Site icon Vistara News

Women’s T20 World Cup 2024: ಟಿ20 ವಿಶ್ವ ಕಪ್‌ಗೆ ನೇರ ಅರ್ಹತೆ ಸಂಪಾದಿಸಿದ ಟೀಮ್‌ ಇಂಡಿಯಾ

Women's T20 World Cup 2024: Team India qualified directly

Women's T20 World Cup 2024: Team India qualified directly

ದುಬೈ: ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯ ಕಂಡ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ದಾಖಲೆ ಬರೆದಿದೆ. ಈ ಮಧ್ಯೆ ಐಸಿಸಿ 2024ರ ಮಹಿಳಾ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದ 8 ತಂಡಗಳನ್ನು ಪ್ರಕಟಿಸಿದೆ.

ಮಂಗಳವಾರ(ಫೆ.28) ಐಸಿಸಿ ಮುಂಬರುವ 2024ರ ಮಹಿಳಾ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದ ತಂಡಗ:ಳ ಪಟ್ಟಿಯನ್ನು ಬಿಡುಗಡೆಗೊಳಿಸಿತು. ಇದರಲ್ಲಿ ಭಾರತ ತಂಡವೂ ಅರ್ಹತೆ ಪಡೆದಿದೆ. ಮುಕ್ತಾಯ ಕಂಡ ಟಿ20 ವಿಶ್ವ ಕಪ್‌ನಲ್ಲಿ ಭಾರತ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಕೇವಲ 5 ರನ್‌ ಅಂತರದಿಂದ ಸೋಲು ಕಂಡು ನಿರಾಸೆ ಅನುಭವಿಸಿತ್ತು.

ಮಹಿಳಾ ಟಿ20 ವಿಶ್ವ ಕಪ್‌ 10 ತಂಡಗಳ ಟೂನಿಯಾಗಿದ್ದು ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ನೇರವಾಗಿ ಸ್ಥಾನವನ್ನು ಪಡೆಯುತ್ತದೆ. ಅಲ್ಲದೆ ಅಗ್ರ 6 ತಂಡಗಳನ್ನು ಹೊರತುಪಡಿಸಿ ಉಳಿದವುಗಳ ಪೈಕಿ ಅಗ್ರ ತಂಡ ಹಾಗೂ ಆತಿಥೇಯ ತಂಡ ನೇರವಾಗಿ ಅರ್ಹತೆಯನ್ನು ಪಡೆಯುತ್ತದೆ. ಹೀಗಾಗಿ ಈ ಬಾರಿಯ ವಿಶ್ವ ಕಪ್‌ನ ಮೊದಲನೇ ಗುಂಪಿನ ತಂಡಗಳ ಪೈಕಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿದೆ.

ಇದನ್ನೂ ಓದಿ Women’s T20 World Cup: ಅಂದು ಧೋನಿ, ಇಂದು ಕೌರ್​ ರನೌಟ್​; ಮತ್ತೊಮ್ಮೆ ಸೆಮಿಯಲ್ಲಿ ಎಡವಿದ ಭಾರತ

ಎರಡನೇ ಗುಂಪಿನಲ್ಲಿ ಇಂಗ್ಲೆಂಡ್ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಪಡೆದುಕೊಂಡಿದೆ. ಪಾಕಿಸ್ತಾನ ತಂಡ ಕೂಡ ನೇರವಾಗಿ ಅರ್ಹತೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಳಿದ ಎರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವ ಕಪ್‌ಗೆ ಅರ್ಹತೆಯನ್ನು ಸಂಪಾದಿಸಲಿದೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಶ್ರೀಲಂಕಾ ಹಾಗೂ ಐರ್ಲೆಂಡ್ ತಂಡಗಳು ನೇರವಾಗಿ ಅರ್ಹತೆ ಪಡೆಯಲು ವಿಫಲವಾಗಿದೆ. ಶ್ರೀಲಂಕಾ 8ನೇ ಸ್ಥಾನವನ್ನು ಪಡೆದುಕೊಂಡಿದ್ದರೆ ಐರ್ಲೆಂಡ್ 10ನೇ ಸ್ಥಾನವನ್ನು ಪಡೆದುಕೊಂಡಿದೆ. ಸದ್ಯ ಉಭಯ ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಿ ಸ್ಥಾನ ಪಡೆಯಬೇಕಿದೆ.

Exit mobile version