Site icon Vistara News

Women’s Asia Cup: ಇಂದು ಸೆಮಿಫೈನಲ್‌ ಕಾದಾಟ: ಬಾಂಗ್ಲಾ ಸವಾಲಿಗೆ ಭಾರತ ಸಜ್ಜು

Women's Asia Cup

Women's Asia Cup: India Women vs Bangladesh Women Match Prediction- Women's Asia Cup 2024, Semi Final 1

ದಂಬುಲಾ(ಶ್ರೀಲಂಕಾ): ಒಂದೆಡೆ ಪ್ಯಾರಿಸ್​ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ನಡೆದರೆ, ಮತ್ತೊಂದೆಡೆ ಮಹಿಳಾ ಏಷ್ಯಾಕಪ್(Women’s Asia Cup)​ ಸೆಮಿಫೈನಲ್​ ಪಂದ್ಯಗಳ ಕಾದಾಟ ನಡೆಯಲಿದೆ. ಒಟ್ಟಾರೆಯಾಗಿ ಇಂದು ಕ್ರೀಡಾಭಿಮಾನಿಗಳಿಗೆ ಭರ್ಜರಿ ರಸದೌತಣ ಸಿಗಲಿದೆ. ಇಂದು ನಡೆಯುವ ಮಹಿಳಾ ಏಷ್ಯಾಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಹಾಗೂ ಈ ಬಾರಿಯ ಕೂಟದ ಅಜೇಯ ತಂಡವಾದ ಭಾರತವು ಬಾಂಗ್ಲಾದೇಶದ(India Women vs Bangladesh Women) ಸವಾಲನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್ಸ್‌ ಪಾಕಿಸ್ತಾನ ಮತ್ತು ಶ್ರೀಲಂಕಾ(Sri Lanka Women vs Pakistan Women) ಮುಖಾಮುಖಿಯಾಗಲಿವೆ.

ಭಾರತ ತಂಡ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಆಗಿದ್ದರೂ ಕೂಡ ಯಾವುದೇ ಕಾರಣಕ್ಕೂ ಎದುರಾಳಿಯನ್ನು ಹಗುರವಾಗಿ ಕಾಣುವಂತಿಲ್ಲ. ಅದರಲ್ಲೂ ಅಪಾಯಕಾರಿ ಬಾಂಗ್ಲಾ ವಿರುದ್ಧ ಎಚ್ಚರಿಕೆ ಅತ್ಯಗತ್ಯ. ಏಕೆಂದರೆ 2018ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ 7ನೇ ಆವೃತ್ತಿಯ ಫೈನಲ್​ನಲ್ಲಿ ಭಾರತಕ್ಕೆ ಬಾಂಗ್ಲಾದೇಶದ 3 ವಿಕೆಟ್​ ಅಂತರದ ಆಘಾತಕಾರಿ ಸೋಲುಣಿಸಿ ಏಷ್ಯಾ ಕಪ್​ ಗೆದ್ದು ಸಂಭ್ರಮಿಸಿತ್ತು. ಹೀಗಾಗಿ ಭಾರತ ಅತಿಯಾದ ಆತ್ಮವಿಶ್ವಾಸವನ್ನು ಬದಿಗಿಟ್ಟು ಆಡಲಿಳಿಯಬೇಕಿದೆ.

ಈ ಬಾರಿಯ ಟೂರ್ನಿಯಲ್ಲಿ ಭಾರತ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ಕಂಡುಬಂದಿದೆ. ಇದೇ ಪ್ರದರ್ಶನ ಸೆಮಿಫೈನಲ್​ ಪಂದ್ಯದಲ್ಲಿಯೂ ಮೂಡಿ ಬರಬೇಕಿದೆ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮೃತಿ ಮಂಧನಾ ಅವರ ಪ್ರಚಂಡ ಬ್ಯಾಟಿಂಗ್​ ಫಾರ್ಮ್, ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್​ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಚಿಂತೆ ಇರುವುದೆಂದರೆ, ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರ ಬ್ಯಾಟಿಂಗ್​ ವೈಫಲ್ಯ. ಕಳೆದೊಂದು ವರ್ಷದಿಂದ ಅವರು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಲೇ ಬಂದಿದ್ದಾರೆ. ಈ ಪಂದ್ಯದಲ್ಲಿ ಸಿಡಿಯಬೇಕಾದ ಅನಿವಾರ್ಯತೆ ಇದೆ. ಭಾರತ ಮತ್ತು ಬಾಂಗ್ಲಾ ನಡುವಣ ಸೆಮಿಫೈನಲ್​ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

ಇದನ್ನೂ ಓದಿ Women’s Asia Cup 2024 : ದಾಖಲೆ ಬರೆದ ರಿಚಾ ಘೋಷ್​, ಇತಿಹಾಸ ಸೃಷ್ಟಿಸಿದ ಭಾರತ ತಂಡ

ಬಾಂಗ್ಲಾದೇಶ: ನಿಗರ್ ಸುಲ್ತಾನಾ(ನಾಯಕಿ), ದಿಲಾರಾ ಅಖ್ತರ್​, ಮುರ್ಷಿದಾ ಖಾತುನ್, ರುಮಾನಾ ಅಹ್ಮದ್, ಇಶ್ಮಾ ತಂಜಿಮ್, ರಿತು ಮೋನಿ, ರಬೇಯಾ ಖಾನ್, ಶೋರ್ನಾ ಅಕ್ಟರ್, ಜಹಾನಾರಾ ಆಲಂ, ನಹಿದಾ ಅಕ್ಟರ್, ಸಬಿಕುನ್ ನಹರ್, ರುಬ್ಯಾ ಹೈದರ್, ಮಾರುಫಾ ಅಕ್ಟರ್, ಶೋರಿಫಾ ಖಾತುನ್, ಸುಲ್ತಾನಾ ಖತುನ್.

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ತನುಜಾ ಕನ್ವರ್, ಸಜನಾ ಸಜೀವನ್.

Exit mobile version