ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನ(Women’s World Boxing Championships 2023) ಪ್ರಚಾರ ರಾಯಭಾರಿಗಳಾಗಿ ಬಾಕ್ಸರ್ ಮೇರಿ ಕೋಮ್ ಮತ್ತು ಬಾಲಿವುಡ್ ನಟ ಫರ್ಹಾನ್ ಅಖ್ತರ್(Farhan Akhtar) ಅವರು ನೇಮಕಗೊಂಡಿದ್ದಾರೆ. ಈ ಟೂರ್ನಿ ಬುಧವಾರದಿಂದ(ಮಾರ್ಚ್ 15) ಆರಂಭಗೊಳ್ಳಲಿದೆ.
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ಗೆ ಮೂರನೇ ಬಾರಿ ಆತಿಥ್ಯ ವಹಿಸುತ್ತಿರುವ ಭಾರತ ಈ ಟೂರ್ನಿಯನ್ನು ಯಶಸ್ವಿಯಾಗಿ ನಡೆಲು ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಟೂರ್ನಿಯ ಎಲ್ಲ ಪಂದ್ಯಗಳು ದೆಹಲಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಆಯೋಜನೆಯಾಗಿದೆ.
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಮ್ಯಾಸ್ಕಾಟ್ ‘ವೀರಾ’ ಅನಾವರಣ
ಈ ಟೂರ್ನಿಗಾಗಿ ಈಗಾಗಲೇ 74 ದೇಶಗಳ 350ಕ್ಕೂ ಹೆಚ್ಚು ಬಾಕ್ಸರ್‌ಗಳು ತಮ್ಮ ಹೆಸರನ್ನು ನಂದಾಯಿಸಿದ್ದಾರೆ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ. 12 ಭಾರತೀಯ ಬಾಕ್ಸರ್‌ಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.