Site icon Vistara News

ind vs wi : ಭಾರತ ವಿರುದ್ಧ ಟೆಸ್ಟ್​ ಸರಣಿಗೆ ತಂಡ ಘೋಷಿಸಿದ ವಿಂಡೀಸ್​; ಯಾರ್ಯಾರು ಇದ್ದಾರೆ ತಂಡದಲ್ಲಿ?

west indies Cricket Team

ಬಾರ್ಬಡೋಸ್​: ಡೊಮಿನಿಕಾದಲ್ಲಿ ಜುಲೈ 12ರಿಂದ ಪ್ರಾರಂಭವಾಗುವ ಭಾರತ ವಿರುದ್ಧದ ಮೊದಲ ಟೆಸ್ಟ್​ ಸರಣಿಗೆ ವೆಸ್ಟ್ ಇಂಡೀಸ್ 13 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸ್ಪಿನ್ ಬೌಲಿಂಗ್ ಆಲ್​ರೌಂಡರ್​ಗಳಾದ​ ರಹಕೀಮ್ ಕಾರ್ನ್ವಾಲ್ ಮತ್ತು ಎಡಗೈ ಸ್ಪಿನ್ನರ್ ಜೋಮೆಲ್ ವಾರಿಕನ್ ತಂಡಕ್ಕೆ ಮರಳಿದ್ದಾರೆ. ಪ್ರಮುಖ ಸ್ಪಿನ್ನರ್ ಗುಡಕೇಶ್ ಮೋತಿ ಗಾಯಗೊಂಡಿರುವ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಅಗಿ ವಾರ್ರಿಕನ್ ಟೆಸ್ಟ್ ತಂಡಕ್ಕೆ ಮರಳಿಸಿದ್ದಾರೆ. ಅವರು ಕಳೆದ ಬಾರಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು.

ಎಡಗೈ ಸ್ಪಿನ್ನರ್ ಗುಡಕೇಶ್ ಮೋತಿ ಅವರು ಗಾಯದಿಂದ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಹೇಳಿಕೆಯಲ್ಲಿ ತಿಳಿಸಿದೆ. 2019ರಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದ್ದ ಕಾರ್ನ್ವಾಲ್ ನವೆಂಬರ್ 2021ರಿಂದ ರೆಡ್-ಬಾಲ್ ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್ ಪರ ಕಾಣಿಸಿಕೊಂಡಿಲ್ಲ. ಪ್ರಬಲ ಭಾರತೀಯ ಬ್ಯಾಟಿಂಗ್ ಘಟಕದ ವಿರುದ್ಧ ಆತಿಥೇಯರು ಮೂವರು ನುರಿತ ವೇಗಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ನಾವು ಮೋತಿಯ ಸೇವೆಯನ್ನು ಕಳೆದುಕೊಂಡಿದ್ದೇವೆ. ತಮ್ಮ ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಇದು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ವಾರ್ರಿಕನ್ ಮತ್ತು ಕಾರ್ನ್ವಾಲ್ ಅವರಿಗೆ ಅವಕಾಶವನ್ನು ಸೃಷ್ಟಿಸಿದೆ. ಅವರಿಬ್ಬರೂ ಈ ಹಿಂದೆ ಟೆಸ್ಟ್ ಪಂದ್ಯದ ಆಡಿದ್ದಾರೆ” ಎಂದು ಮುಖ್ಯ ಆಯ್ಕೆಗಾಗ ಡೆಸ್ಮಂಡ್ ಹೇನ್ಸ್ ಹೇಳಿದ್ದಾರೆ.

ಬ್ಯಾಟರ್​​ಗಳಾದ ಕಿರ್ಕ್ ಮೆಕೆಂಜಿ ಮತ್ತು ಅಲಿಕ್ ಅಥಾನಾಜೆ ಮೊದಲ ಬಾರಿಗೆ ವೆಸ್ಟ್​ ಇಂಡೀಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಎಡಗೈ ಬ್ಯಾಟರ್​ ಕಿರ್ಕ್ ಮೆಕೆಂಜಿ ಮತ್ತು ಅಲಿಕ್ ಅಥಾನಾಜೆ ತಂಡದಲ್ಲಿ ಇಬ್ಬರು ಹೊಸ ಮುಖಗಳು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ‘ಎ’ ತಂಡದ ಪ್ರವಾಸದಲ್ಲಿ ಮೆಕೆಂಜಿ ಮತ್ತು ಅಥಾನಾಜೆ ಉತ್ತಮ ಪ್ರದರ್ಶನ ನೀಡಿದ್ದರು. ಈ ಇಬ್ಬರು ಯುವ ಆಟಗಾರರು ಉತ್ತಮ ಸ್ಕೋರ್​ ಗಳಿಸಿದ್ದಾರೆ. ಅವರು ಅವಕಾಶಕ್ಕೆ ಅರ್ಹರು ಎಂಬುದನ್ನು ನಂಬುತ್ತೇವೆ” ಎಂದು ಹೇನ್ಸ್ ಹೇಳಿದ್ದಾರೆ.

ಭಾರತ ತಂಡದ ಶಿಬಿರದಲ್ಲಿ ಜೇಡನ್ ಸೀಲ್ಸ್ ಅವರಿದ್ದಾರ. ಶಸ್ತ್ರಚಿಕಿತ್ಸೆಯ ಪುನಶ್ಚೇತನದಲ್ಲಿ ಪ್ರಗತಿ ಸಾಧಿಸಿದ್ದಾರೆ. ಆದಾಗ್ಯೂ, ಅವರು ತಂಡಕ್ಕೆ ಹಿಂತಿರುಗಲು ಸಿದ್ಧವಾಗಿಲ್ಲ ಎಂದು ನಾವು ಭಾವಿಸಿದ್ದೇವೆ. ಈ ಹಂತದಲ್ಲಿ ನಾವು ಅವರನ್ನು ಅಪಾಯಕ್ಕೆ ತಳ್ಳಲು ಬಯಸುವುದಿಲ್ಲ. ಹೀಗಾಗಿ ಕೈಲ್ ಮೇಯರ್ಸ್ ಅವರನ್ನು ಸಹ ಪರಿಗಣಿಸಲಾಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Team India : ಏಷ್ಯನ್​ ಗೇಮ್ಸ್​ ತಂಡದಲ್ಲಿ ರೋಹಿತ್, ಕೊಹ್ಲಿಇಲ್ಲ; 5 ಪ್ರಮುಖ ಘೋಷಣೆ ಮಾಡಿದ ಬಿಸಿಸಿಐ

ಐಸಿಸಿ ಟೆಸ್ಟ್ ಮ್ಯಾಚ್ ಚಾಂಪಿಯನ್​ಶಿಪ್​ ಹೊಸ ಚಕ್ರವನ್ನು ನಾವು ಪ್ರಾರಂಭಿಸುತ್ತಿರುವುದರಿಂದ ಸರಣಿ ಸವಾಲಿನದ್ದಾಗಿದೆ ಎಂದು ನಮಗೆ ತಿಳಿದಿದೆ. ನಾವು ನಿರ್ಮಿಸಲು ಮತ್ತು ಸುಧಾರಿಸಲು ಬಯಸುತ್ತೇವೆ ಮತ್ತು ಏಣಿಯನ್ನು ಏರಲು ಪ್ರಯತ್ನಿಸುತ್ತೇವೆ. ಎಂದು ಹೇಳಿದರು.

ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್​​ನಲ್ಲಿ ನಡೆಯುತ್ತಿರುವ ಸರಣಿಯ ಪೂರ್ವ ಶಿಬಿರದ ನಂತರ ವೆಸ್ಟ್ ಇಂಡೀಸ್ ತಂಡವು ಭಾನುವಾರ ಡೊಮಿನಿಕಾಗೆ ಪ್ರಯಾಣಿಸಲಿದೆ. ಪಂದ್ಯದ ಸಿದ್ಧತೆಗಾಗಿ ಅವರು ಸೋಮವಾರ ಮಧ್ಯಾಹ್ನ ಮತ್ತು ಮಂಗಳವಾರ ಬೆಳಿಗ್ಗೆ ತರಬೇತಿ ನಡೆಸಲಿದೆ.

ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ಯಾಥ್​ವೇಟ್​ (ನಾಯಕ), ಜೆರ್ಮೈನ್ ಬ್ಲ್ಯಾಕ್​ಹುಡ್​, ಅಲಿಕ್ ಅಥಾನಾಜೆ, ತಗೆನಾರಿನ್ ಚಂದ್ರಪಾಲ್, ರಹಕೀಮ್ ಕಾರ್ನ್ವಾಲ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ರೇಮನ್ ರೀಫರ್, ಕೆಮರ್ ರೋಚ್, ಜೋಮೆಲ್ ವಾರಿಕನ್.

Exit mobile version