ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ (indvs wi) ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಟೀಂ ಇಂಡಿಯಾ, ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಆಗಸ್ಟ್ 1ರ ಮಂಗಳವಾರ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಕೆರಿಬಿಯನ್ ತಂಡವು 2019ರ ನಂತರ ಮೆನ್ ಇನ್ ಬ್ಲೂ ವಿರುದ್ಧ ಮೊದಲ ಗೆಲುವನ್ನು ಸಾಧಿಸಿತು. ಮೊದಲ ಏಕದಿನ ಪಂದ್ಯದಲ್ಲಿ ಆರಾಮದಾಯಕ ಗೆಲುವಿನ ನಂತರ, ಟೀಮ್ ಇಂಡಿಯಾ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿದ್ದರಿಂದ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿತು. ಆದರೆ ಅದರಿಂದ ಪ್ರತಿಕೂಲ ಫಲಿತಾಂಶ ಮೂಡಿ ಬಂತು.
ಎರಡನೇ ಪಂದ್ಯದ ಗೆಲುವಿನ ಬಳಿಕ ವಿಂಡೀಸ್ ತಂಡ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿತು. ಅದರ ಜತೆಗೆ ಭಾರತ ತಂಡ ಭಾರೀ ಟಿಕೆಗಳನ್ನು ಎದುರಿಸಿತು. ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ ಸಮೀಪಿಸುತ್ತಿರುವುದರಿಂದ, ಟೀಮ್ ಇಂಡಿಯಾ ಉತ್ತಮ ತಂಡವನ್ನು ರೂಪಿಸಲು ಪ್ರಯತ್ನ ಮಾಡುತ್ತಿದೆ. ಏತನ್ಮಧ್ಯೆ, ಕೊಹ್ಲಿ ಮತ್ತು ರೋಹಿತ್ ಅವರನ್ನು ತಂಡದಿಂದ ಕೈಬಿಟ್ಟ ಪ್ರಯೋಗದ ಬಗ್ಗೆ ಬೇಸರವೂ ವ್ಯಕ್ತವಾಗಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಅವರಿಬ್ಬರೂ ಆಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಎರಡನೇ ಟಿ 20 ಪಂದ್ಯದ ಸೋಲಿನ ನಂತರವೂ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವಕಾಶ ಪಡೆಯಬಹುದೇ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.
ಇದನ್ನೂ ಓದಿ : Team India : ಗಾಯದ ನಡುವೆ ಐಪಿಎಲ್ ಆಡುವವರು ಭಾರತ ತಂಡಕ್ಕೆ ಯಾಕೆ ಆಡುವುದಿಲ್ಲ; ಕಪಿಲ್ದೇವ್ ಪ್ರಶ್ನೆ
ವಿಂಡೀಸ್ ತಂಡ ಸರಣಿ ಜಯ ಗಳಿಸುವ ಗುರಿ ಹೊಂದಿದ್ದು, ಏಕದಿನ ವಿಶ್ವ ಕಪ್ಗೆ ಮುನ್ನ ಭಾರತದ ಅಭಿಯಾನಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಗಳಿವೆ.. ಮತ್ತೊಂದೆಡೆ, ಟಿ20 ಸರಣಿಗೆ ಹೋಗುವ ಮೊದಲು ಮೆನ್ ಇನ್ ಬ್ಲೂ ಅದ್ಭುತ ಗೆಲುವನ್ನು ದಾಖಲಿಸುವತ್ತ ಚಿತ್ರ ನೆಟ್ಟಿದೆ. ಹಿಂದಿನ ಏಕದಿನ ಪಂದ್ಯದಲ್ಲಿನ ಗೆಲುವು ಖಂಡಿತವಾಗಿಯೂ ಮೂರನೇ ಪಂದ್ಯಕ್ಕೆ ಮುಂಚಿತವಾಗಿ ವಿಂಡೀಸ್ ಬಳಗದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ತಂಡವು ಅಂತಿಮ ಪಂದ್ಯಕ್ಕೆ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
ಸಂಭಾವ್ಯ ತಂಡಗಳು
ವೆಸ್ಟ್ ಇಂಡೀಸ್ : ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಾಯ್ ಹೋಪ್ (ನಾಯಕ), ಶಿಮ್ರಾನ್ ಹೆಟ್ಮೇರ್, ಕೀಸಿ ಕಾರ್ಟಿ, ರೊಮಾರಿಯೊ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್ ಭಾರತ ಮುಖಾಮುಖಿ
- ಆಡಿದ ಪಂದ್ಯಗಳು – 141
- ವೆಸ್ಟ್ ಇಂಡೀಸ್ ಗೆಲುವು- 64
- ಭಾರತ ಗೆಲುವು – 71
- ಟೈ – 2
- ಫಲಿತಾಂಶ ಇಲ್ಲ – 4
ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು
- ಪಂದ್ಯದ ಸಮಯ: ಸಂಜೆ 07:00 ಗಂಟೆಗೆ
- ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್
- ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಮತ್ತು ಫ್ಯಾನ್ಕೋಡ್