ಬೆಂಗಳೂರು: 2023ರ ಏಷ್ಯಾಕಪ್ಗಿಂತ (Asia Cup 2023) ಮೊದಲು ಭಾರತ ತಂಡವನ್ನು ಏಕ ದಿನ ವಿಶ್ವ ರ್ಯಾಂಕಿಂಗ್ನಲ್ಲಿ ಭಾರತ ತಂಡವನ್ನು ಸೋಲಿಸಲಿದೆಯಾ ಎಂಬ ಚರ್ಚೆ ಶುರುವಾಗಿದೆ. ಯಾಕೆಂದರೆ ಏಷ್ಯಾ ಕಪ್ಗೆ ಮೊದಲು ಬಾಬರ್ ಅಜಮ್ ನೇತೃತ್ವದ ತಂಡ ಅಫಘಾನಿಸ್ತಾನ ವಿರುದ್ಧ ಸರಣಿಯಲ್ಲಿ ಆಡಲಿದೆ. ಒಂದು ವೇಳೆ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಪಾಕಿಸ್ತಾನ 3-0 ಅಂತರದ ಗೆಲುವು ಸಾಧಿಸಿದರೆ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಪಾಕಿಸ್ತಾನ ವಿಶ್ವದ ನಂ.1 ತಂಡವಾಗಿ ಹೊರಹೊಮ್ಮಲಿದೆ. ಪಾಕಿಸ್ತಾನ 116 ಅಂಕಗಳೊಂದಿಗೆ ಆಸ್ಟ್ರೇಲಿಯಾದ (118) ನಂತರದ ಸ್ಥಾನದಲ್ಲಿದೆ. ಭಾರತ 115 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ನಂಬರ್ ಒನ್ ತಂಡದ ವಿರುದ್ಧ ಭಾರತ ಆಡಬೇಕಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನ ಮತ್ತು ಅಫಘಾನಿಸ್ತಾನ ತಂಡಗಳ ನಡುವಿನ ಸರಣಿ, ಏಷ್ಯಾ ಕಪ್ 2023, ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಮತ್ತು ಭಾರತ-ಆಸ್ಟ್ರೇಲಿಯಾ ತಂಡಗಳ ಏಕದಿನ ಸರಣಿಗಳು ಅಗ್ರ 3 ಸ್ಥಾನಗಳಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಲಿದೆ. 2023ರ ಏಷ್ಯಾಕಪ್ಗೆ ಪಾಕಿಸ್ತಾನ ನಂ.1 ಸ್ಥಾನ ಪಡೆದುಕೊಂಡು ಬಂದು ಚಾಂಪಿಯನ್ ಪಟ್ಟ ಗೆದ್ದರೆ ಸ್ಥಾನ ಉಳಿಸಿಕೊಳ್ಳಲಿದೆ. ಭಾರತ ತಂಡ ಈ ಪ್ರಶಸ್ತಿ ಗೆದ್ದರೆ, ರೋಹಿತ್ ಶರ್ಮಾ ಮತ್ತು ಬಳಗ ಅಗ್ರಸ್ಥಾನ ಮರಳಿ ಪಡೆಯುತ್ತದೆ, ಜತೆಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ವಿಶ್ವದ ನಂ.1 ತಂಡವಾಗಿ ಹೊರಹೊಮ್ಮಲಿದೆ.
ಭಾರತ ಅಫಘಾನಿಸ್ತಾನ ಸರಣಿ
ಮೂರು ಪಂದ್ಯಗಳ ಏಕದಿನ ಸರಣಿಯು ಬಾಬರ್ ಅಜಮ್ ಮತ್ತು ತಂಡಕ್ಕೆ ಏಷ್ಯಾ ಕಪ್ 2023ರ ಸಿದ್ಧತೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ವೈಟ್ವಾಷ್ ಮಾಡಿದರೆ (3-0) ಅಗ್ರ ಸ್ಥಾನವನ್ನು ಮರಳಿ ಪಡೆಯಲಿದೆ. ಒಂದು ವೇಳೆ ಪಾಕಿಸ್ತಾನ 2-1 ಅಂತರದಲ್ಲಿ ಗೆದ್ದರೆ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಉಳಿಸಿಕೊಳ್ಳಲಿದೆ. ಒಂದು ವೇಳೆ ಪಾಕಿಸ್ತಾನ 2-0 ಅಂತರದಲ್ಲಿ ಗೆದ್ದು ಮತ್ತೊಂದು ಪಂದ್ಯ ಡ್ರಾಗೊಂಡರೆ, 118 ಅಂಕಗಳೊಂದಿಗೆ ಆಸ್ಟ್ರೇಲಿಯಾವನ್ನು ಸರಿಗಟ್ಟಲಿದೆ.
ಇದನ್ನೂ ಓದಿ : World Cup 2023 : ವಿಶ್ವ ಕಪ್ ನಮ್ಮದೇ; ರೋಹಿತ್ ಶರ್ಮಾ ವಿಶ್ವಾಸ
ಪಾಕಿಸ್ತಾನವು ಹಾಲಿ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು 4-0 ಅಂತರದಿಂದ ಗೆದ್ದಿತ್ತು. ಇದು ತಂಡಕ್ಕೆ ಅತ್ಯುನ್ನತ ಶ್ರೇಯಾಂಕವನ್ನು ಸಾಧಿಸಲು ಸಹಾಯ ಮಾಡಿತ್ತು. 2007ರಲ್ಲಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿತ್ತು.
ಏಷ್ಯಾ ಕಪ್ 2023
ಅಫ್ಘಾನಿಸ್ತಾನವನ್ನು 3-0 ಅಂತರದಿಂದ ಸೋಲಿಸಿದರೆ ಪಾಕಿಸ್ತಾನ ವಿಶ್ವ ನಂ.1 ಏಕದಿನ ತಂಡವಾಗಿ ಏಷ್ಯಾಕಪ್ಗೆ ಅರ್ಹತೆ ಪಡೆಯಲಿದೆ. ಆದರೆ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ರೋಹಿತ್ ಶರ್ಮಾ ಮತ್ತು ಬಳಗ ವಿರುದ್ಧ ಸೋತರೆ ಬಾಬರ್ ಅಜಮ್ ತಂಡ ಸ್ಥಾನ ಕಳೆದುಕೊಳ್ಳಬಹುದು. ಆದಾಗ್ಯೂ, ಅವರು ಪ್ರಶಸ್ತಿಯನ್ನು ಗೆದ್ದರೆ ವಿಶ್ವದ ನಂ.1 ಆಗಿ ಉಳಿಯುತ್ತದೆ.
ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ
ಪ್ರಸ್ತುತ ವಿಶ್ವದ ನಂ.1 ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದರೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಅವಕಾಶ ಹೊಂದಿದೆ. ಒಂದು ವೇಳೆ ಭಾರತ ಏಷ್ಯಾಕಪ್ ಗೆದ್ದರೆ ನಂ.1 ಸ್ಥಾನಕ್ಕೇರಲಿದೆ.