Site icon Vistara News

Wimbledon | ವಿಂಬಲ್ಡನ್​ ಡ್ರೆಸ್​ ಕೋಡ್​ ನಿಯಮ ಬದಲಾವಣೆ; ಬಣ್ಣದ ಅಂಡರ್ ಶಾರ್ಟ್ಸ್ ಧರಿಸಲು ಅವಕಾಶ

Wimbledon will allow women to wear colored undershorts

ಲಂಡನ್​: ಪ್ರತಿಷ್ಠಿತ ಮತ್ತು ಶಿಸ್ತು ಬದ್ಧ ವಿಂಬಲ್ಡನ್ (Wimbledon)​ ಟೆನಿಸ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಲಾಗಿದೆ. ಈ ಹಿಂದೆ ಆಟ ನಡೆಯುವ ವೇಳೆ ಎಲ್ಲ ಆಟಗಾರರು ಬಿಳಿ ಬಣ್ಣದ ಅಂಡರ್ ಶಾರ್ಟ್ಸ್ ಧರಿಸಬೇಕು ಎಂಬ ನಿಯಮವನ್ನು ವಿಂಬಲ್ಡನ್ ಆಡಳಿತ ಮಂಡಳಿ ಸಡಿಲಗೊಳಿಸಿದ್ದು, ಬೇರೆ ಬಣ್ಣದ ‘ಅಂಡರ್ ಶಾರ್ಟ್ಸ್’ ಧರಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಮೊದಲ ಬಾರಿಗೆ ನಿಯಮ ಬದಲಿಸಿದ ವಿಂಬಲ್ಡನ್​ ಮಂಡಳಿ

ವಿಂಬಲ್ಡನ್ ತನ್ನ ಗ್ರಾಸ್‌ಕೋರ್ಟ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಸಮಾನತೆಯ ಉದ್ದೇಶದಿಂದ ಎಲ್ಲ ಆಟಗಾರರಿಗೆ ಕಟ್ಟುನಿಟ್ಟಾದ ಬಿಳಿ ಉಡುಪಿನ ನಿಯಮವನ್ನು ಜಾರಿಗೊಳಿಸಿತ್ತು. ಆದರೆ ಆಲ್ ಇಂಗ್ಲೆಂಡ್ ಕ್ಲಬ್ WTA, ಬಟ್ಟೆ ಕಂಪನಿಗಳು ಮತ್ತು ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ಬಳಿಕ ತನ್ನ ಹಳೆಯ ನಿಯಮಗಳನ್ನು ನವೀಕರಿಸಲು ಮುಂದಾಗಿದೆ ಎಂದು ತಿಳಿಸಿದೆ.

ಮಹಿಳಾ ಆಟಗಾರರ ಸಲುವಾಗಿ ನಿಯಮ ಬದಲಾವಣೆ

ಋತುಸ್ರಾವದ ಸಮಯದಲ್ಲಿ ಆಟಗಾರ್ತಿಯರು ಹೆಚ್ಚು ಆರಾಮದಾಯಕವಾಗಿ ಆಡಲು ಅನುವು ಮಾಡಿಕೊಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿಂಬಲ್ಡನ್​ ಮಂಡಳಿ ತಿಳಿಸಿದೆ. ಹೊಸ ನಿಯಮದ ಪ್ರಕಾರ, ಮಹಿಳೆಯರು ಈ ಮೊದಲು ಧರಿಸುತ್ತಿದ್ದ ತಮ್ಮ ಶಾರ್ಟ್ಸ್ ಅಥವಾ ಸ್ಕರ್ಟ್‌ಗಳ ಗಾತ್ರದಲ್ಲೇ ಡಾರ್ಕ್ ಅಥವಾ ಲೈಟ್-ಡಾರ್ಕ್ ಬಣ್ಣದ ‘ಅಂಡರ್‌ಶಾರ್ಟ್ಸ್’ ಧರಿಸಬಹುದಾಗಿದೆ. ಆದರೆ ಈ ನಿಯಮ ಹೊರತುಪಡಿಸಿ ಇನ್ನುಳಿದಂತೆ ಹಳೆಯ ನಿಯಮಗಳು ಹಾಗೆಯೇ ಇರುತ್ತವೆ ಎಂದು ವಿಂಬಲ್ಡನ್ ತಿಳಿಸಿದೆ.

ಆಲ್ ಇಂಗ್ಲೆಂಡ್ ಕ್ಲಬ್‌ನ ಮುಖ್ಯ ಕಾರ್ಯನಿರ್ವಾಹಕ ಸ್ಯಾಲಿ ಬೋಲ್ಟನ್ ಈ ಬಗ್ಗೆ ಮಾಹಿತಿ ನೀಡಿದ್ದು, “ಆಟಗಾರರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಈ ನಿಯಮ ಸಡಿಲಿಕೆಯಿಂದ ಮಹಿಳಾ ಆಟಗಾರರ ಆತಂಕ ನಿವಾರಣೆಯಾಗಲಿದ್ದು, ಪ್ರದರ್ಶನದತ್ತ ಸಂಪೂರ್ಣ ಗಮನ ಹರಿಸಬಹುದು” ಎಂದು ಹೇಳಿದರು.

ಇದನ್ನೂ ಓದಿ | Novak Djokovic | ಮುಂದಿನ ವರ್ಷ ಆಸ್ಟ್ರೇಲಿಯಾ ಓಪನ್​ ಆಡಲಿದ್ದಾರಾ ನೊವಾಕ್ ಜೊಕೋವಿಕ್​?

Exit mobile version