ನವದೆಹಲಿ: ಭಾರತೀಯ ಬಾಕ್ಸಿಂಗ್ ಫೆಡರೇಶನ್ (BFI) ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್(Women’s World Boxing Championship) 2023ರ ಟೂರ್ನಿಗೆ ಮ್ಯಾಸ್ಕಾಟ್ ‘ವೀರಾ’ ಅನಾವರಣಗೊಳಿಸಿದೆ. ಮಾರ್ಚ್ 15 ರಿಂದ 26 ರವರೆಗೆ ಇಂದಿರಾಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಅವರ ಸಮ್ಮುಖದಲ್ಲಿ ಚೀತಾ ಎಂಬ ಹೆಸರಿನ ಮ್ಯಾಸ್ಕಾಟ್ ವೀರವನ್ನು ಅನಾವರಣಗೊಳಿಸಲಾಯಿತು. ಮ್ಯಾಸ್ಕಾಟ್ ವೀರ ಶಕ್ತಿ, ಶೌರ್ಯ, ಶೌರ್ಯ ಮತ್ತು ಧೈರ್ಯದ ಸಂಕೇತವಾಗಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
“ಯುವ ಬಾಕ್ಸರ್ಗಳಿಗೆ ಟೂರ್ನಿಯಲ್ಲಿ ವಿಶ್ವದ ದಿಗ್ಗಜ ಬಾಕ್ಸರ್‌ಗಳಿಂದ ಕಲಿಯುವ ಅವಕಾಶವಿರುತ್ತದೆ. ಭಾರತವು ಕ್ರೀಡಾ ಜಗತ್ತಿನಲ್ಲಿ ಶಕ್ತಿಯಾಗಿ ಬೆಳೆಯಲು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಪ್ರಯತ್ನಿಸುತ್ತಿದ್ದಾರೆ. ಬಾಕ್ಸಿಂಗ್ನಿಂದ ಕೊಡುಗೆ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಹೇಳಿದರು.
ಇದನ್ನೂ ಓದಿ CA Kuttappa: ಭಾರತ ಬಾಕ್ಸಿಂಗ್ ತಂಡದ ಕೋಚ್ ಸ್ಥಾನಕ್ಕೆ ಕುಟ್ಟಪ್ಪ ಮರು ನೇಮಕ
ಈ ವರೆಗೆ ಚಾಂಪಿಯನ್‌ಶಿಪ್‌ಗೆ 74 ದೇಶದಿಂದ ಮತ್ತು 12 ಭಾರತೀಯರು ಸೇರಿದಂತೆ ಒಟ್ಟು 350 ಬಾಕ್ಸರ್‌ಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.