Site icon Vistara News

Womens T20 World Cup | ವನಿತಾ ಟಿ20 ವಿಶ್ವ ಕಪ್​ಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಶಿಖಾ ಪಾಂಡೆ!

shikha pandey

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 10 ರಿಂದ ಆರಂಭವಾಗಲಿರುವ ವನಿತಾ ಟಿ20 ವಿಶ್ವ ಕಪ್‌(Womens T20 World Cup) ಪಂದ್ಯಾವಳಿಗಾಗಿ ಭಾರತ ತಂಡ ಪ್ರಕಟಗೊಂಡಿದೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದರೆ, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ.

ತಂಡದಲ್ಲಿ ಕೆಲವೊಂದು ಅಚ್ಚರಿಯ ಆಯ್ಕೆ ಕೂಡ ನಡೆದಿದ್ದು ಕಳೆದ ಐಸಿಸಿ ಮಹಿಳಾ ಏಕ ದಿನ ಕ್ರಿಕೆಟ್‌ ವಿಶ್ವ ಕಪ್‌ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಜೆಮಿಮಾ ರೋಡ್ರಿಗಸ್‌ ಟಿ20 ವಿಶ್ವ ಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜತೆಗೆ ಅನುಭವಿ ಪೇಸ್‌ ಬೌಲರ್‌ ಶಿಖಾ ಪಾಂಡೆ ತಂಡಕ್ಕೆ ಮರಳಿದ್ದಾರೆ. 2021ರ ಅಕ್ಟೋಬರ್‌ ಬಳಿಕ ಅವರು ಭಾರತ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಮಹಿಳಾ ಟಿ20 ವಿಶ್ವ ಕಪ್​ ಟೂರ್ನಿ ಫೆ. 10ರಿಂದ 26ರ ತನಕ ನಡೆಯಲಿದೆ.

ಭಾರತ ತಂಡ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮ, ಯಾಸ್ತಿಕಾ ಭಾಟಿಯ, ರಿಚಾ ಘೋಷ್‌, ಜೆಮಿಮಾ ರೋಡ್ರಿಗಸ್‌, ಹಲೀನ್‌ ದೇವಲ್‌, ದೀಪ್ತಿ ಶರ್ಮ, ದೇವಿಕಾ ವೈದ್ಯ, ರಾಧಾ ಯಾದವ್‌, ರೇಣುಕಾ ಠಾಕೂರ್‌, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್‌, ರಾಜೇಶ್ವರಿ ಗಾಯಕ್ವಾಡ್‌, ಶಿಖಾ ಪಾಂಡೆ.

ಇದನ್ನೂ ಓದಿ | INDvsSL | ಲಂಕಾ ಸರಣಿಗೆ ಭಾರತ ತಂಡ ಪ್ರಕಟ, ಒಡಿಐನಲ್ಲಿ ರಾಹುಲ್​ಗೆ ಚಾನ್ಸ್​, ರೋಹಿತ್​ ವಾಪಸ್​

Exit mobile version