ಲಂಡನ್: ಟೀಮ್ ಇಂಡಿಯಾ ಮಾಜಿ ನಾಯಕ ಬರ್ತ್ಡೇ ಸಂಭ್ರಮ ಆಚರಿಸಲು ಇಂಗ್ಲೆಂಡ್ಗೆ ತೆರಳಿದ್ದಾರೆ. ಇದೇ ವೇಳೆ ಅವರು ಅಲ್ಲಿ ನಡೆಯುತ್ತಿರುವ Wimbledon ಟನಿಸ್ ಟೂರ್ನಿಯನ್ನೂ ವೀಕ್ಷಿಸಿದ್ದಾರೆ.
೪೧ನೇ ಜನುಮದಿನದ ಸಂಭ್ರಮದಲ್ಲಿರುವ ಧೋನಿ ಅವರು ಕುಟುಂಬದ ಜತೆ ಲಂಡನ್ಗೆ ತೆರಳಿದ್ದಾರೆ. ಏತನ್ಮಧ್ಯೆ ಅವರು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆಯುತ್ತಿರುವ ರಾಫೆಲ್ ನಡಾಲ್ ಅವರ ಕ್ವಾರ್ಟರ್ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ.
ವಿಡಿಯೊ ಶೇರ್ ಮಾಡಿದ ಪತ್ನಿ ಸಾಕ್ಷಿ
ಮಹೇಂದ್ರ ಸಿಂಗ್ ಧೋನಿ ಅವರು ಅದ್ಧೂರಿಯಾಗಿ ತಮ್ಮ ಜನುಮ ದಿನವನ್ನು ಆಚರಿಸಿಕೊಂಡಿದ್ದಾರೆ. ಅದರ ವಿಡಿಯೊವನ್ನು ಪತ್ನಿ ಸಾಕ್ಷಿ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಧೋನಿ ದೊಡ್ಡ ಗಾತ್ರ ಕೇಕ್ ಒಂದರ ಮೇಲಿನ ಕ್ಯಾಂಡಲ್ ನಂದಿಸುತ್ತಿರುವ ವಿಡಿಯೊವನ್ನು ಸಾಕ್ಷಿ ಧೋನಿ ಅಪ್ಲೋಡ್ ಮಾಡಿದ್ದಾರೆ. ಸ್ಲೋ ಮೋಷನ್ನಲ್ಲಿ ಇರುವ ವಿಡಿಯೊಗೆ ಸಿಕ್ಕಾಪಟ್ಟೆ ಮಂದಿ ಲೈಕ್ ಕೊಟ್ಟಿದ್ದಾರೆ.
ಸಾಕ್ಷಿ ಧೋನಿ, ಅಪ್ಲೋಡ್ ಮಾಡಿರುವ ವಿಡಿಯೊಗೆ ನಾಲ್ಕೇ ಗಂಟೆಯಲ್ಲಿ ೧೫ ಲಕ್ಷ ಮಂದಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮ್ಮ ಅಭಿಮಾನದ ಕ್ರಿಕೆಟಿಗಿನ ಜನುಮ ದಿನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.
ಬಾಲಿವುಡ್ ತಾರೆ ರಣವೀರ್ ಸಿಂಗ್ ಪ್ರತಿಕ್ರಿಯೆ ನೀಡಿ “ಪ್ರೀತಿಯ ಮಹೀ, ಹ್ಯಾಪಿ ಬರ್ತ್ಡೇ,ʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Edgebasotn ಪಿಚ್ ಮೇಲೆ ಮೇಲೇನೆ ಗವಾಸ್ಕರ್ಗೆ ಗುಮಾನಿ, ಯಾಕೆ?