Site icon Vistara News

Women’s T20 World Cup: ಶ್ರೀಲಂಕಾ ವಿರುದ್ಧ ಮೂರು ರನ್​ ಅಂತರದಿಂದ ಸೋಲು ಕಂಡ ದಕ್ಷಿಣ ಆಫ್ರಿಕಾ

South Africa Women vs Sri Lanka Women

#image_title

ಕೇಪ್​ಟೌನ್​: ಇಲ್ಲಿ ನಡೆಯತ್ತಿರುವ ವನಿತೆಯರ ಟಿ20 ವಿಶ್ವ ಕಪ್​ನ(Women’s T20 World Cup) ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಮೂರು ರನ್​ಗಳ ಅಂತರದಿಂದ ಸೋಲು ಕಂಡಿದೆ. ಲಂಕಾ ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಶುಕ್ರವಾರ(ಫೆ.10) ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 129 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 9 ವಿಕೆಟ್​ಗೆ 126 ರನ್​ಗಳಿಸಿ ಸೋಲು ಕಂಡಿತು.

ಲಂಕಾ ಪರ ಮಿಂಚಿದ ನಾಯಕಿ ಚಾಮರಿ ಅಟಪಟ್ಟು 68ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟು 50 ಎಸೆತ ಎದುರಿಸಿದ ಅಟಪಟ್ಟು 12 ಬೌಂಡರಿ ಬಾರಿಸಿದರು. ಇವರಿಗೆ ವಿಶ್ಮಿ ಗುಣರತ್ನೆ ಉತ್ತಮ ಸಾಥ್​ ನೀಡಿದರು. ವಿಶ್ಮಿ 35 ರನ್​ ಗಳಿಸಿದರು. ಈ ಇಬ್ಬರು ಆಟಗಾರ್ತಿಯರನ್ನು ಹೊರತು ಪಡಿಸಿ ಉಳಿದ ಯಾವ ಆಟಗಾರ್ತಿಯರೂ ಎರಡಂಕ್ಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಬೌಲಿಂಗ್​ನಲ್ಲಿ ಮಿಂಚಿದ ಲಂಕಾ ಆಟಗಾರ್ತಿಯರು ಪಂದ್ಯದಲ್ಲಿ ಹಿಡಿತ ಸಾಧಿಸಿದರು.

ಇದನ್ನೂ ಓದಿ Women’s T20 World Cup: ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕೆ ಸ್ಮೃತಿ ಮಂಧಾನಾ ಡೌಟ್​

ಸ್ಪಿನ್ನರ್‌ಗಳಾದ ಇನೋಕಾ ರಣವೀರ(3), ಓಷದಿ ರಣಸಿಂಗ್(2) ಮತ್ತು ಸುಗಂದಿಕಾ ಕುಮಾರಿ(2) ಮೂವರು ಸೇರಿ ಏಳು ವಿಕೆಟ್‌ಗಳನ್ನು ಪಡೆದರು. ಇವರ ಸ್ಪಿನ್‌ ದಾಳಿಗೆ ತತ್ತರಿಸಿದ ಹರಿಣಗಳು ಕೇವಲ ಮೂರು ರನ್‌ಗಳಿಂದ ಸೋಲು ಕಂಡರು. ದಕ್ಷಿಣ ಆಫ್ರಿಕಾ ಪರ ನಾಯಕಿ ಸುನೆ ಲೂಸ್ 28 ರನ್​ ಗಳಿಸಿದರು.

Exit mobile version