Site icon Vistara News

Women’s IPL | ಚೊಚ್ಚಲ ಆವೃತ್ತಿಯ ಮಹಿಳೆಯರ ಐಪಿಎಲ್​ ಆಡುವ ನಿರೀಕ್ಷೆಯಲ್ಲಿ ಮಿಥಾಲಿ ರಾಜ್​, ಜೂಲನ್ ಗೋಸ್ವಾಮಿ!

mithali and jhulan

ಮುಂಬಯಿ: ಭಾರತ ಮಹಿಳೆಯರ ಕ್ರಿಕೆಟ್​ ತಂಡದ ಮಾಜಿ ಆಟಗಾರ್ತಿಯರಾದ ಮಿಥಾಲಿ ರಾಜ್ ಮತ್ತು ಜೂಲನ್​ ಗೋಸ್ವಾಮಿ ಚೊಚ್ಚಲ ಆವೃತಿಯ ಮಹಿಳಾ ಐಪಿಎಲ್(Women’s IPL)​ ಟೂರ್ನಿಗೆ ಹೆಸರು ನೊಂದಾಯಿಸಿದ್ದಾರೆ ಎಂದು ವರದಿಯಾಗಿದೆ. ​

ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್​ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾರೆ. ಆದರೆ ಅವರಿಗೆ ವಿದಾಯ ಪಂದ್ಯವನ್ನಾಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಚೊಚ್ಚಲ ಆವೃತ್ತಿಯ ಐಪಿಎಲ್​ ಆಡುವ ಮೂಲಕ ಅವರು ಅಭಿಮಾನಿಗಳ ಮುಂದೆ ಸ್ಮರಣೀಯ ವಿದಾಯ ಹೇಳುವ ನಿರೀಕ್ಷೆ ಇದೆ. ಜತೆಗೆ ಬಿಸಿಸಿಐ ಕೂಡ ದಿಗ್ಗಜ ಆಟಗಾರ್ತಿಗೆ ಈ ಟೂರ್ನಿಯಲ್ಲಿ ಅವಕಾಶ ನೀಡಿ ಗೌರವಿಸಲು ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ವರ್ಷ ಜೂನ್​​​ನಲ್ಲಿ ಐಸಿಸಿ ಕ್ರಿಕೆಟ್​​ ಪಾಡ್​ಕಾಸ್ಟ್​​ನಲ್ಲಿ ಮಿಥಾಲಿ ರಾಜ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದರೂ ಮಹಿಳಾ ಐಪಿಎಲ್ ಆಡಲಿದ್ದೇನೆ ಎಂದು ಹೇಳಿದ್ದರು. ಇದೀಗ ಈ ಸುದ್ದಿ ಶೀಘ್ರದಲ್ಲೇ ನಿಜವಾಗುವಂತೆ ಗೋಚರಿಸಿದೆ. ಫೆಬ್ರವರಿ 11ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಮಿಥಾಲಿ ಅವರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಸದ್ಯದ ಕುತೂಹಲ. ಜತೆಗೆ ಹಿರಿಯಾ ಮಾಜಿ ವೇಗಿ ಜೂಲನ್​ ಗೋಸ್ವಾಮಿ ಕೂಡ ಹರಾಜು ಪ್ರಕ್ರಿಯೆಗೆ ಹೆಸರು ನೊಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ಈ ಇಬ್ಬರು ದಿಗ್ಗಜ ಆಟಗಾರ್ತಿಯರು ಈ ಟೂರ್ನಿಯಲ್ಲಿ ಆಡುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್​ಗೆ ಗುಡ್​ಬೈ ಹೇಳುವ ಸಾಧ್ಯತೆ ಇದೆ.

ಇದನ್ನೂ ಓದಿ | Womens U19 T20 World Cup | ಶ್ವೇತಾ, ಶಫಾಲಿ ಭರ್ಜರಿ ಬ್ಯಾಟಿಂಗ್​; ಭಾರತಕ್ಕೆ ಏಳು ವಿಕೆಟ್ ಜಯ

Exit mobile version