Site icon Vistara News

Women’s U19 T20 World Cup| ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಟೀಮ್​ ಇಂಡಿಯಾ!

Women's U19 T20 World Cup

ಬೆನೋನಿ: ಅಂಡರ್‌-19 ಮಹಿಳೆಯರ ಟಿ20 ವಿಶ್ವ ಕಪ್‌ನಲ್ಲಿ(Women’s U19 T20 World Cup) ಭಾರತ ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಬುಧವಾರ(ಜ.18) ನಡೆಯಲಿರುವ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ಸವಾಲು ಎದುರಿಸಲಿದೆ. ಈಗಾಗಲೇ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಸೂಪರ್‌-6 ಹಂತಕ್ಕೆ ಲಗ್ಗೆ ಇಟ್ಟಿರುವ ಶಫಾಲಿ ಪಡೆಗೆ ಇದು ಗುಂಪು ಹಂತದ ಕೊನೆಯ ಪಂದ್ಯವಾಗಿದೆ.

ಭಾರತ ಬಲಿಷ್ಠ

ಚೊಚ್ಚಲ ಆವೃತ್ತಿಯ ಈ ಟೂರ್ನಿಯಲ್ಲಿ ಭಾರತ ತಂಡ ಹೆಚ್ಚು ಬಲಿಷ್ಠವಾಗಿ ಗೋಚರಿಸಿದೆ. ತಂಡದ ನಾಯಕಿ “ಲೇಡಿ ಸೆಹವಾಗ್‌’ ಖ್ಯಾತಿಯ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಮತ್ತು ಉಪನಾಯಕಿ ಶ್ವೇತಾ ಸೆಹ್ರಾವತ್‌ ಸ್ಫೋಟಕ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿಯೂ ಉಭಯ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಶಫಾಲಿ ಬೌಲಿಂಗ್​ನಲ್ಲಿಯೂ ಮಿಂಚುತ್ತಿರುವುದು ತಂಡಕ್ಕೆ ಪ್ಲಸ್​ ಪಾಯಿಂಟ್.​ ಉಳಿದಂತೆ ರಿಚಾ ಘೋಷ್​ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಸಂಘಟಿತ ಪ್ರದರ್ಶನ ತೋರುತ್ತಿರುವ ಶಫಾಲಿ ಪಡೆ ಇದೀಗ ಮತ್ತೊಂದು ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ.

ಎದುರಾಳಿ ಸ್ಕಾಟ್ಲೆಂಡ್‌ ಆಡಿರುವ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡಿದೆ. ಆದರೂ ಇವರ ಸವಾಲನ್ನು ಕಡೆಗಣಿಸುವಂತಿಲ್ಲ. ಉಭಯ ತಂಡಗಳ ಈ ಪಂದ್ಯ ಸಂಜೆ 5.15 ಆರಂಭವಾಗಲಿದೆ.

ಇದನ್ನೂ ಓದಿ | Womens U19 T20 World Cup | ಶ್ವೇತಾ, ಶಫಾಲಿ ಭರ್ಜರಿ ಬ್ಯಾಟಿಂಗ್​; ಭಾರತಕ್ಕೆ ಏಳು ವಿಕೆಟ್ ಜಯ

Exit mobile version