ಮುಂಬಯಿ: ಮಹಿಳೆಯರ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್(WOMENS IPL) ದೇಶೀಯ ಆಟಗಾರ್ತಿಯರಿಗೆ ಅತ್ಯುತ್ತಮ ವೇದಿಕೆ ಆಗಿದೆ ಎಂದು ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳಾ ಐಪಿಎಲ್ ಕುರಿತ ಪ್ರಶ್ನೆಗೆ ಉತ್ತರಿಸಿದ ಹರ್ಮನ್ಪ್ರೀತ್ ಕೌರ್, ಐಪಿಎಲ್ ನಿಜವಾಗಿಯೂ ಪ್ರತಿಭಾವಂತ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ. ಇದರಿಂದ ಯುವ ಆಟಗಾರ್ತಿಯರಿಗೆ ವಿದೇಶಿ ಆಟಗಾರರ ವಿರುದ್ಧ ಆಡುವ ಅವಕಾಶ ಸಿಗಲಿದೆ. ಇದರಿಂದ ಅವರ ಜತೆ ಹೆಚ್ಚಿನ ಕ್ರಿಕೆಟ್ ಸಲಹೆಗಳು ಪಡೆಯಬಹುದು. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿಯೂ ನೆರವಾಗುತ್ತದೆ” ಎಂದು ಕೌರ್ ಹೇಳಿದರು.
“ದೇಶೀಯ ತಂಡಗಳಿಂದ ದಿಢೀರ್ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಆಡುವಾಗ ಎಲ್ಲ ಆಟಗಾರರು ಒಮ್ಮೆ ಭಯ ಪಡುವುದು ಸಾಮನ್ಯ. ಆದರೆ ಐಪಿಎಲ್ ಕೂಟದಿಂದ ಈ ಭಯ ಮುಂದಿನ ದಿನಗಳಲ್ಲಿ ಇಲ್ಲದಂತಾಗುವ ನಂಬಿಕೆ ಇದೆ. ಏಕೆಂದರೆ ಇಲ್ಲಿ ವಿಶ್ವ ದರ್ಜೆಯ ಎಲ್ಲ ಶ್ರೇಷ್ಠ ಆಟಗಾರರ ಸಮ್ಮಿಲನವಾಗುತ್ತದೆ. ಆದ್ದರಿಂದ ಇದು ಕೂಟ ಒಂದು ರೀತಿಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದ ಅನುಭವವನ್ನೇ ನೀಡುತ್ತದೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಆಡಿದ ದೇಶಿಯ ಕ್ರಿಕೆಟ್ ಆಟಗಾರ್ತಿಯರು ಖಂಡಿತವಾಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಾಗ ಪ್ರಬುದ್ಧರಾಗಿರುತ್ತಾರೆ” ಎಂದು ಹರ್ಮನ್ಪ್ರೀತ್ ಕೌರ್ ಹೇಳಿದ್ದಾರೆ.
ಇದನ್ನೂ ಓದಿ | INDvsPAK | ಪಾಕಿಸ್ತಾನದ ರಾವಲ್ಪಿಂಡಿ ಪಿಚ್ ಕ್ರಿಕೆಟ್ ಆಟಕ್ಕೆ ಸೂಕ್ತವಾಗಿಲ್ಲ ಎಂದ ಮ್ಯಾಚ್ ರೆಫರಿ!