Site icon Vistara News

World Championships: ವಿಶ್ವ ಕುಸ್ತಿಗೆ ನೇರ ಪ್ರವೇಶವಿಲ್ಲ; ಅಡ್‌ಹಾಕ್‌ ಸಮಿತಿ ಖಡಕ್​ ನಿರ್ಧಾರ

Bajrang Punia

ನವದೆಹಲಿ: ಏಷ್ಯನ್‌ ಗೇಮ್ಸ್‌(Asian Games Trials)ಗೆ ನೇರ ಆಯ್ಕಯಾದ ಕುಸ್ತಿಪಟುಗಳು ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ(World Championships) ಸ್ಪರ್ಧಿಸಬೇಕಿದ್ದರೆ ಟ್ರಯಲ್ಸ್​ನಲ್ಲಿ(Wrestling trials) ಪಾಲ್ಗೊಳ್ಳಬೇಕೆಂದು ಭಾರತ ಒಲಿಂಪಿಕ್‌ ಸಮಿತಿಯ ಅಡ್‌ಹಾಕ್‌ ಸಮಿತಿ ಸ್ಪಷ್ಟಪಡಿಸಿದೆ. ಆಯ್ಕೆ ಟ್ರಯಲ್ಸ್​ ಆಗಸ್ಟ್​ 25 ಮತ್ತು 26 ರಂದು ಪಟಿಯಾಲದಲ್ಲಿ ನಡೆಯಲಿದೆ.

ಬೆಲ್‌ಗ್ರೇಡ್‌ನಲ್ಲಿ ಸೆಪ್ಟೆಂಬರ್​ 16 ರಿಂದ 24ರ ವರೆಗೆ ಈ ಟೂರ್ನಿ ನಡೆಯಲಿದೆ. ಈ ಹಿಂದೆ ಏಷ್ಯನ್​ ಗೇಮ್ಸ್​ಗೆ ಯಾವುದೇ ಟ್ರಯಲ್ಸ್ ಇಲ್ಲದೆ ವಿನೇಶ್​ ಫೋಗಟ್​ ಮತ್ತು ಬಜರಂಗ್​ ಪೂನಿಯ(Bajrang Punia and Vinesh Phogat) ಅವರಿಗೆ ನೇರ ಪ್ರವೇಶ ನೀಡಲಾಗಿತ್ತು. ನೇರ ಆಯ್ಕೆಯನ್ನು ಪ್ರಶ್ನಿಸಿ ಯುವ ಕುಸ್ತಿಪಟುಗಳು ಸದ್ಯ ಸುಪ್ರೀಂ ಕೋರ್ಟ್‌(supreme court) ಮೆಟ್ಟಿಲೇರಿದ್ದರು. ಇದೀಗ ವಿಶ್ವ ಚಾಂಪಿಯನ್​ಶಿಪ್​ಗೆ(world championships wrestling 2023) ಯಾರಿಗೂ ನೇರ ಪ್ರವೇಶ ನೀಡುವುದಿಲ್ಲ. ಎಲ್ಲ ಕುಸ್ತಿ ಪಟುಗಳು ಟ್ರಯಲ್ಸ್​ನಲ್ಲಿ ಭಾಗವಹಿಸಬೇಕು ಎಂದು ಭಾರತ ಒಲಿಂಪಿಕ್‌ ಸಮಿತಿಯ ಅಡ್‌ಹಾಕ್‌ ಸಮಿತಿ ತಿಳಿಸಿದೆ.

ಯಾರೆಲ್ಲ ಟ್ರಯಲ್ಸ್​ಗೆ ಅರ್ಹ

2022 ಮತ್ತು 2023 ರಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ, ಶ್ರೇಯಾಂಕ, ಏಷ್ಯನ್‌ ಹಾಗೂ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಪಾಲ್ಗೊಂಡವರು ಮತ್ತು ಪದಕ ಗೆದ್ದವರು ಜತೆಗೆ 2022ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದವರು ಈ ಟ್ರಯಲ್ಸ್​ನಲ್ಲಿ ಪಾಲ್ಗೊಳ್ಳಬಹುದು ಎಂದು ಅಡ್‌ಹಾಕ್‌ ಸಮಿತಿ ಹೇಳಿದೆ. ಆದರೆ ಯಾವುದೇ ಕಾರಣಕ್ಕೂ ಟ್ರಯಲ್ಸ್​ನಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ಅಡ್‌ಹಾಕ್‌ ಸಮಿತಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ Asian Games: ಏಷ್ಯಾಡ್​ಗೆ ಫುಟ್ಬಾಲ್​ ತಂಡ ಪ್ರಕಟ; ಸುನೀಲ್​ ಚೆಟ್ರಿ ಸಾರಥ್ಯ

ಒಲಿಂಪಿಕ್ಸ್​ ಅರ್ಹತೆಗೆ ಅವಕಾಶ

ಬೆಲ್‌ಗ್ರೇಡ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕುಸ್ತಿಪಟುಗಳಿಗೆ ಇದು ಮೊದಲ ಅವಕಾಶ ಎನಿಸಿಕೊಂಡಿದೆ. ಇಲ್ಲಿ ಗೆದ್ದ ಕುಸ್ತಿಪಟುಗಳು ನೇರವಾಗಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲಿದ್ದಾರೆ.

ಟ್ರಯಲ್ಸ್​ ಮುಂದೂಡಿಕೆ ಇಲ್ಲ

ಏಷ್ಯನ್​ ಗೇಮ್ಸ್​ ಕೂಡ ಈ ಟ್ರಯಲ್ಸ್​ ವೇಳೆಗೆ ನಡೆಯುವ ಕಾರಣದಿಂದ ಕೆಲ ಕುಸ್ತಿಪಟುಗಳು ಈ ಟ್ರಯಲ್ಸ್​ ಮುಂದೂಡಲು ಮನವಿ ಮಾಡಿದ್ದರು. ಆದರೆ ಇದು ಸಾಧ್ಯವಿಲ್ಲ ಎಂದು ಅಡ್‌ಹಾಕ್‌ ಸಮಿತಿ ಮುಖ್ಯಸ್ಥ ಭೂಪೇಂದರ್‌ ಸಿಂಗ್‌ ಬಾಜ್ವಾ ಹೇಳಿದ್ದಾರೆ. ‘ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿರುವುದರಿಂದ ಟ್ರಯಲ್ಸ್‌ ಇನ್ನಷ್ಟು ಮುಂದೂಡಲು ನಮಗೆ ಸಾಧ್ಯವಿಲ್ಲ. ಟ್ರಯಲ್ಸ್‌ ವಿಳಂಬವಾದರೆ ನಮ್ಮ ಕುಸ್ತಿಪಟುಗಳು ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೇ ಕಳೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.

ಏಷ್ಯನ್​ ಗೇಮ್ಸ್​ಗೆ ಭಾರತ ಕುಸ್ತಿ ತಂಡ

ಚೀನಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಷ್ಯನ್​ ಗೇಮ್ಸ್​ಗೆ ಭಾರತದ ಕುಸ್ತಿ ತಂಡ ಈಗಾಗಲೇ ಪ್ರಕಟಗೊಂಡಿದೆ. ಬಜರಂಗ್ ಪೂನಿಯಾ ಮತ್ತು ದೀಪಕ್ ಪೂನಿಯಾ ಭಾರತೀಯ ಪುರುಷರ ಕುಸ್ತಿ ತಂಡವನ್ನು ಮುನ್ನಡೆಸಲಿದ್ದಾರೆ.

ಪುರುಷರ ಫ್ರೀಸ್ಟೈಲ್ ತಂಡ

ಮಹಿಳಾ ಫ್ರೀಸ್ಟೈಲ್

Exit mobile version