Site icon Vistara News

IND VS NZ: ಟೀಮ್​ ಇಂಡಿಯಾ ಪರ ಪದಾರ್ಪಣೆ ಮಾಡಲಿದ್ದಾರಾ ಮುಖೇಶ್ ಕುಮಾರ್?

Mukesh Kumar

ರಾಂಚಿ: ನ್ಯೂಜಿಲ್ಯಾಂಡ್(IND VS NZ)​ ವಿರುದ್ಧ ಇಂದು(ಶುಕ್ರವಾರ ಜ.27) ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಬಿಹಾರ ಮೂಲದ ಕ್ರಿಕೆಟಿಗ ಮುಖೇಶ್ ಕುಮಾರ್(Mukesh Kumar) ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ಕಳೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದರೂ ಮುಖೇಶ್ ಕುಮಾರ್​ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಕಿವೀಸ್​ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಮ್ರಾಮ್​ ಮಲಿಕ್​ ಬದಲಿಗೆ ಅವರು ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ಇದನ್ನೂ ಓದಿ IND VS NZ: ಮೊದಲ ಟಿ20; ಭಾರತದ ಇನಿಂಗ್ಸ್​ ಆರಂಭಿಕರನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ!

ಐಪಿಎಲ್​ನಲ್ಲಿ ಭಾರಿ ಬೇಡಿಕೆ

ಬಂಗಾಲ ಪರ ದೇಶೀಯ ಕ್ರಿಕೆಟ್​ ಆಡುವ ಮುಖೇಶ್​ ಈ ಬಾರಿಯ ಐಪಿಎಲ್​ ಮಿನಿ ಹರಾಜಿನಲ್ಲಿ 5 ಕೋಟಿ ರೂಪಾಯಿಗೆ ಡೆಲ್ಲಿ ತಂಡ ಸೇರಿಕೊಂಡಿದ್ದರು. ಇದರ ಬೆನ್ನಲ್ಲೇ ಭಾರತ ತಂಡಕ್ಕೂ ಎಂಟ್ರಿ ಸಿಕ್ಕಿತ್ತು. ಕಳೆದ ಸೀಸನ್‌ನಲ್ಲಿ ಮಾರಾಟವಾಗದೇ ಉಳಿದಿದ್ದ ಅವರು ಈ ಬಾರಿ 20 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿಗಿಳಿದಿದ್ದರು. ಇಲ್ಲಿ ಮಾರಾಟವಾಗುತ್ತೇನೆ ಎಂಬ ನಿರೀಕ್ಷೆ ಅವರಿಗಿರಲಿಲ್ಲ. ಆದರೆ ಮುಖೇಶ್​ ಅವರನ್ನು ಬರೋಬ್ಬರಿ 5.50 ಕೋಟಿ ರೂ.ನೀಡಿ ಡೆಲ್ಲಿ ತಂಡ ಖರೀದಿಸಿತ್ತು. ಐಪಿಎಲ್​ನಲ್ಲಿ ಭಾರಿ ಬೇಡಿಕೆ ಗಳಿಸಿದ ಈ ಆಟಗಾರ ರಾಂಚಿಯಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಎದುರು ನೋಡುತ್ತಿದ್ದಾರೆ.

Exit mobile version