Site icon Vistara News

Womens T20 Tri-Series: ವನಿತಾ ಟಿ20 ತ್ರಿಕೋನ ಸರಣಿ: ಅಜೇಯ ಓಟ ಮುಂದುವರಿಸಿದ ಟೀಮ್ ಇಂಡಿಯಾ

smriti mandhana and harmanpreet kaur

ಈಸ್ಟ್‌ ಲಂಡನ್‌ (ದಕ್ಷಿಣ ಆಫ್ರಿಕಾ): ಮಹಿಳೆಯರ ಟಿ20 ತ್ರಿಕೋನ ಸರಣಿಯ ದ್ವಿತೀಯ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್​ ಪಡೆ ವೆಸ್ಟ್‌ ಇಂಡೀಸ್‌ ವಿರುದ್ಧ 56 ರನ್ನುಗಳ ಗೆಲುವು ದಾಖಲಿಸಿದೆ. ಈ ಮೂಲಕ ಮೊದಲ ಸುತ್ತಿನಲ್ಲಿ ಭಾರತ ಅಜೇಯವಾಗಿ ಉಳಿದಿದೆ. ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಟ್ಟಿಗೊಳಿಸಿದೆ.

ದಕ್ಷಿಣ ಆಫ್ರಿಕಾದ ಈಸ್ಟ್‌ ಲಂಡನ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 2 ವಿಕೆಟಿಗೆ 167 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌ 4 ವಿಕೆಟಿಗೆ 111 ರನ್​ಗೆ ಸರ್ವಪತನ ಕಂಡಿತು.

ಕೌರ್​-ಮಂಧಾನಾ ಭರ್ಜರಿ ಜತೆಯಾಟ

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೋಡಿ ಈ ಪಂದ್ಯದಲ್ಲಿ ಅಜೇಯ ಜತೆಯಾಟ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಜೋಡಿ 11.4 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ ಮುರಿಯದ 3ನೇ ವಿಕೆಟಿಗೆ 115 ರನ್‌ ಪೇರಿಸಿದರು. ಮಂಧಾನಾ 74 ರನ್‌ ಹೊಡೆದರು. 51 ಎಸೆತಗಳ ಈ ಆಕರ್ಷಕ ಆಟದಲ್ಲಿ 10 ಬೌಂಡರಿ ಹಾಗೂ ಇನ್ನಿಂಗ್ಸ್‌ನ ಏಕೈಕ ಸಿಕ್ಸರ್‌ ಒಳಗೊಂಡಿತ್ತು. ಕೌರ್​ ಅಜೇಯ 56 ರನ್​ ಸಿಡಿಸಿದರು.

ಶನಿವಾರ ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಸುತ್ತಿನಲ್ಲಿ ಸೆಣಸಲಿವೆ. ಇದಕ್ಕೂ ಮುನ್ನ ಬುಧವಾರ ದಕ್ಷಿಣ ಆಫ್ರಿಕಾ-ವೆಸ್ಟ್‌ ಇಂಡೀಸ್‌ ಮುಖಾಮುಖಿ ಆಗಲಿವೆ. ಇಲ್ಲಿ ವಿಂಡೀಸ್‌ ಗೆದ್ದರಷ್ಟೇ ಸರಣಿ ಜೀವಂತವಾಗಿ ಉಳಿಯಲಿದೆ.

ಸಂಕ್ಷಿಪ್ತ ಸ್ಕೋರ್‌:

ಭಾರತ: 2 ವಿಕೆಟಿಗೆ 167 (ಮಂಧಾನಾ ಔಟಾಗದೆ 74, ಕೌರ್‌ ಔಟಾಗದೆ 56, ಯಾಸ್ತಿಕಾ 18, ಕರಿಷ್ಮಾ ರಾಮರಾಕ್‌ 12ಕ್ಕೆ 1, ಶಾನಿಕಾ ಬ್ರೂಸ್‌ 25ಕ್ಕೆ 1).

ವೆಸ್ಟ್‌ ಇಂಡೀಸ್‌: 4 ವಿಕೆಟಿಗೆ 111 (ಶಿಮೇನ್‌ ಕ್ಯಾಂಬೆಲ್‌ 47, ಹ್ಯಾಲಿ ಮ್ಯಾಥ್ಯೂಸ್‌ ಔಟಾಗದೆ 34, ದೀಪ್ತಿ 29ಕ್ಕೆ 2, ರಾಧಾ 10ಕ್ಕೆ 1, ರಾಜೇಶ್ವರಿ 16ಕ್ಕೆ 1).

ಇದನ್ನೂ ಓದಿ | IND VS NZ: ಮೈದಾನದಲ್ಲೇ ಶಾರ್ದೂಲ್​ ಠಾಕೂರ್​ಗೆ ಕ್ಲಾಸ್​ ತೆಗೆದುಕೊಂಡ ರೋಹಿತ್​; ವಿಡಿಯೊ ವೈರಲ್​

Exit mobile version