ಡಂಬುಲಾ: (ಶ್ರೀಲಂಕಾ): ಮಹಿಳಾ ಏಷ್ಯಾಕಪ್ನಲ್ಲಿ(Womens Asia Cup T20) ಆಡಿದ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಮಾಡಿರುವ ಹಾಲಿ ಚಾಂಪಿಯನ್ ಭಾರತ(India Women) ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಯುಎಇ(United Arab Emirates Women) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲೂ ಗೆಲುವು ಸಾಧಿಸಿ ಸೆಮಿಫೈನಲಿಗೇರುವ ವಿಶ್ವಾಸದಲ್ಲಿದೆ ಹರ್ಮನ್‌ಪ್ರೀತ್ ಪಡೆ.
ಭಾರತ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮ, ರಾಧಾ ಯಾದವ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಬ್ಯಾಟಿಂಗ್ ವಿಭಾಗ ಕೂಡ ಉತ್ತಮ ರೀತಿಯಲ್ಲಿದೆ. ಶಫಾಲಿ ಶರ್ಮ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ ತಂಡವನ್ನು ಆಧರಿಸಬಲ್ಲರು.
ಇದನ್ನೂ ಓದಿ IND vs SL: ನಾಳೆ ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣ
ಯುಎಇ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ತಾನಾಡಿದ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ಇದೀಗ ಭಾರತ ವಿರುದ್ಧ ಸೋತರೆ ಕೂಟದಿಂದ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ ಯುಎಇಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.
ಉಭಯ ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.
ಯುಎಇ: ಇಶಾ ರೋಹಿತ್ ಓಜಾ (ನಾಯಕಿ), ತೀರ್ಥ ಸತೀಶ್ (ವೀಕಿ), ರಿನಿತಾ ರಜಿತ್, ಸಮೈರಾ ಧರ್ಣಿಧರ್ಕಾ, ಕವಿಶಾ ಎಗೋಡಗೆ, ಖುಷಿ ಶರ್ಮಾ, ಹೀನಾ ಹೊಚ್ಚಂದನಿ, ವೈಷ್ಣವೆ ಮಹೇಶ್, ರಿತಿಕಾ ರಜಿತ್, ಲಾವಣ್ಯ ಕೇನಿ, ಇಂಧುಜಾ ನಂದಕುಮಾರ್, ಮೆಹಕ್ ಠಾಕೂರ್, ಎಮಿಲಿ ರಜಿತ್ ಥಾಮಸ್, ರಿಷಿತಾ ಥಾಮಸ್ ಕೊಟ್ಟೆ.