Site icon Vistara News

T20 World Cup | ವಿಂಡೀಸ್‌ ತಂಡ ಸೋತಿರುವುದು ನನ್ನ ಹೆಂಡತಿಯ ತಪ್ಪೇ; ಶಿಮ್ರೋನ್‌ ಹೆಟ್ಮಾಯರ್‌ ಪ್ರಶ್ನೆ

t20 world cup

ಸಿಡ್ನಿ : ಎರಡು ಬಾರಿಯ ಚಾಂಪಿಯನ್‌ ವೆಸ್ಟ್ ಇಂಡೀಸ್ ತಂಡ ಹಾಲಿ ಆವೃತ್ತಿಯ ಟಿ೨೦ ವಿಶ್ವ ಕಪ್‌ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದೆ. ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್ ತಂಡದ ವಿರುದ್ಧ ಸೋಲುವ ಮೂಲಕ ಮೊದಲ ಹಂತದಲ್ಲೇ ನಿರ್ಗಮಿಸಿ ನಿರಾಸೆ ಎದುರಿಸಿತು. ವೆಸ್ಟ್‌ ಇಂಡಿಸ್‌ ತಂಡ ಸೋಲುವುದಕ್ಕೆ ಸ್ಫೋಟಕ ಬ್ಯಾಟರ್‌ ಶಿಮ್ರೋನ್‌ ಹೆಟ್ಮಾಯರ್ ಅವರ ಅಲಭ್ಯತೆಯೇ ಕಾರಣ ಎಂದು ಆ ದೇಶದ ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಕಾರಣವೇ ಹೆಟ್ಮಾಯರ್‌ ಪತ್ನಿ ಎಂಬುದಾಗಿಯೂ ಅವರು ದೂರುತ್ತಿದ್ದಾರೆ. ಈ ಆರೋಪಕ್ಕೆ ಬೇಸರಗೊಂಡಿರುವ ಹೆಟ್ಮಾಯರ್‌ ತಂಡ ಸೋತರೆ ನನ್ನ ಹೆಂಡತಿಯನ್ನು ಯಾಕೆ ಹೊಣೆಗಾರರನ್ನಾಗಿ ಮಾಡುತ್ತಿದ್ದೀರಿ ಎಂಬುದಾಗಿ ಪ್ರಶ್ನಿಸಿದ್ದಾರೆ.

ನಾನು ಏನಾದರೂ ಮಾಡಿದರೆ ಅದಕ್ಕೆ ನನ್ನ ಹೆಂಡತಿಯನ್ನು ಯಾಕೆ ಹೊಣೆಗಾರರನ್ನಾಗಿ ಮಾಡುತ್ತಿದ್ದೀರಿ ಎಂಬುದು ನನಗೆ ಅರ್ಧವಾಗುತ್ತಿಲ್ಲ. ಏನು ಮಾಡಬೇಕು ಹಾಗೂ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಅವಳು ನನ್ನ ಜೀವನ ಹಾಗೂ ಎಂದಿಗೂ ಅವಳ ಜತೆಗಿರುವೆ. ಈ ಜಗತ್ತಿನ ಅತ್ಯಂತ ಸುಂದರ ಮಹಿಳೆ ಆಕೆ,” ಎಂದು ಹೆಟ್ಮಾಯರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಶಿಮ್ರೋನ್‌ ಹೆಟ್ಮಾಯರ್ ಅವರು ಟಿ೨೦ ವಿಶ್ವ ಕಪ್‌ ಆಡಲಿರುವ ವೆಸ್ಟ್ ಇಂಡೀಸ್‌ ತಂಡಕ್ಕೆ ಆರಂಭದಲ್ಲಿ ಆಯ್ಕೆಯಾಗಿದ್ದರು. ಆದರೆ ತಂಡ ಆಸ್ಟ್ರೇಲಿಯಾಗೆ ಪ್ರಯಾಣಿಸಿದ ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಬಳಿಕ ಅವರಿಗೆ ಮತ್ತೊಂದು ವಿಮಾನ ಗೊತ್ತಪಡಿಸಿದ್ದರು. ಆ ವಿಮಾನದ ಸಮಯಕ್ಕೂ ಅವರು ತಲುಪಿರಲಿಲ್ಲ. ಹೀಗಾಗಿ ವಿಶ್ವ ಕಪ್‌ ಆಡುವ ಅವಕಾಶ ಕಳೆದುಕೊಂಡಿದ್ದರು. ಹೀಗಾಗಿ ತಂಡದ ಸೋಲಿಗೆ ಅವರೇ ಕಾರಣ ಎಂದು ದೂಷಿಸಲಾಗುತ್ತಿದೆ.

ಇದನ್ನೂ ಓದಿ | T20 World Cup | ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡ ವಿಶ್ವ ಕಪ್‌ನ ಮೊದಲ ಹಂತದಿಂದಲೇ ಔಟ್‌

Exit mobile version