ಪೊಚೆಫ್‌ಸ್ಟ್ರೂಮ್, (ದಕ್ಷಿಣ ಆಫ್ರಿಕಾ): ಐಸಿಸಿ ಅಂಡರ್-19 ವನಿತೆಯರ ಟಿ20 ವಿಶ್ವಕಪ್ನ (Women’s U19 T20 World Cup) ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ. ಉಭಯ ತಂಡಗಳ ಈ ಹೋರಾಟ ಶನಿವಾರ ನಡೆಯಲಿದೆ.
ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಉತ್ತಮ ಲಯದಲ್ಲಿರುವ ಶಫಾಲಿ ವರ್ಮಾ ಸಾರಥ್ಯ ಭಾರತ ತಂಡ ಈ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಆದರೆ ಆಸ್ಟ್ರೇಲಿಯಾದ ಸವಾಲನ್ನು ಕಡೆಗಣಿಸಬಾರದು. ಏಕೆಂದರೆ ಪ್ರಮುಖ ಪಂದ್ಯಗಳಲ್ಲಿ ಡಿಫರೆಂಟ್ ಗೇಮ್ ಆಡುವುದರಲ್ಲಿ ಈ ತಂಡ ಮೊದಲಿನಿಂದಲೂ ಹೆಸರುವಾಸಿ. ಹೀಗಾಗಿ ಎಚ್ಚರಿಕೆ ಆಟ ಅಗತ್ಯ.
“ಲೇಡಿ ಸೆಹವಾಗ್’ ಖ್ಯಾತಿಯ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಮತ್ತು ಉಪನಾಯಕಿ ಶ್ವೇತಾ ಸೆಹ್ರಾವತ್ ಮೇಲೆ ಈ ಪಂದ್ಯದಲ್ಲಿ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಉಭಯ ಆಟಗಾರ್ತಿಯರು ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಇದೇ ಪ್ರದರ್ಶನ ಆಸೀಸ್ ವಿರುದ್ಧವೂ ಕಂಡುಬಂದರೆ ಭಾರತಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ಉಳಿದಂತೆ ಬೌಲಿಂಗ್‌ನಲ್ಲಿ ಮನ್ನತ್ ಕಶ್ಯಪ್, ಅರ್ಚನಾ ದೇವಿ ಉತ್ತಮ ಲಯದಲ್ಲಿರುವುದು ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್.
ಇದನ್ನೂ ಓದಿ | Women’s IPL | ಮಹಿಳೆಯರ ಐಪಿಎಲ್ನಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ