ಕೇಪ್ಟೌನ್: ಆಸ್ಟ್ರೇಲಿಯಾ ವಿರುದ್ಧದ ವನಿತಾ ಟಿ20 ವಿಶ್ವ ಕಪ್ ಸೆಮಿ ಫೈನಲ್(Women’s T20 World Cup) ಪಂದ್ಯವನ್ನಾಡಲು ಸಜ್ಜಾಗಿದ್ದ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ವೇಗಿ ಪೂಜಾ ವಸ್ತ್ರಾಕರ್ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು(ಫೆ.23 ಗುರುವಾರ) ನಡೆಯುವ ಮಹತ್ವದ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಹರ್ಮನ್ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಕಾರ್ ಅವರನ್ನು ಕೇಪ್ಟೌನ್ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಂಜೆ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ Women’s T20 World Cup: ಆಸ್ಟ್ರೇಲಿಯಾವನ್ನು ಮಣಿಸಲು ದೊಡ್ಡ ಮೊತ್ತ ಅಗತ್ಯ; ರಿಚಾ ಘೋಷ್
ಉಭಯ ಆಟಗಾರರು ಆಸೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯದಿದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೊಂದೆಡೆ ರಾಧಾ ಯಾದವ್ ಕೂಡ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ ಅವರನ್ನು ಆಡಿಸಿದರೆ ಅವರ ಫಿಟ್ನೆಸ್ ಹೇಗಿರಲಿದೆ ಎನ್ನುವುದು ಕೂಡ ಚಿಂತೆಗೀಡು ಮಾಡಿದೆ. ಒಂದೊಮ್ಮೆ ಕೌರ್ ಈ ಪಂದ್ಯದಲ್ಲಿ ಆಡದಿದ್ದರೆ ಸ್ಮೃತಿ ಮಂಧಾನಾ ತಂಡದ ನಾಯಕತ್ವ ವಹಿಸಲಿದ್ದಾರೆ. ಒಟ್ಟಾರೆ ಭಾರತಕ್ಕೆ ಸೆಮಿ ಪಂದ್ಯ ಆಡುವ ಮೊದಲೇ ಆಘಾತವೊಂದು ಎದುರಾಗಿರುವುದು ವಿಪರ್ಯಾಸವೇ ಸರಿ.