ನವದೆಹಲಿ: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್(Women’s IPL) ನಡೆಸಲು ಬಿಸಿಸಿಐ ಸಂಪೂರ್ಣ ಸಜ್ಜಾಗಿದ್ದು ಬುಧವಾರ ತಂಡಗಳ ಹರಾಜು ನಡೆಯಲಿದೆ. 5 ತಂಡಗಳನ್ನು ಕೊಂಡುಕೊಳ್ಳಲು ವಿವಿಧ ಕಂಪೆನಿಗಳ ನಡುವೆ ಪೈಪೋಟಿ ನಡೆಯುವ ನಿರೀಕ್ಷೆ ಇರಿಸಲಾಗಿದೆ.
4 ಸಾವಿರ ಕೋಟಿ ರೂ. ಲಾಭ ನಿರೀಕ್ಷೆಯಲ್ಲಿ ಬಿಸಿಸಿಐ
ತಂಡಗಳನ್ನು ಕೊಂಡುಕೊಳ್ಳಲು ಸುಮಾರು 30 ಕಂಪೆನಿಗಳು ಮುಗಿಬಿದ್ದಿವೆ ಎಂದು ಈಗಾಗಲೇ ವರದಿಯಾಗಿದೆ. ಇದೀಗ ರೇಸ್ನಲ್ಲಿರುವ ಕಂಪೆನಿಯೂ ತಂಡಗಳನ್ನು ಖರೀದಿಸಲು 500ರಿಂದ 600 ಕೋಟಿ ರೂ. ವ್ಯಯಿಸುವ ನಿರೀಕ್ಷೆಯಿದೆ. ಈ ಮೊತ್ತ 800 ಕೋಟಿಗೆ ಏರಿದರೂ ಅಚ್ಚರಿಯಿಲ್ಲ. ಒಟ್ಟಾರೆ ಹರಾಜಿನಿಂದ ಬಿಸಿಸಿಐ 4,000 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆಯಿದೆ.
ಇತರ ಕಂಪೆನಿಗಳ ಜತೆ 10 ಐಪಿಎಲ್ ತಂಡಗಳೂ ಪೈಪೋಟಿಯಲ್ಲಿವೆ. ಅದಾನಿ ಸಮೂಹ, ಟಾರೆಂಟ್ ಸಮೂಹ, ಹಲ್ದೀರಾಮ್ಸ್ ಪ್ರಭುಜಿ, ಕ್ಯಾಪ್ರಿ ಗ್ಲೋಬಲ್, ಕೋಟಕ್ ಆಯಂಡ್ ಆದಿತ್ಯ ಬಿರ್ಲಾ ಸಮೂಹವೂ ತಂಡಗಳನ್ನು ಕೊಳ್ಳುವ ಉತ್ಸಾಹದಲ್ಲಿವೆ. ಎಲ್ಲ ಕುತೂಹಲಕ್ಕೂ ಬುಧವಾರ ನಡೆಯುವ ಹರಾಜಿನಲ್ಲಿ ತರೆ ಬೀಳಲಿದೆ.
ಇದನ್ನೂ ಓದಿ | WOMENS IPL | ಮಹಿಳೆಯರ ಐಪಿಎಲ್ ತಂಡ ಖರೀದಿಸಲು ಆಸಕ್ತಿ ತೋರಿದ 30 ಕಂಪನಿಗಳು