ನವದೆಹಲಿ: ಮಹಿಳಾ ವಿಶ್ವ ಬಾಕ್ಸಿಂಗ್ ಟೂರ್ನಿ(Women’s World Boxing Championships) ಇಂದಿನಿಂದ(ಗುರುವಾರ ಮಾರ್ಚ್ 16) ದೆಹಲಿಯಲ್ಲಿ ಆರಂಭವಾಗಲಿದೆ. ಭಾರತದ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ ಮೇಲೆ ಪದಕ ಭರವಸೆ ಇರಿಸಲಾಗಿದೆ.
ನಿಖತ್ ಜರೀನ್ ಮತ್ತು ಲವ್ಲಿನಾ ಬೊರ್ಗೊಹೇನ್ ಇಬ್ಬರೂ ಇಲ್ಲಿ ಈ ಬಾರಿ ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ನಿಖತ್ ಜರೀನ್ 52 ಕೆಜಿಯಿಂದ 50 ಕೆಜಿ ವಿಭಾಗಕ್ಕೆ ಇಳಿದಿದ್ದಾರೆ. ಲವ್ಲಿನಾ 69 ಕೆಜಿ ವೆಲ್ಟರ್‌ವೆಟ್‌ನಿಂದ 75 ಕೆಜಿ ಮಿಡ್ಲ್ ವೇಟ್‌ಗೆ ಸ್ಪರ್ಧೆಯನ್ನು ಬದಲಿಸಿಕೊಂಡಿದ್ದಾರೆ.
ಇದನ್ನೂ ಓದಿ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್; ಮೇರಿ ಕೋಮ್, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ
ನೀತು ಗಂಘಾಸ್ (48 ಕೆಜಿ), ಮನೀಷಾ ಮೌನ್ (57 ಕೆಜಿ), ಸಾಕ್ಷಿ ಚೌಧರಿ (52 ಕೆಜಿ), ಪ್ರೀತಿ (54 ಕೆಜಿ), ಶಶಿ ಚೋಪ್ರಾ (63 ಕೆಜಿ), ಸನಮಚಾ ಚಾನು (70 ಕೆಜಿ) ಇವರು ಕೂಡ ಪದಕ ಭರವಸೆಯ ಬಾಕ್ಸರ್ಗಳಾಗಿ ಕಾಣಿಸಿಕೊಂಡಿದ್ದಾರೆ.