ಪುಣೆ: ಭಾರತ ತಂಡದ ಆಟಗಾರರು ಮಂಗಳವಾರ ಸಂಜೆ ಪುಣೆಯ ಎಮ್ಸಿಎ ಕ್ರಿಕೆಟ್ ಗ್ರೌಂಡ್ನಲ್ಲಿ ಅಭ್ಯಾಸ ನಡೆಸಿದ್ದಾರೆ. ಗುರುವಾರ (ಅಕ್ಟೋಬರ್19ರಂದು) ಬಾಂಗ್ಲಾದೇಶ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ (ICC World Cup 2023) ಆಡಬೇಕಾಗಿರುವ ರೋಹಿತ್ ಶರ್ಮ ಬಳಗ ಅಭ್ಯಾಸ ನಡೆಸಿದೆ. ಹೀಗಾಗಿ ತಂಡದ ಪ್ರತಿಯೊಬ್ಬರು ಮಂಗಳವಾರ ಸಂಜೆಯ ವೇಳೆಗೆ ನೆಟ್ನಲ್ಲಿ ನಿರಂತರ ತಾಲೀಮು ನಡೆಸಿದರು. ಈ ವೇಳೆ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಬೌಲಿಂಗ್ ಮಾಡುತ್ತಿರುವುದು ಕಂಡುಬಂತು. ಈ ಮೂಲಕ ಮುಂದಿನ ಪಂದ್ಯಕ್ಕೆ ಭರ್ಜರಿಯಾಗಿ ಸಜ್ಜಾಗುತ್ತಿರುವ ಸುಳಿವು ಸಿಕ್ಕಿತು.
ರೋಹಿತ್ ಶರ್ಮಾ ಹಾಲಿ ವಿಶ್ವ ಕಪ್ನಲ್ಲಿ ಅತ್ಯುತ್ತಮವಾಗಿ ಫಾರ್ಮ್ ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅವರು ಅಫಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದರು. ಅದೇ ರೀತಿ ಪಾಕಿಸ್ತಾನ ತಂಡದ ವಿರುದ್ಧ ಅಮೋಘ ಅರ್ಧ ಶತಕ ಬಾರಿಸಿದ್ದರು. ಈ ವೇಳೆ ಸಿಕ್ಸರ್ಗಳ ಒಟ್ಟು ಗಳಿಕೆ ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿದಿದ್ದರು. ಅವರು ಬ್ಯಾಟಿಂಗ್ ವೈಖರಿಯಿಂದಾಗಿಯೇ ಭಾರತ ತಂಡ ಸಾಕಷ್ಟು ವಿಶ್ವಾಸ ಗಳಿಸಿದೆ. ಮುಂದಿನ ಪಂದ್ಯಗಳಲ್ಲಿ ಭರ್ಜರಿ ಯಶಸ್ಸು ಸಾಧಿಸುವ ಎಲ್ಲ ಲಕ್ಷಣವನ್ನು ತೋರುತ್ತಿದೆ.
ಭಾರತವನ್ನು ಸೋಲಿಸುವುದು ಕಷ್ಟ ಎಂದ ಆಸೀಸ್ ಮಾಜಿ ಕ್ಯಾಪ್ಟನ್
ಮುಂಬಯಿ: ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಆಟಗಾರ ರಿಕಿ ಪಾಂಟಿಂಗ್ ಅವರು ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ(Team India) ಗೆಲುವಿನ ನಿರೀಕ್ಷೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಮರ್ಥವಾಗಿರುವ ಭಾರತ ತಂಡವನ್ನು ಸೋಲಿಸುವುದು ಇತರ ತಂಡಗಳಿಗೆ ಕಷ್ಟದ ಮಾತು ಎಂದು ಹೇಳಿದ್ದಾರೆ.
ವಿಶ್ವಕಪ್ನ ಐಸಿಸಿ ಕಾಮೆಂಟ್ರಿ ಪ್ಯಾನಲ್ನಲ್ಲಿರುವ ರಿಕಿ ಪಾಂಟಿಂಗ್, “ಟೀಮ್ ಇಂಡಿಯಾ ಆಟಗಾರರ ಒತ್ತಡವನ್ನು ಹಿಡಿದಿಟ್ಟುಕೊಳ್ಳುವ ಕಲೆಯನ್ನೆ ಸರಿಯಾಗಿ ಅರಿತಿದ್ದಾರೆ. ಹೀಗಾಗಿ ಅವರನ್ನು ಸೋಲಿಸುವುದು ಅತ್ಯಂತ ಕಠಿಣ. ಈ ಬಾರಿ ಕಪ್ ಗೆಲ್ಲುವ ಎಲ್ಲ ಸಾಧ್ಯತೆ ಇದೆ” ಎಂದು ಹೇಳಿದರು.
ಈ ಸುದ್ದಿಗಳನ್ನೂ ಓದಿ : Yuvaraj Singh : ಅತಿ ವೇಗದ ಅರ್ಧ ಶತಕ; ಯುವರಾಜ್ ದಾಖಲೆ ಮುರಿದ ಶರ್ಮಾ
ICC World Cup 2023 : ಆಫ್ಘನ್ ತಂಡದ ಗುರ್ಬಜ್ಗೆ ಐಸಿಸಿ ಗುದ್ದು? ನಿಯಮ ಉಲ್ಲಂಘನೆಗೆ ದಂಡನೆ
ICC World Cup 2023 : ಭಾರತ ವಿರುದ್ಧ ಸೋತು ಕಂಗೆಟ್ಟ ಪಾಕ್ ತಂಡಕ್ಕೆ ಜ್ವರದ ಬಾಧೆ!
“ನಾನು ಮೊದಲಿನಿಂದಲೂ ಹೇಳಿದ್ದೇನೆಂದರೆ, ಭಾರತ ಇತರ ತಂಡವನ್ನು ಸೋಲಿಸುವ ತಂಡವಾಗಲಿದೆ. ತಂಡದಲ್ಲಿ ತುಂಬಾ ಪ್ರತಿಭಾವಂತ ಆಟಗಾರರು ಕಾಣಿಸಿಕೊಂಡಿದ್ದಾರೆ. ವೇಗದ ಬೌಲಿಂಗ್, ಸ್ಪಿನ್ ಮತ್ತು ಅಗ್ರ ಕ್ರಮಾಂಕದಿಂದ ಹಿಡಿದು ಮಧ್ಯಮ ಕ್ರಮಾಂಕದ ಎಲ್ಲ ಬ್ಯಾಟರ್ಗಳು ಉತ್ತಮ ಫಾರ್ಮ್ನಲ್ಲಿದ್ದಾರೆ” ಎಂದು ಪಾಂಟಿಂಗ್ ಐಸಿಸಿ ಸಂದರ್ಶನದಲ್ಲಿ ತಿಳಿಸಿದರು.
ವಿಶ್ವಕಪ್ ಸಾಧನೆ
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್ ಗೆದ್ದ ಸಾಧನೆ ಮಾಡಿದ್ದಾರೆ. 46 ವಿಶ್ವಕಪ್ ಪಂದ್ಯಗಳನ್ನು ಆಡಿ 1743 ರನ್ ಬಾರಿಸಿದ್ದಾರೆ. 6 ಅರ್ಧಶತಕ ದಾಖಲಿಸಿದ್ದಾರೆ. 5 ಶತಕ ಕೂಡ ಬಾರಿಸಿದ್ದಾರೆ. 28 ಕ್ಯಾಚ್ ಪಡೆದಿದ್ದಾರೆ.
ಭಾರತ ವಿಶ್ವಕಪ್ ಗೆಲ್ಲಲಿದೆ ಪಾಕ್ ಮಾಜಿ ಆಟಗಾರ
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತವೇ ಕಪ್ ಗೆಲ್ಲುವ ಹಾಟ್ ಫೇವರಿಟ್ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಮೊಹಮ್ಮದ್ ಆಮಿರ್(Mohammad Amir) ಭವಿಷ್ಯ ನುಡಿದಿದ್ದಾರೆ. “ನಿಸ್ಸಂಶಯವಾಗಿ ಭಾರತವೇ ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ಆಗಿದೆ. ಭಾರತದ ವಿರುದ್ಧ ಯಾವುದೇ ತಂಡ ಆಡಿದರೂ, ಗೆಲುವಿಗಾಗಿ ತಮ್ಮ ಶೇಕಡಾ 110 ರಷ್ಟು ಉತ್ತಮ ಪ್ರದರ್ಶನ ನೀಡಬೇಕು. ಭಾರತವನ್ನು ತವರು ನೆಲದಲ್ಲಿ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಉದಾಹರಣೆಗೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಾಗ ಪ್ರತಿ ತಂಡವು ಹೋರಾಡುತ್ತದೆ. ಅಂತೆಯೇ ಪ್ರತಿ ತಂಡವು ಭಾರತಕ್ಕೆ ಭೇಟಿ ನೀಡಿದಾಗಲೂ ಗೆಲುವಿಗೆ ಕಷ್ಟಪಡುತ್ತದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಅತ್ಯಂತ ಬಲಿಷ್ಠ ತಂಡವಾಗಿ ಗೋಚರಿಸಿದೆ. ಈ ಬಾರಿ ವಿಶ್ವಕಪ್ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ” ಎಂದು ಹೇಳಿದ್ದಾರೆ.