Site icon Vistara News

Women’s U19 T20 World Cup: ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ಭಾರತಕ್ಕೆ ಸೂಪರ್​ ಗೆಲುವು

women's u19 t20 world cup

ಪೊಚೆಫ್ ಸ್ಟ್ರೂಮ್‌: ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳೆಯರ ಟಿ20 ವಿಶ್ವಕಪ್​ನ(Women’s U19 T20 World Cup)​ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.

‘ಎ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾಕ್ಕೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟಿಗೆ ಕೇವಲ 59 ರನ್‌ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಭಾರತ 7.2 ಓವರ್‌ಗಳಲ್ಲಿ 3 ವಿಕೆಟಿಗೆ 60 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಭಾರತ ತಂಡದ ಈ ಗೆಲುವಿಗೆ ಟೀಮ್​ ಇಂಡಿಯಾದ ಮಾಜಿ ಆಟಗಾರ್ತಿ ಮಿಥಾಲಿ ರಾಜ್​ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಭಾರತ ಪರ ಲೆಗ್‌ಸ್ಪಿನ್ನರ್‌ ಪಾರ್ಶವಿ ಚೋಪ್ರಾ ಅಮೋಘ ಪ್ರದರ್ಶನ ತೋರಿದರು. 4 ಓವರ್‌ಗಳಲ್ಲಿ ಒಂದು ಮೇಡನ್‌ ಸಹಿತ ಕೇವಲ 5 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕೆಡವಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಉಳಿದಂತೆ ಮನ್ನತ್‌ ಕಶ್ಯಪ್‌ 2 ವಿಕೆಟ್‌, ತಿತಾಸ್‌ ಸಾಧು ಮತ್ತು ಅರ್ಚನಾ ದೇವಿ ತಲಾ ಒಂದು ವಿಕೆಟ್‌ ಕಿತ್ತರು. ಆದರೆ ನಾಯಕಿ ಶಫಾಲಿ ವರ್ಮ(15) ಮತ್ತು ಶ್ವೇತಾ ಸೆಹ್ರಾವತ್‌(13) ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 20 ಓವರ್‌ಗಳಲ್ಲಿ 9 ವಿಕೆಟಿಗೆ 59 (ವಿಶ್ಮಿ ಗುಣರತ್ನೆ 25, ಉಮಯಾ ರತ್ನಾಯಕೆ 13, ಪಾರ್ಶವಿ ಚೋಪ್ರಾ 5ಕ್ಕೆ 4, ಮನ್ನತ್‌ ಕಶ್ಯಪ್‌ 16ಕ್ಕೆ 2).

ಭಾರತ: 7.2 ಓವರ್‌ಗಳಲ್ಲಿ 3 ವಿಕೆಟಿಗೆ 60 (ಸೌಮ್ಯಾ ತಿವಾರಿ ಔಟಾಗದೆ 28, ಶಫಾಲಿ ವರ್ಮ 15, ಶ್ವೇತಾ ಸೆಹ್ರಾವತ್‌ 13, ದೇವಿ¾ ವಿಹಂಗಾ 34ಕ್ಕೆ 3). ಪಂದ್ಯಶ್ರೇಷ್ಠ: ಪಾರ್ಶವಿ ಚೋಪ್ರಾ.

ಇದನ್ನೂ ಓದಿ | Womens U19 T20 World Cup | ಶ್ವೇತಾ, ಶಫಾಲಿ ಭರ್ಜರಿ ಬ್ಯಾಟಿಂಗ್​; ಭಾರತಕ್ಕೆ ಏಳು ವಿಕೆಟ್ ಜಯ

Exit mobile version