Site icon Vistara News

ಭಾರತದಲ್ಲಿ ವಿಶ್ವಕಪ್ ಗೆದ್ದು, ಬಿಸಿಸಿಐಗೆ ಕಪಾಳಮೋಕ್ಷ ಮಾಡಿ: ಶಾಹಿದ್ ಅಫ್ರಿದಿಯ ದುರಂಹಕಾರದ ಮಾತು

Shahid Afridi

Shahid Afridi

ನವ ದೆಹಲಿ: ಮುಂಬರುವ ಏಕದಿನ ವಿಶ್ವಕಪ್ ಅನ್ನು ಭಾರತದಲ್ಲಿ ಗೆದ್ದರೆ ಅದು ಬಿಸಿಸಿಐಗೆ ದೊಡ್ಡ ಕಪಾಳಮೋಕ್ಷ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ದುರಂಹಕಾರದ ಮಾತುಗಳನ್ನಾಡಿದ್ದಾರೆ. 2023ರ ಏಷ್ಯಾಕಪ್​​ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬ ಕಠಿಣ ನಿರ್ಧಾರ ತಾಳಿರುವ ಬಗ್ಗೆ ಈ ರೀತಿಯ ಪ್ರತಿಕ್ರಿಯೆ ಕೊಟ್ಟಿದ್ದಾರೆ ಮಾಜಿ ಆಟಗಾರ. ಅವರ ಹೇಳಿಕೆಯ ಮೂಲಕ ಬಿಸಿಸಿಐ ಹಾಗೂ ಪಿಸಿಬಿ ನಡುವಿನ ಗಲಾಟೆಗೆ ಇನ್ನಷ್ಟು ಕಿಚ್ಚು ಹಚ್ಚಿದಂತಾಗಿದೆ.

ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳುವುದಕ್ಕೆ ಪಾಕಿಸ್ತಾನಕ್ಕೆ ಭಾರತ ತಂಡ ಪ್ರವಾಸ ಕೈಗೊಳ್ಳದಿದ್ದರೆ ವಿಶ್ವಕಪ್​ಗಾಗಿ ಭಾರತಕ್ಕೆ ಹೋಗವುದಿಲ್ಲ ಎಂಬುದಾಗಿ ಹೇಳುವ ಮೂಲಕ ಪಿಸಿಬಿ ಕೂಡ ಪ್ರತೀಕಾರ ತೀರಿಸಿಕೊಂಡಿದೆ. ಆದಾಗ್ಯೂ, ಮಾಜಿ ಕ್ರಿಕೆಟಿಗ ಅಫ್ರಿದಿ ಅವರು ಮ್ಯಾನೇಜ್ಮೆಂಟ್ ಈ ನಿರ್ಧಾರದ ತಳೆಯುವ ಮೊದಲು ಹೆಚ್ಚು ನೈಪುಣ್ಯ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ. ಪಾಕಿಸ್ತಾನ ತಂಡವನ್ನು ಭಾರತಕ್ಕೆ ಹೋಗಲು ಬಿಡಬೇಕು ಹಾಗೂ ಅಲ್ಲಿ ನಮ್ಮ ತಂಡ ವಿಶ್ವ ಕಪ್​ ಗೆಲ್ಲಬೇಕು. ಈ ಮೂಲಕ ಸರಿಯಾದ ಉತ್ತರ ಕೊಡಬೇಕು ಎಂದಿದ್ದಾರೆ.

ಇದನ್ನೂ ಓದಿ : Asia Cup 2023: ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ​ಗಾಗಿ ಪ್ರಧಾನಿ ಮೋದಿಗೆ ವಿನಂತಿಸಿದ ಶಾಹಿದ್ ಅಫ್ರಿದಿ

ಪಿಸಿಬಿ ಹಠಮಾರಿತನ ತೋರಬಾರದು. ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಹೇಳಬಾರದು. ಅವರು ಯಾಕೆ ಈ ನಿರ್ಧಾರ ತಳೆದಿದದ್ದಾರೆ ಎಂಬುದೇ ಗೊತ್ತಿಲ್ಲ. ಪಿಸಿಬಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ ಎಂದು ಅರ್ಥಮಾಡಿಕೊಳ್ಳಬೇಕು. ಇಂಥ ಸಂಗತಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು, ಭಾರತಕ್ಕೆ ಹೋಗಿ ಆಟವಾಡಿ. ಟ್ರೋಫಿ ಪಡೆಯಲು ತಂಡದ ಆಟಗಾರರಿಗೆ ಹೇಳಬೇಖು. ಇಡೀ ದೇಶ ನಿಮ್ಮ ಆಟಗಾರರ ಬೆಂಬಲಕ್ಕೆ ಇರುತ್ತದೆ. ಅದು ನಮಗೆ ದೊಡ್ಡ ಗೆಲುವು ಮಾತ್ರವಲ್ಲ, ಬಿಸಿಸಿಐನ ಮುಖಕ್ಕೆ ಕಪಾಳಮೋಕ್ಷ ಎಂದು ಅಫ್ರಿದಿ ಕ್ರಿಕೆಟ್ ಪಾಕಿಸ್ತಾನದ ಮಾತನಾಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಪಷ್ಟ ಸಂದೇಶ ನೀಡಿ ಎಂದ ಅಫ್ರಿದಿ

ವಿಶ್ವ ಕಪ್​​ನಲ್ಲಿ ಆಡುವ ವಿಚಾರದಲ್ಲಿ ಪಿಸಿಬಿಗೆ ಹೆಚ್ಚಿನ ಆಯ್ಕೆಗಳಿಲ್ಲ. ಏಕದಿನ ವಿಶ್ವಕಪ್​ಗಾಗಿ ನೆರೆಯ ರಾಷ್ಟ್ರಕ್ಕೆ ಪ್ರವಾಸ ಮಾಡುವ ಬಗ್ಗೆ ಸಕಾರಾತ್ಮಕವಾಗಿರಬೇಕು. ನಾವು ಟ್ರೋಫಿಯನ್ನು ಗೆದ್ದ ಬಳಿಕ ನೆರೆಯ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಅಫ್ರಿದಿ ಹೇಳಿದರು.

ಭಾರತಕ್ಕೆ ಹೋಗಿ, ಅತ್ಯುತಮ ಕ್ರಿಕೆಟ್ ಆಡಿ ಮತ್ತು ಅದ್ಭುತ ಗೆಲುವನ್ನು ಪಡೆಯಬೇಕು. ಇದು ನಮಗಿರುವ ಉತ್ತಮ ಆಯ್ಕೆ. ನಾವು ಭಾರತಕ್ಕೆ ಹೋಗಬೇಕು, ವಿಶ್ವಕಪ್ ಟ್ರೋಫಿ ಸಮೇತ ಹಿಂತಿರುಗಬೇಕು. ನಾವು ಎಲ್ಲಿ ಬೇಕಾದರೂ ಹೋಗಬಹುದು ಮತ್ತು ವಿಜಯವನ್ನು ಗೆಲ್ಲಬಹುದು ಎಂಬ ಸ್ಪಷ್ಟ ಸಂದೇಶವನ್ನು ಅವರಿಗೆ ನೀಡಬೇಕಾಗಿದೆ ಎಂದು ಅವರು ಹೇಳಿದರು.

Exit mobile version