Site icon Vistara News

WOMEN’S T20 RANKINGS: ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ ಹರ್ಮನ್‌ಪ್ರೀತ್‌, ಶಫಾಲಿ

WOMEN'S T20 RANKINGS

WOMEN'S T20 RANKINGS: Harmanpreet Kaur Moves To 12th, Shafali Verma 15th In ICC T20 Rankings

ದುಬೈ: ಟೀಮ್​ ಇಂಡಿಯಾದ ಮಹಿಳಾ ಕ್ರಿಕೆಟ್​ ಆಟಗಾರ್ತಿಯರಾದ ಶಫಾಲಿ ವರ್ಮ(Shafali Verma) ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ನೂತನ ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ(WOMEN’S T20 RANKINGS) ಉತ್ತಮ ಪ್ರಗತಿ ಸಾಧಿಸಿದ್ದಾರೆ. ಕೌರ್‌ 3 ಸ್ಥಾನ ಮೇಲೇರಿದ್ದು, 12ನೇ ರ್‍ಯಾಂಕ್‌ ಗಳಿಸಿದ್ದಾರೆ. ಆರಂಭಿಕ ಆಟಗಾರ್ತಿ ಶಫಾಲಿ ವರ್ಮ 2 ಸ್ಥಾನಗಳ ಪ್ರಗತಿ ಸಾಧಿಸಿ 15ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲ್ಯಾಂಡ್‌ನ‌ ಅಮೇಲಿಯಾ ಕೆರ್‌ ಮತ್ತು ಇಂಗ್ಲೆಂಡ್‌ನ‌ ಡೇನಿಯಲ್‌ ವ್ಯಾಟ್‌ ಕೂಡ ಶಫಾಲಿ ಜತೆ 15ನೇ ಸ್ಥಾನದಲ್ಲಿದ್ದಾರೆ. ಸ್ಮೃತಿ ಮಂಧನಾ 5ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ದೀಪ್ತಿ ಶರ್ಮ ತೃತೀಯ ಸ್ಥಾನ, ರಾಧಾ ಯಾದವ್‌ ಬರೋಬ್ಬರಿ 8 ಸ್ಥಾನಗಳ ಜಿಗಿತದೊಂದಿಗೆ 15ನೇ ಸ್ಥಾನ, 6 ಸ್ಥಾನಗಳ ಪ್ರಗತಿ ಸಾಧಿಸಿದ ಪೂಜಾ ವಸ್ತ್ರಾಕರ್‌ 23ನೇ, ಕನ್ನಡತಿ ಶ್ರೇಯಾಂಕಾ ಪಾಟೀಲ್‌(Shreyanka Patil) 9 ಸ್ಥಾನಗಳ ಪ್ರಗತಿಯೊಂದಿಗೆ 60ನೇ ಸ್ಥಾನದಲ್ಲಿದ್ದಾರೆ.

ಜುಲೈ 19 ರಿಂದ 28 ರವರೆಗೆ ನಡೆಯುವ ಮಹಿಳಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಭಾರತ ಈಗಾಗಲೇ ಅಭ್ಯಾಸ ಆರಂಭಿಸಿದೆ. ಟಿ20 ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಆಗಿರುವ ಭಾರತವೇ ಈ ಬಾರಿಯೂ ಕಪ್​ ಗೆಲ್ಲುವ ಫೇವರಿಟ್ ಆಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಲ್ಲಿ ಎಲ್ಲ ಆಟಗಾರ್ತಿಯರು ಉತ್ತಮ ಪ್ರದರ್ಶನ ತೋರಿದ್ದರು. ಏಷ್ಯಾ ಕಪ್​ನಲ್ಲಿಯೂ ಇದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಮಲೇಷ್ಯಾ, ಥೈಲ್ಯಾಂಡ್, ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ‘ಎ’ ಗುಂಪಿನಲ್ಲಿ ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಭಾರತ ತಂಡ ಜುಲೈ 19ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜುಲೈ 21 ಮತ್ತು 23ರಂದು ಕ್ರಮವಾಗಿ ಯುಎಇ ಮತ್ತು ನೇಪಾಳ ವಿರುದ್ಧ ಸೆಣಸಲಿದೆ.

ಭಾರತ ತಂಡ:


ಹರ್ಮನ್​​ಪ್ರೀತ್​ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಂಕಾ ಪಾಟೀಲ್, ಸಜನಾ ಸಜೀವನ್.

ಮೀಸಲು ಆಟಗಾರರು: ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್, ಮೇಘನಾ ಸಿಂಗ್

ಭಾರತದ ಪಂದ್ಯಗಳ ವೇಳಾಪಟ್ಟಿ

ಜುಲೈ19ರಂದು , ಭಾರತ-ಪಾಕಿಸ್ತಾನ, ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ, ಡಂಬುಲ್ಲಾ
ಜುಲೈ 21ರಂದು, ಭಾರತ-ಯುಎಇ, ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ, ಡಂಬುಲ್ಲಾ
ಜುಲೈ 23 ರಂದು , ಭಾರತ-ನೇಪಾಳ, ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ, ಡಂಬುಲ್ಲಾ

Exit mobile version