Site icon Vistara News

Women’s T20 World Cup: ಆಸ್ಟ್ರೇಲಿಯಾವನ್ನು ಮಣಿಸಲು ದೊಡ್ಡ ಮೊತ್ತ ಅಗತ್ಯ; ರಿಚಾ ಘೋಷ್​

Women's T20 World Cup: Big sum needed to defeat Australia; Richa Ghosh

Women's T20 World Cup: Big sum needed to defeat Australia; Richa Ghosh

ಕೇಪ್​ಟೌನ್: ಗುರುವಾರ(ಫೆ.23) ನಡೆಯಲಿರುವ ಮಹಿಳಾ ಟಿ20 ವಿಶ್ವ ಕಪ್(Women’s T20 World Cup)​ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಬೇಕಿದ್ದರೆ ಭಾರತ ಕನಿಷ್ಠ 180ರನ್‌ ಗಳಿಸಬೇಕಿದೆ ಎಂದು ಟೀಮ್​ ಇಂಡಿಯಾದ ಸ್ಫೋಟಕ ಬ್ಯಾಟರ್​ ರಿಚಾ ಘೋಷ್‌(Richa Ghosh) ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ. ಟೂರ್ನಿಯಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಅಜೇಯವಾಗಿದೆ. ಹೀಗಾಗಿ ನಾವು ದೊಡ್ಡ ಮೊತ್ತವನ್ನು ಪೇರಿಸೇಕಿದೆ ಎಂದು ರಿಚಾ ಘೋಷ್‌ ಹೇಳಿದರು.

ಆಸೀಸ್​ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿದೆ. ಜತೆಗೆ ತಂಡದ ಎಲ್ಲ ಆಟಗಾರ್ತಿಯರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಅಕಸ್ಮಾತ್‌ ನಮಗೆ ಮೊದಲು ಬ್ಯಾಟಿಂಗ್‌ ಲಭಿಸಿದರೆ ನಮ್ಮ ಯೋಜನೆಯಂತೆ ಬ್ಯಾಟಿಂಗ್‌ ನಡೆಸಿ ದೊಡ್ಡ ಮೊತ್ತ ದಾಖಲಿಸುವ ಮೂಲಕ ಒತ್ತಡ ಹೇರಲಿದ್ದೇವೆ ಎಂದು ರಿಚಾ ಘೋಷ್‌ ಹೇಳಿದ್ದಾರೆ.

ಇದನ್ನೂ ಓದಿ Women’s T20 World Cup 2023 Semi Final: ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್​ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ಆಸ್ಟ್ರೇಲಿಯ ಕಳೆದ 22 ತಿಂಗಳ ಅವಧಿಯಲ್ಲಿ ಕೇವಲ ಒಂದು ಪಂದ್ಯದಲ್ಲಷ್ಟೇ ಸೋತಿದೆ. ಇದು ಕೂಡ ನಮ್ಮ ತಂಡದ ವಿರುದ್ದ. ಕಳೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಗೆಲುವಿನಂಚಿನವರೆಗೆ ಸಾಗಿ ಸಣ್ಣ ಅಂತರದಿಂದ ಸೋಲು ಕಂಡಿದ್ದೇವೆ ಆದ್ದರಿಂದ ಈ ಬಾರಿ ಆಸೀಸ್​ ತಂಡವನ್ನು ಕಟ್ಟಿಹಾಕುವ ವಿಶ್ವಾಸವಿದೆ ಎಂದು ರಿಚಾ ಘೋಷ್​ ಹೇಳಿದರು.

Exit mobile version