ದುಬೈ: ಐಸಿಸಿ ಮಹಿಳೆಯರ ನೂತನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಜೀವನಶ್ರೇಷ್ಠ ಪ್ರಗತಿ ಕಂಡಿದ್ದಾರೆ. ಜತೆಗೆ ಸ್ಮೃತಿ ಮಂಧಾನಾ ತೃತೀಯ ಸ್ಥಾನ ಕಾಯ್ದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ವನಿತೆಯ ಟಿ20 ವಿಶ್ವ ಕಪ್ನಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಜೆಮಿಮಾ ರೋಡ್ರಿಗಸ್ 12ನೇ ಸ್ಥಾನಕ್ಕೆ ಏರಿದ್ದಾರೆ. ಮೊದಲ 3 ಪಂದ್ಯಗಳಲ್ಲಿ ಅಜೇಯವಾಗಿ ಉಳಿದು, ಕ್ರಮವಾಗಿ 31, 44 ಮತ್ತು 47 ರನ್ ಮಾಡಿದ ತಂಡದ ಯುವ ಬ್ಯಾಟರ್ ರಿಚಾ ಘೋಷ್ 20ನೇ ಸ್ಥಾನದಲ್ಲಿದ್ದಾರೆ. ಐರ್ಲೆಂಡ್ ವಿರುದ್ಧ ಮೊದಲ ಎಸೆತಕ್ಕೇ ಔಟಾದುದರಿಂದ ರಿಚಾ ಕೆಲವು ಅಂಕಗಳನ್ನು ಕಳೆದುಕೊಳ್ಳಬೇಕಾಯಿತು. ರಿಚಾ ಸದ್ಯ 572 ಅಂಕ ಹೊಂದಿದ್ದಾರೆ.
ಇನ್ನೊಂದೆಡೆ ಸೋಮವಾರ(ಫೆ.20) ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 87 ರನ್ ಗಳಿಸಿ ಭಾರತ ತಂಡದ ಗೆಲುವಿಗೆ ಕಾರಣವಾದ ಸ್ಮೃತಿ ಮಂಧಾನಾ ತೃತೀಯ ಸ್ಥಾನ ಕಾಯ್ದುಕೊಂಡಿದ್ದಾರೆ. ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ(10) ಮತ್ತು ಹರ್ಮನ್ಪ್ರೀತ್ ಕೌರ್(13) ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ ICC Ranking: ಏಕದಿನ ಬ್ಯಾಟಿಂಗ್ ಶ್ರೇಯಾಂಕ; 20 ಸ್ಥಾನಗಳ ಪ್ರಗತಿ ಕಂಡ ಶುಭಮನ್ ಗಿಲ್
ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲ್ಯಾಂಡ್‌ನ ಲೀ ಟಹುಹು ಜೀವನಶ್ರೇಷ್ಠ 7ನೇ ರ್‍ಯಾಂಕಿಂಗ್ ಪಡೆದಿದ್ದಾರೆ. ಅವರು ವಿಶ್ವಕಪ್ ಕೂಟದಲ್ಲಿ ಸರ್ವಾಧಿಕ 8 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಪಾಕಿಸ್ಥಾನದ ನಿದಾ ದಾರ್ ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ 5 ಸ್ಥಾನಗಳ ಪ್ರಗತಿ ಸಾಧಿಸಿದ್ದಾರೆ.