ೨೦೦೪
೬) ಮಾರ್ಕ್ ಟೆಸ್ಕೋಥಿಕ್ (೧೦೦*) ೨೦೦೫
೭) ರಾಮ್‌ನರೇಶ್ ಸರ್ವಾನ್ (೧೧೫*) ೨೦೦೬
೮) ಡೇವಿಡ್ ವಾರ್ನರ್ (೧೨೪) ೨೦೧೭
೯) ಶಿಖರ್ ಧವನ್ (೧೦೯) ೨೦೧೮
೧೦) ಶಾಯ್ ಹೋಪ್ (೧೧೫) ೨೦೨೨
ಇದನ್ನೂ ಓದಿ | the 6ixty: ಹೊಸ ಮಾದರಿಯ ಕ್ರಿಕೆಟ್ ಲೀಗ್ ಜಾರಿಗೆ ತಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ