Site icon Vistara News

World Cup 2023: ಕೇಂದ್ರದಿಂದ ತೆರಿಗೆ ವಿನಾಯಿತಿ ಸಿಗದೆ ಬಿಸಿಸಿಐಗೆ 963 ಕೋಟಿ ರೂ. ಹೊರೆ

World Cup 2023: BCCI gets Rs 963 crore without tax exemption from central government burden

World Cup 2023: BCCI gets Rs 963 crore without tax exemption from central government burden

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿ(World Cup 2023) ಅಕ್ಟೋಬರ್​ 5 ರಿಂದ ಆರಂಭವಾಗಲಿದೆ ಎಂದು ಈಗಾಗಲೇ ವರದಿಯಾಗಿದೆ. ಈ ಟೂರ್ನಿಗಾಗಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ಸರ್ಕಾರದಿಂದ(Government of India) ತೆರಿಗೆ ವಿನಾಯಿತಿ ಕೋರಿತ್ತು. ಆದರೆ ಇದಕ್ಕೆ ಸರ್ಕಾರ ಸಮ್ಮತಿಸಿಲ್ಲ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರದ ವತಿಯಿಂದ ತೆರಿಗೆ ವಿನಾಯಿತಿ ದೊರೆಯದ ಕಾರಣದಿಂದಾಗಿ ಬಿಸಿಸಿಐ 963 ಕೋಟಿ ರೂ. ತೆರಿಗೆ ಪಾವತಿಸಬೇಕಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಈ ಬಾರಿಯ ವಿಶ್ವಕಪ್​ ಬಲು ದುಬಾರಿಯಾಗಲಿದೆ. ಬಿಸಿಸಿಐ ಈ ನಷ್ಟವನ್ನು ಟಿಕೆಟ್ ದರ ಹೆಚ್ಚಳ​ ಹಾಗೂ ಪ್ರಸಾರದ ಹಕ್ಕಿನ ಮೊತ್ತವನ್ನು ಅಧಿಕಗೊಳಿಸುವ ಮೂಲಕ ವಸೂಲಿ ಮಾಡುವ ಯೋಜನೆಯಲ್ಲಿದೆ.

ಇದನ್ನೂ ಓದಿ World Cup 2023: ಅಕ್ಟೋಬರ್​ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್‌ ಆರಂಭ; ನವೆಂಬರ್​ 19ಕ್ಕೆ ಫೈನಲ್‌!

ಮೂಲಗಳ ಪ್ರಕಾರ, ಬಿಸಿಸಿಐ ಕೇಂದ್ರ ಸರ್ಕಾರಕ್ಕೆ 963 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದೆ. ಇದಾದ ಬಳಿಕವೇ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡುತ್ತದೆ. ಇನ್ನೊಂಡೆದೆ ಯಾವುದೇ ದೇಶಗಳು ಪ್ರಮುಖ ಟೂರ್ನಿ ಆಯೋಜಿಸಿದಾಗ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಯಿಂದ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ ಈ ಬಾರಿ ಬಿಸಿಸಿಐ ಮತ್ತು ಐಸಿಸಿ ಮಧ್ಯೆ ನಡೆಯುತ್ತಿರುವ ತಿಕ್ಕಾಟದಿಂದಾಗಿ ಐಸಿಸಿ ಕಡೆಯಿಂದ ತೆರಿಗೆ ವಿನಾಯಿತಿ ಸಿಗುವುದು ಅನುಮಾನವಿದೆ. ಇದಕ್ಕಾಗಿ ಐಸಿಸಿ ಸೆಂಟ್ರಲ್ ಪೂಲ್​ನಿಂದ ಪಡೆದ ಮೊತ್ತದಲ್ಲಿ ಬಿಸಿಸಿಐ ಸುಮಾರು 200 ಕೋಟಿ ರೂ. ನಷ್ಟ ಅನುಭವಿಸಬೇಕಾಗಿದೆ.

Exit mobile version