Site icon Vistara News

Women’s T20 World Cup: ವಿಂಡೀಸ್​ ಸವಾಲು ಎದುರಿಸಲು ಸಜ್ಜಾದ ಟೀಮ್​ ಇಂಡಿಯಾ

harmanpreet kaur

#image_title

ಕೇಪ್​ಟೌನ್: ಐಸಿಸಿ ಮಹಿಳೆಯರ ಟಿ20 ವಿಶ್ವ ಕಪ್​ನಲ್ಲಿ(Women’s T20 World Cup) ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಟೀಮ್ ಇಂಡಿಯಾ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಹರ್ಮನ್​ಪ್ರೀತ್​ ಕೌರ್​(harmanpreet kaur) ಪಡೆ ಇಂದು(ಫೆ.15) ವಿಂಡೀಸ್​ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಮುಂದಿನ ಹಾದಿಯನ್ನು ಸುಗಮಗೊಳಿಸುವುದು ಭಾರತದ ಯೋಜನೆಯಾಗಿದೆ.

ಬೆರಳಿನ ಗಾಯದಿಂದ ಚೇತರಿಕೆ ಕಾಣದ ಹಿನ್ನೆಲೆ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯದಿದ್ದ ಸ್ಟಾರ್‌ ಓಪನರ್‌ ಸ್ಮೃತಿ ಮಂಧಾನಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ 3.4 ಕೋಟಿ ರೂ. ದಾಖಲೆ ಮೊತ್ತಕ್ಕೆ ಆರ್​ಸಿಬಿ ತಂಡಕ್ಕೆ ಮಾರಾಟವಾದ ಖುಷಿಯಲ್ಲಿರುವ ಮಂಧಾನಾ ವಿಶ್ವ ಕಪ್‌ ಪಂದ್ಯಾವಳಿಯಲ್ಲಿ ಹೇಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಜೆಮಿಮಾ ರೋಡ್ರಿಗಸ್‌ ಮತ್ತು ರಿಚಾ ಘೋಷ್ ಅವರು ಸದ್ಯ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿರುವುದರಿಂದ ಭಾರತ ಬಲಿಷ್ಠವಾಗಿ ಗೋಚರಿಸಿದೆ. ಆದರೆ ಭಾರತದ ಬೌಲಿಂಗ್​ ವಿಭಾಗ ಸುಧಾರಣೆ ಕಾಣಬೇಕಿದೆ.​ ಪಾಕ್‌ ವಿರುದ್ಧ ದ್ವಿತೀಯಾರ್ಧದ 10 ಓವರ್‌ಗಳಲ್ಲಿ 91 ರನ್‌ ಬಿಟ್ಟುಕೊಟ್ಟದ್ದು ಬಹಳ ದುಬಾರಿ ಎನಿಸಿದೆ. ರೇಣುಕಾ ಸಿಂಗ್‌, ದೀಪ್ತಿ ಶರ್ಮ, ರಾಜೇಶ್ವರಿ ಗಾಯಕ್ವಾಡ್‌, ಪೂಜಾ ವಸ್ತ್ರಾಕರ್‌…ಎಲ್ಲರೂ ತಮ್ಮ ತಂತ್ರಗಾರಿಕೆಯನ್ನು ಮತ್ತಷ್ಟು ಬಲಪಡಿಸಬೇಕಿದೆ.

ವಿಂಡೀಸ್​ ಪಾಲಿಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಏಕೆಂದರೆ ಈಗಾಗಲೇ ಇಂಗ್ಲೆಂಡ್​ ವಿರುದ್ಧ ಸೋಲು ಕಂಡಿರುವುದರಿಂದ ಈ ಪಂದ್ಯದಲ್ಲಿ ಸೋತರೆ ನಾಕೌಟ್‌ ಪ್ರವೇಶದ ಆಸೆಯನ್ನು ಬಿಡಬೇಕಾಗುತ್ತದೆ.

ಪಂದ್ಯ ಆರಂಭ: ಸಂಜೆ. 6.30, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಸ್ಥಳ: ಕೇಪ್‌ ಟೌನ್‌

Exit mobile version